Category: ಕಾವ್ಯಯಾನ

ಕಾವ್ಯಯಾನ

ಗಝಲ್

ಗಝಲ್ ಎ. ಹೇಮಗಂಗಾ ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನುಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳುಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದುಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದುತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ […]

ಎದೆ ಮಾತು

ಕವಿತೆ ಎದೆ ಮಾತು ನೀ.ಶ್ರೀಶೈಲ ಹುಲ್ಲೂರು ಕಣ್ಣ ಕೊಳದಲದೋನಮ್ಮೊಲವ ಬಾತುಅವುಗಳೇ ಹೇಳುತಿವೆನನ್ನೆದೆಯ ಮಾತು ಬಾನ ಸಾಗರದಲ್ಲಿನೀ ಹೊಳೆವ ತಾರೆಬೆಳದಿಂಗಳಮಲಿನಲಿನಿರುಕಿಸುವೆ ಬಾರೆ ಸೊಂಪಾದ ತಣ್ಣೆಳಲುನಿನ್ನ ಎದೆ ಬನದಿಬಿರುಬಿಸಿಲು ಅಲ್ಲಿರಲಿವಿರಹ ಕಾನನದಿ ಮಿರುಗುವಾ ಚಂದ್ರನನಗೆಯಾಟ ನೋಡುಮೋಡಗಳ ಹಿಗ್ಗಿನಲಿನಮ್ಮೊಲವ ಹಾಡು ನದಿ ದಡದಿ ಸೊಗಸುನವಿಲ ನಲಿದಾಟಹಕ್ಕಿಗಳ ಕಲರವವುಅದು ರಮ್ಯ ನೋಟ ಒಂಟಿ ಪಯಣ ಸಾಕಿನ್ನುಜೊತೆಯಾಗಿ ಇರುವವರುಷದಿ ಕಂದನ ಕೇಕೆಮಡಿಲಲ್ಲೆ ತರುವ **************************************

ಮಧುವಣಗಿತ್ತಿ

ಕವಿತೆ ಮಧುವಣಗಿತ್ತಿ ಎಚ್ ಕೆ ನಟರಾಜ ಆಕೆಗೆ ದಿನವೂಸಿಂಗರೀಸುವುದೇ ಕೆಲಸಅಕ್ಷರಗಳಿಗೆ ಉಡುಗೆ ತೊಡಿಸಿಅಲಂಕರಿಸಿ ಬಿಳಿ ಹಾಳೆಯ ಮೇಲೇ ಚಿತ್ತಾರಬಿಡಿಸಿ ಶಾಯಿಯ ರಂಗೋಲಿಸೂರ್ಯ ಚಂದ್ರನ ಹೂ ಮಾಲೆ ಮಾಡಿ..ನಕ್ಷತ್ರಗಳನ್ನು ಕೆನ್ನೆ ರಂಗಾಗಿಸಿಭಾವನೆಗಳಿಗೆ ಬಣ್ಣದುಡುಗೆ ತೊಡಿಸಿಕಾಮವನ್ನು.. ಕಾಮವಿಲ್ಲದ ಹೃದಯಭತ್ತಳಿಕೆಯ ಬಾಣವಾಗಿಸಿಪದಪುಂಜದರಮನೆಗೆ ಲಗ್ಗೆಹೀಗೆ ಈ ಮಧುವಣಗಿತ್ತಿ.. ಅಲ್ಲಿಂದ ಇಲ್ಲಿಇಲ್ಲಿಂದ ಅಲ್ಲಿ ಶಭ್ಧಗಳ ನರ್ತನ. ಆಡಂಭರದಾಟಕೂ ಅಂಕುಶ ತೊಡಿಸಿಪ್ರೇಮನಿವೇದನೆ.ಕನಸುಗಳ ಬಗೆದು ಅಲ್ಲೊಂದಷ್ಟು ಹೆಕ್ಕಿಮನದಾಳದಿ ಕುಕ್ಕಿ…. ದುಃಖದಲ್ಲಿ ಬಿಕ್ಕಿ..ನಗುವಿನಾಳದಲಿ ಒಲವ ಬಿತ್ತಿ.. ನಾಚಿನೀರಾದ ರಂಗಿನೋಕುಳಿಯಲಿ..ಮತ್ತೊಂದಷ್ಟು ಪದಗಳ ಮಾಲೆಕಟ್ಟಿ..ಜೋಡಿಸಿ.. ಕಾಡಿಸೀ.. ಕೂಡಿಸಿ.. ತೊಡಿಸಿಅಂತೂ.. ಒಂದು ಅಂತಿಮ […]

ನಾವು ಆಧುನಿಕ ಗಾಂಧಾರಿಯರು

ಕವಿತೆ ನಾವು ಆಧುನಿಕ ಗಾಂಧಾರಿಯರು ಲಕ್ಷ್ಮೀ ಪಾಟೀಲ್ ನೀನು ಅಪಾರವಾದ ಆತ್ಮವಿಶ್ವಾಸತುಂಬಿ ತುಳುಕುವಹೆಣ್ಣೆಂದುಆಗಾಗ ಹೇಳಿನನ್ನನ್ನು ಬಲೂನಿನಂತೆಉಬ್ಬಿಸಿದಾತಖರೇಖರೇಆತ್ಮವಿಶ್ವಾಸದಲ್ಲೇಬದುಕಲು ನಿಂತಾಗ ಬಲೂನಿನ ಹವಾ ತೆಗೆದುಇನ್ನೆಂದೂಉಬ್ಬದಂತೆ ಮಾಡಿ ಎಸೆದು ಬಿಟ್ಟ ಹೆಣ್ಣನ್ನು ಒರೆಗೆ ಹಚ್ಚಿ ಆತಹೀಗೆಯೇ ಉಬ್ಬಿಬದುಕುತ್ತತನಗೊಂದು ಸ್ವಚ್ಛಂದ ಇತಿಹಾಸ ಕಟ್ಟಿಕೊಂಡಆತ್ಮವಿಶ್ವಾಸದಿಂದಹೆಜ್ಜೆ ಹಾಕುವಹೆಣ್ಣನ್ನು ತುಳಿಯುತ್ತಲೇಬಂದ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದಿದ್ದರೂಇವರೆಲ್ಲಕರಾಮತ್ತುಗಳನ್ನುಕಣ್ಣಲ್ಲಿ ಹಿಂಗಿಸಿಕೊಂಡುಒಡಲಲ್ಲಿ ಅರಗಿಸಿಕೊಂಡುಕಂಡು ಕಾಣದಂತೆ ಉಂಡು ಉಗುಳದಂತೆಒಡಲದಾವಾಗ್ನಿಗಳನ್ನುಒಳಗೇಒತ್ತಿಕೊಳ್ಳುವನಾವು ಆಧುನಿಕ ಗಾಂಧಾರಿಯರಾಗಿದ್ದೇವೆ ಅಕ್ಷರಲೋಕಕ್ಕೆತೆರೆದುಕೊಂಡಿದ್ದುಪ್ರಜಾಪ್ರಭುತ್ವದಲ್ಲಿಸಂಖ್ಯೆ ಮುಖ್ಯವಾದದ್ದೇಪವಾಡವೆಂಬಂತೆಈಗಲೂ ಮೀಸಲಾತಿ ಆದ್ಯತೆಗೆಧನ್ಯರಾಗಲುಕುರುಡು ಪುರುಷನ ಮುಂದೆ ಬೇಡಿಕೆ ಇಟ್ಟುಕಣ್ಣಿದ್ದೂಕುರುಡರಂತೆಅವನ ನೆರಳಹಿಂಬಾಲಿಸುವನಾವು ಆಧುನಿಕ ಗಾಂಧಾರಿಯರಾಗಿದ್ದೇವೆ **************************************

ದೇವರ ಲೀಲೆ

ಕವಿತೆ ದೇವರ ಲೀಲೆ ಬಾಪು ಖಾಡೆ ನೀಲಿಯ ಹಾಳೆಗೆ ಚಿತ್ರವ ಬರೆದುಮೇಲಕೆ ಎಸೆದಿರುವೆಶಿವನೇ ಮೇಲಕೆ ಎಸೆದಿರುವೆಮೂಡಣ ರವಿಗೂ ಹುಣ್ಣಿಮೆ ಶಶಿಗೂಸ್ನೇಹವ ಬೆಸೆದಿರುವೆಬೆಳಕಿನ ಸ್ನೇಹವ ಬೆಸೆದಿರುವೆ ತುಂಬಿದ ಅಂಬುಧಿ ಅಲೆಗಳ ಮೇಲೆನರ್ತನ ನಡೆಸಿರುವೆಹರನೇ ನರ್ತನ ನಡೆಸಿರುವೆಹಕ್ಕಿಯ ಹಿಂಡಿನ ಮೆತ್ತನೆ ಮೈಗೆಅಂಗಿಯ ತೊಡಿಸಿರುವೆರಂಗಿನ ಅಂಗಿಯ ತೊಡಿಸಿರುವೆ ಬಳುಕುವ ಬಳ್ಳಿಗೆ ಬಣ್ಣದ ಹೂಗಳಚಿತ್ರವ ಬಿಡಿಸಿರುವೆಚಂದದ ಚಿತ್ರವ ಬಿಡಿಸಿರುವೆಕೋಗಿಲೆ ಕಂಠದಿ ಕಾಣದೆ ಕುಳಿತುವೀಣೆಯ ನುಡಿಸಿರುವೆಚೈತ್ರದ ವೀಣೆಯ ನುಡಿಸಿರುವೆ ಎಲ್ಲೊ ಅವಿತು ಸೋಲು-ಗೆಲುವಿನಸೂತ್ರವ ಹಿಡಿದಿರುವೆಜೀವನ ಸೂತ್ರವ ಹಿಡಿದಿರುವೆನಾಟಕವಾಡಿ ಪಾತ್ರವ ಮುಗಿಯಲುಪರದೆಯ ಸರಿಸಿರುವೆಅಂಕದ ಪರದೆಯ ಸರಿಸಿರುವೆ […]

ಏಕೆ ಹೀಗೆ ಈ ಬಿರುಕುಗಳು?

ಕವಿತೆ ಏಕೆ ಹೀಗೆ ಈ ಬಿರುಕುಗಳು? ಮಮತಾಶ0ಕರ್ ಕಳಚಿಕೊಳ್ಳುವುದೇಕೆ ಒಂದೊಂದೇ ಕೊಂಡಿಗಳು?ಯಾವಬಾದರಾಯಣ ಸ0ಬಂಧಗಳೋಬೆಸೆದುಕೊಂಡಿದ್ದವುಈಗ ಬೆಸುಗೆ ಬಿಟ್ಟುಕೊಳ್ಳತೊಡಗಿದೆ ಬಿರುಕು ದೊಡ್ಡದಾಗುತ್ತಾ ಹೋದಂತೆದೂರಾಗುತ್ತ ಹೋಗುತ್ತೇವೆ…ಜೊತೆಗೆ ಅಪಾರ್ಥಗಳೂ್ ಬೆಳೆಯುತ್ತಾ ಹೋಗುತ್ತವೆಅಷ್ಟೇ ಆದರೆ ಪರವಾಗಿಲ್ಲ…ಆದರೆ ನಾವೇನು ಹೇಳಿಲ್ಲವೋಅದು ಎದುರಿನವರಿಗೆ ಕೇಳುತ್ತದೆನಮ್ಮ ಮೌನ ಏನೇನೋ ಹೇಳುತ್ತಿರುತ್ತದೆ…! ಈಗ ಈ ಸ್ಂಜೆ ಕೆಂಪಲ್ಲಿಕರಗಿ ಹೋಗುತ್ತಿದೆ ಸಂಬಂಧಗಳುಕತ್ತಲಾಗುತ್ತಿರುವಾಗ ಅನಿಸುತ್ತಿದೆ ಅವರಿಗೆಸ್ವಲ್ಪವೇ ಕ್ಷಮಿಸಿದ್ದರೂ ಇರುತ್ತಿತ್ತೇನೋಈ ಬಿಟ್ಟುಹೋದ ಸಂಬಂಧಗಳು…. ಆದರೇನು…ಅಹಂಕಾರಗಳ ಯುದ್ದದಲ್ಲಿವಿದಾಯವೇ ಗೆದ್ದುಬಿಟ್ಟಿದೆ…..! **************************************

ಮುಂಗಾರಿನ ಮಳೆಯಲಿ

ಕವಿತೆ ಮುಂಗಾರಿನ ಮಳೆಯಲಿ ಜಯಶ್ರೀ ಭ.ಭಂಡಾರಿ. ಬೆಳಗಿನಿಂದ ಕಂಬ ನಿಂತಂಗ ನಿಂತ ಕಾಯ್ತಿದಿನಿನೀ ಬರುವ ದಾರಿಗೆ ಎವೆಯಿಕ್ಕದೆ ನೋಡ್ತಿದಿನಿಮುಂಗಾರು ಮಳೆಯ ಮಣ್ಣವಾಸನೆಯಲಿನಿನ್ನ ಬೆವರಘಮಲು ತೇಲಿಬರುವದೆ ಎಂದು ಪಟಪಟ ಮಳೆಹನಿಗಳೆಲ್ಲ ಕಣ್ಣತೋಯಿಸಿನಿನ್ನ ನೆನಪುಗಳಲ್ಲಿ ಮನ ಹೂವಾಗಿಸಿಪ್ರತಿಕ್ಷಣ ಶಬರಿಯಾಗಿರುವೆ ಕಣೆ ನಿನ್ನ ನೆನೆಸಿಕಡಲಾದ ಭಾವನೆಗಳೆಲ್ಲ ಮುನಿಸಿ ಮುತ್ತಿಕ್ಕಿವೆ ನಿನಗೇಕೆ ಇಂತಹ ಕಠಿಣ ಮನಸುಬರಬಾರದೆ ಭಾವನೆಗಳಿಗೆ ರೆಕ್ಕೆಮೂಡಿಸಿಅರಳಬಾರದೆ ನನ್ನಿ ಬಾಹುಗಳ ಬಳಸಿರಿಮ್ ಜಿಮ್ ನಾದದಲಿ ಒಂದಾಗುವಾ ಸರಸಿ ಗೆಜ್ಜೆಯ ಹೊನ್ನ ಪಾದಗಳ ಅರಸಿ ನೀಹೆಜ್ಜೆಯನಿಡುತ ಒಲಿದು ಬಾರೆ ಒಲವ ಕನವರಿಸಿಎದೆಯಬಾಂಧಳದ ತುಂಬೆಲ್ಲ […]

ಶಾಲೆ ಮಾಸ್ತರ್ರು

ಕವಿತೆ ಶಾಲೆ ಮಾಸ್ತರ್ರು ಫಾಲ್ಗುಣ ಗೌಡ ಅಚವೆ ಗೆರೆ ಗೆರೆಗಳ ಪಾಯಜಾಮಗದ್ದೆ ಹಾಳಿಯ ಮೇಲೆ ನಡೆದು ಬಂದರೆಎದುರುಗೊಳ್ಳುತ್ತದೆ ಬೆತ್ತ ವರಾಂಡಾದಲ್ಲಿಟೇಬಲ್ಲು ಚೊಕ್ ಪೀಸು ಕರಿ ಹಲಗೆಎಲ್ಲವೂ ಒಮ್ಮೆ ಎದ್ದು ನಿಲ್ಲುತ್ತವೆ ಪ್ರಾರ್ಥನಾ ಬೆಲ್ಲಿಗೆ ಎಚ್ಚರಗೊಂಡ ಗಾಂಧಿ,ಬೋಸ್,ರಾಧಾಕೃಷ್ಣನ್ ಎಲ್ಲ ಮಕ್ಕಳೊಂದಿಗೆ ಎದೆಗೆ ಕೈಯಿಟ್ಟು ನಿಂತಂತೆ ಮಕ್ಕಳಿಗೆ ಭಾಸವಾಗುತ್ತದೆ ಮಗ್ಗಿ ಬರೆದ ಪಾಟಿ ಅದ್ದು ಹೋಗಿದೆ ಜೋರುಮಳೆಗೆಮತ್ತೆ ತೋರಿಸಬೇಕು ಬರೆದುಇಲ್ಲದಿರೆ ಗದ್ದೆಯಲಿ ಸಗಣಿ ಹೆಕ್ಕಬೇಕು ಆಗಾಗ ಅಂಗಿಯನು ಉಲ್ಟಾ ಹಾಕಿ ಬಂದರೂನೋಡಿಯೂ ನೋಡದಂತೆಕಿಟಕಿಗಳೂ ಗಪ್ ಚಿಪ್ಹೆದರಿ ಕೂತ ಮಕ್ಕಳಂತೆ ಏಕೋಪಾದ್ಯಾಯ […]

ಸುಮ್ಮನೆ ಬದುಕಿಬಿಡು

ಕವಿತೆ ಸುಮ್ಮನೆ ಬದುಕಿಬಿಡು ವಿಶಾಲಾ ಆರಾಧ್ಯ ಬದುಕಿ ಬಿಡಬೇಕು ಸುಮ್ಮನೆದುಮ್ಮಾನ ಬಿಗುಮಾನವಿಲ್ಲದೆಎಲ್ಲರೊಳಗೊಂದಾಗಿಯೂತಾನೇತಾನಾಗಿ ಆಕಾಶಕ್ಕೇಕೆ ಚಪ್ಪರ ..ನಿಸರ್ಗಕ್ಕೇನು ಮದುವೆಯೇ?ಇಷ್ಟಕ್ಕೂ ಮದುವೆಗೆ ಚಪ್ಪರಬೇಕೇ ಬೇಕೆಂದವರಾರು?ಮದುವೆಗೆ ಗಂಡು ಹೆಣ್ಣಿದ್ದರೆ ಸಾಕುಬೇರೆಲ್ಲಾ ಬೇಲಿಗಳ ಕಿತ್ತು ಹಾಕು ಪ್ರಕೃತಿ ಚೈತ್ರದ ಚಿಗುರೊಡನೆಮೈನೆರೆದಾಳೆ ಚಲುವೆರೆದಾಳೆಹೆಣ್ಣಿನ ಗುಣವೇ ಈ ಮಣ್ಣಿಗೂಮೈದುಂಬಿದಾಗ ಮಿಕ್ಕಿ ಎರೆವುದುಪ್ರಕೃತಿ ಸಹಜ ! ಅದಕೇಕೆ ನಿಯಮ ***************************

ಮನ ನೆಡದಾಗ

ಕವಿತೆ ಮನ ನೆಡದಾಗ ರೇಶ್ಮಾಗುಳೇದಗುಡ್ಡಾಕರ್ ನಡೆಯುತ್ತ ನಡೆಯುತ್ತಾ ನಡೆದದಾರಿಯೇ ಕಾಣಲಿಲ್ಲ ಹಿಂತಿರುಗಿನೋಡಿದಾಗ ಮುಂದಿರುವ ಗೂಢಾರಣ್ಯವುನಡಿಗೆಗೆ ಧೊಳಿಪಟವಾಗಿಅವಶೇಷವೇ ಇಲ್ಲದಂತಾಗಿತ್ತು …..! ಬದುಕಿನ ಪ್ರವಾಹಕ್ಕೆ ನಿಲ್ಲದಪಯಣ ರಭಸದಿ ಹುಡುಕುತ್ತಲೆಇತ್ತು ನೆಮ್ಮದಿಯ ದಡವದಣಿವರಿಯದ ದೇಹದ ಜೊತೆಗೆಹೆಗಲಲ್ಲಿ ಭದ್ರವಾಗಿದ್ದವು ಕನಸಿನಜೋಳಿಗೆ ಒಮ್ಮೊಮ್ಮೆ ನಿಂತಲ್ಲೇ ನಿಂತು ,ಕಾದು ,ಕಾದು , ಕೆಂಡಕಿಂತಲುಬಿಸಿಯಾಗಿ ! ಎಲ್ಲ ಬೇಗುದಿಗಳನ್ನುತನ್ನೊಳಗೆ ಸುಟ್ಟು ಬೂದಿಮಾಡಿತು …… ದಿಟ್ಟತನ ನೋಡುಗರ ಎದೆಯಲ್ಲಿಭಯದ ಬುಗುರಿಯ ಆಡಿಸಿದ್ದುಕ್ಷಣ ಮಾತ್ರದಲ್ಲಿಸಂಕೋಲೆಗಳನ್ನು ಕಿತ್ತು ಒಸೆದಮೇಲೆಹೆದರುವದು ಯಾತಕ್ಕೆ ?ಭವಿಷ್ಯ ಕ್ಕೂ ,ವಾಸ್ತವಕ್ಕೂ …..ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವುಭಯದ ಭೂತಗಳು … […]

Back To Top