ಕಾವ್ಯಯಾನ
ಎರಡು ಲಾಕ್ ಡೌನ್ ಕವಿತೆಗಳು ಶ್ರೀದೇವಿ ಕೆರೆಮನೆ ಮಾತು ಮುಗಿದ ಹೊತ್ತಲ್ಲಿ ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ ನಾನು ಫೋನು ಕೈಗೆತ್ತಿಕೊಂಡೆ ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ ಒಂದಿಷ್ಟು ಜೀವ ತುಂಬಲು ಯಾವುದೋ ಹಳೆ ನೆನಪುಗಳ ಹೆಕ್ಕಿ ಪೋಣಿಸುತ್ತ ಮಾಲೆ ಮಾಡಿದರೂ ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ ಅರ್ಥವಿಲ್ಲದ ನೀರಸ ಮಾತುಗಳ ಆಡುವುದಾದರೂ ಅದೆಷ್ಟು ಸಮಯ ? ಹತ್ತೇ ನಿಮಿಷಗಳಲ್ಲಿ ಮಾತು ಸೋತು ಅಲ್ಲಿಯೂ ಅಂತರ ಇಣುಕಿ ವ್ಯರ್ಥ ಪ್ರಲಾಪವೆನಿಸಿದಾಗ ಮತ್ತದೇ ಅಂತರ […]
ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ
ಬುದ್ಧನಾಗಲಾರೆ…. ನಾಗರಾಜ ಹರಪನಹಳ್ಳಿ ಗಾಳಿಯ ಮುಗಿಲಲ್ಲಿ ತೇಲಿದ ಮೋಡಗಳು ಒಲವಿನ ಸರಿಗಮ ಹಾಡಿದವು ದೂರದಲ್ಲಿದ್ದು ನೀನಾಡಿದ ಮಾತುಗಳು ಮನದಲ್ಲಿ ಪ್ರೇಮ ಪಲ್ಲವಿಯಾದವು ಸಿದ್ಧಾರ್ಥನಾಗಿಯೇ ಉಳಿಯುವೆ ಬುದ್ಧನಾಗಲಾರೆ…. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷದ ಬೆನ್ನು ಹತ್ತಲಾರೆ ಬುದ್ಧನಾಗಲಾರೆ ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ!! ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಡುವುದೆಂದರೇನು? ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ? ಗರ್ಭದಲ್ಲಿ ಕೋಶ ಬೆಳೆದಂತೆ ತನ್ನದೇ ಜೀವಕೋಶದ ಆಶ್ರಯದಿ ರಕ್ತಮಾಂಸವ ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ? ಮೋಕ್ಷದ […]
ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ
ವಿಶ್ವವೇ….ಶರಣು.. ಶಿವಲೀಲಾ ಹುಣಸಗಿ ಯಾವ ಅಮೃತ ಗಳಿಗೆಯೋ ನಾ ಕಾಣೇ.. ಅರಿವಿನ ಕ್ಷೀತಿಜದೊಳು… ಶಶಿಯುದಯಿಸಿದಾ ಕ್ಷಣದೊಳು ಹೊಸದೊಂದು ಹುರುಪು,ನವೋಲ್ಲಾಸದ ಸುಖ ತಾರೆಯದಿಪತಿಗೆ ಸವಾಲಾಗುವ ಕ್ಷಣಗಳು.. ಬಯಸಿದ್ದೊಂದು…ಆಗುವುದೊಂದು.. ಸುಖಾತೀತ ಭಾವಗಳೆಲ್ಲ..ಮರಿಚೀಕೆಯಾಗಿಂದು ಮುಳ್ಳಿನ ಸೊಲ್ಲುಗಳಿಗೊಂದಂದು ಎಕ್ಕೆಹಾಲನೇರೆವಂತೆ…ಸೂಸಿದ ಹನಿಗಳು.. ಯ್ಯಾರು ಕಾಡಲಿಲ್ಲ,.ಬೇಡಲಿಲ್ಲ ನಿನ್ನೆದೆಗೆ ಇರಿಯಲಿಲ್ಲ ಆದರೂ ಹೃದಯ ಕೇಳಲಿಲ್ಲ..ಬಣ್ಣಗಳೆಲ್ಲ ಮಾಸಿದಂತೆ.. ಬರಸಿಡಿಲು ಬಡಿದಂತೆ..ಏಕಾಏಕೀ..ಚಿತ್ತ ಹೊರಟಂತೆ.. ಕಂಗಳಿಗೆ ಬರೀ….ಮಿಂಚುಗಳು ಆರ್ಭಟದಂತೆ.. ಯ್ಯಾರು ಕರೆದರೋ…? ಯ್ಯಾರು ಬಂದರೋ.? ನಡುರಾತ್ರಿ ಶ್ವೇತಾಶ್ವಗಳ ರಥವೇರಿ ಮೌನ ನಡಿಗೆಯ ಬೀರಿ ಕಾಮದಮಲು ಕರಗಿತ?…ಕೂಸಿನ ಹಂಬಲ ತೀರಿತೇ.? ಎದೆಗಂಟಿದ ಬೆವರಹನಿಗಳು. […]
ಬುದ್ಧ ಪೂರ್ಣಿಮಾ ವಿಶೇಷ-ಕವಿತೆ
ಬುದ್ಧನಾಗದೇ ನಿನ್ನ ಗ್ರಹಿಸಲಾರೆ ಡಾ.ಗೋವಿಂದ ಹೆಗಡೆ ನಾನು ಕೇವಲ ಮನುಷ್ಯ. ಮಾನುಷ ಅನುಭವಗಳ ಬಗ್ಗೆ ಹೇಳಬಲ್ಲೆ ಅವ ಎತ್ತರ ಇವ ಕುಳ್ಳು ಇವ ಜಾಣ ಅವ ದಡ್ಡ ಅವನೋ ಕ್ರೂರಿ ಇವ ದಯಾಮಯಿ- ಹೀಗೆ ದೈವಿಕ ಅನುಭವಗಳ ಒರೆಗೆ ಹಚ್ಚಲಿ ಹೇಗೆ ‘ನಾವು ಮನುಷ್ಯರಾಗಿ ಬಂದಿಲ್ಲ ಮನುಷ್ಯರಾಗಲು ಬಂದಿದ್ದೇವೆ’ ಅನ್ನುತ್ತಾರೆ ‘ನಾವು ಮನುಷ್ಯರಾಗಿ ದೈವಿಕತೆಯನ್ನು ಹುಡುಕುತ್ತಿಲ್ಲ, ದಿವಿಜರೇ ಆಗಿದ್ದು ಮಾನುಷ ಅನುಭವ -ವನ್ನು ಹಾಯುತ್ತಿದ್ದೇವೆ’ ಎಂಬ ಮತವೂ ಇದೆ ನನಗೆ ಎರಡೂ ಅರಿವಿಗೆ ದಕ್ಕದೆ… ನೀನು ದೈವತ್ವದ […]
ಬುದ್ಧ ಪೂರ್ಣಿಮಾ ವಿಶೇಷ-ಕವಿತೆ
ಅರಿವೇ ಅಷ್ಟಾಂಗ ಶೃತಿ ಮೇಲುಸೀಮೆ ಅಜ್ಞಾನದ ಅಂಧಕಾರದಲ್ಲೊಂದು ಅರಿವಿನ ಅಂಕುರ ಅಮ್ಮನ ಕನಸಿನಲ್ಲೇ ಕರಿಯ ಹೂ ಮಾಲೆಯ ಪುರಸ್ಕಾರ ಅಶಿತ ಮುನಿಯ ಕಂಬನಿಯ ಕುಂಚ ಅಪ್ಪನ ಆಂತರಿಕ ತುಮುಲತೆಯ ಶುದ್ಧ ವೈಶಾಖದ ಪೂರ್ಣಮಿಯಲಿ ಅರಳಿದ ಅರಮನೆಯ ಕಮಲ ಯಶೋಧರೆಯ ಮ್ಲಾಮತೆ ರಾಹುಲನ ಪಿತ ಚೆನ್ನನ ಮಾಲೀಕ ಕಂಥಕನ ಕಾಂತಿಮತಿ ಈ ಸಿದ್ದಾರ್ಥ ದಿಕ್ಕನ್ನೇ ದರ್ಶಿಸಿದ ಬೀದಿ ಬದುಕು ಸತ್ಯ ಅನ್ವೇಷಣೆಯ ಪರಿತ್ಯಾಗಿ ಜ್ಞಾನಕ್ಕಾಗಿ ಪರಿತಪಿತ ವಿವೇಕಿ ಜಗಕೆ ಶಾಂತಿ ಬೋಧಿಸಿದ ಯೋಗಿ ಶುದ್ಧ ಚಾರಿತ್ರ್ಯದ ಮೂರ್ತಿ ಮಂದಸ್ಮಿತದ […]
ಬುದ್ಧ ಪೂಣಿಮಾ ವಿಶೇಷ-ಕವಿತೆ
ಯಶೋಧರೆಯ ಸ್ವಗತ ಶೋಭಾ ನಾಯ್ಕ ಬಾನ ಚೆಂದಿರನನ್ನೇ ಇಳಿಸಿಬಿಟ್ಟೆ ನಿನ್ನ ಪ್ರೀತಿಗೆ ಎಂದು ಕಂದನ ಕೈಗಿತ್ತವ ನೀನು ಜೊತೆ ಇರುವೆನೆಂದು ಜೊತೆ ಹೆಜ್ಜೆ ಇಟ್ಟು ನಕ್ಷತ್ರಗಳ ಜಾತ್ರೆಯನ್ನೆಲ್ಲ ಸುತ್ತಿಸಿ ಬಂದವ ನೀನು ಬದುಕ ಸಿಹಿ ಕಡಲಿನಲ್ಲಿ ಈಜಾಡಿಸಿ ದಡ ಸೇರುವುದರೊಳಗೆ ಹೊರಟು ಹೋದೆಯಲ್ಲಾ ? ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ ರಥಬೀದಿಯ ಗುಟ್ಟು ಗೊತ್ತಿರದ ನೆಲ,ಗೋಡೆ ಕಿಡಕಿಗಳೆಲ್ಲ ನನ್ನನ್ನೇ ಜರಿದಂತೆ ಭಾಸವಾಗುತ್ತದೆ! ಒಣಗಿ ಹಾಕಿರುವೆ ಕಣ್ಣ ನೀರಲ್ಲೇ….ನೆಂದ ಚಾದರವ ಅದರದ್ದೂ….ದಿವ್ಯಮೌನ ಯಾರ ಬಳಿ ಹೇಳಲಿ ನನ್ನೊಡಲ ನೋವ? ಮಗನೀಗ […]
ಕಾವ್ಯಯಾನ
ರಾಧೆ ಹೇಳಿದ್ದು ಡಾ.ಗೋವಿಂದ ಹೆಗಡೆ 1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ. ಕವಿಬೆರಳುಗಳಲ್ಲಿ – ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು ಹೆಣ್ಣೇ ಅವ ಗಂಡೇ? ನಾವು ಸಂಧಿಸಿದ್ದು ಬೇರೆಯದೇ ಬಿಂದುವಿನಲ್ಲಿ ಹೆಣ್ಣು ಗಂಡುಗಳಾಗಿ ನಮ್ಮ ನೋಡುವ ಹಾಡುವ ಲೋಕದ ಕುರುಡಿಗೆ ನನ್ನ ಕನಿಕರ ! **
ಕಾವ್ಯಯಾನ
ನನಗೀಗ ಅಟ್ಟಗಳೆಂದರೆ ಪ್ರೀತಿ ಶೀಲಾ ಭಂಡಾರ್ಕರ್ ಇವತ್ತು ಬೆಳಿಗ್ಗೆಯೇ ಘೋಷಿಸಿ ಬಿಟ್ಟೆ.. ಮನೆಯಲ್ಲಿ ಸ್ವಚ್ಛತಾ ಅಭಿಯಾನ. ತಿಂಡಿಗೆಂದು ಮಾಡಿದ್ದ ಚಿತ್ರಾನ್ನವೇ ಮದ್ಯಾಹ್ನದ ಊಟ.. ಬೇಡವಾದರೆ ಅಲ್ಲೇ ನಾಲ್ಕು ಬಾಳೆಹಣ್ಣು, ಒಂದು ಎಳನೀರಲ್ಲಿ ಹೊಟ್ಟೆ ತುಂಬಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಹೂಂಕರಿಸಿದರು.. ಓದುತ್ತಿದ್ದ ಪೇಪರ್ ನಿಂದ ತಲೆ ಎತ್ತದೆ. ಅವರು ಹೋದ ಮೇಲೆ… ನಿಂತು ಒಮ್ಮೆ ಯೋಚಿಸಿದೆ.. ಎಲ್ಲಿಂದ ಶುರು ಮಾಡಲಿ..! ನಮ್ಮ ಅನುಕೂಲಕ್ಕೆ ಎಂದು ಮನೆಯ ಮೇಲೆ ಮನೆ ಕಟ್ಟಿಸಿದಾಗ ಬೇಕು ಬೇಕು ಎಂದು ಕಟ್ಟಿಸಿದ್ದ ಮುಚ್ಚಿದ್ದ ಬಾಗಿಲಿನ […]
ಕಾವ್ಯಯಾನ
ಆ ಕವಿತೆ ಇದಲ್ಲ. ಪೂರ್ಣಿಮ ಸುರೇಶ್ ಆ ಕವಿತೆ ಇದಲ್ಲ ನೀನು ಹಕ್ಕಿಯ ಬಗ್ಗೆ, ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ ಹೊಸೆಯುವಿಯಲ್ಲ.. ಪ್ರಣಯ ಕಾಡಲಾರದೇ? ನೇರ ಪ್ರಶ್ನೆ.,. ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ. ನಡು ವಯಸ್ಸಿಗೆ ಅದೆಂತಹ ಪ್ರಣಯ ಎಂದೆ ನಿನಗೆ ಗೊತ್ತಾ ನಿನ್ನ ನಡು ಚೆಂದ ಒಮ್ಮೆ ಪುಟ್ಟ ಉನ್ಮಾದ ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ ನೋಡು, ನಾಚಿದೆಯಾ.. ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ ಛೇಡಿಸಿದ: […]
ಕಾವ್ಯಯಾನ
ಕಾಲ ಅರುಣ್ ಕೊಪ್ಪ ಮಳೆ ,ಚಳಿ ,ಬಿಸಿಲೂ ಮೀರಿ ಏನು ಈ ಬಾಳ ರಹದಾರಿ ಹೋಯಿತು ಕೈ ಮೀರಿ ಗ್ರಹ ಬಂಧನ, ಮೈ ಕೈ ಪರಚಿ ಚೀರಿ ಎಲ್ಲಿಗೆ ನಿನ್ನ ಸವಾರಿ ಕೊರೊನಾ ಕವಿದೆ ನೀ ಅಂಧಕಾರಿ! ಅವಳು ನಾನಿಲ್ಲದ ಅವಳಲ್ಲ ಇಂದು ಇವಳು ಪಡುತಿಲ್ಲ ಗೋಳು ಇಲ್ಲ ಕಣ್ಣೀರ ಕೂಳು ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು ******