ಕವಿತೆ
ಮನ ನೆಡದಾಗ
ರೇಶ್ಮಾಗುಳೇದಗುಡ್ಡಾಕರ್
ನಡೆಯುತ್ತ ನಡೆಯುತ್ತಾ ನಡೆದ
ದಾರಿಯೇ ಕಾಣಲಿಲ್ಲ ಹಿಂತಿರುಗಿ
ನೋಡಿದಾಗ ಮುಂದಿರುವ ಗೂಢಾರಣ್ಯವು
ನಡಿಗೆಗೆ ಧೊಳಿಪಟವಾಗಿ
ಅವಶೇಷವೇ ಇಲ್ಲದಂತಾಗಿತ್ತು …..!
ಬದುಕಿನ ಪ್ರವಾಹಕ್ಕೆ ನಿಲ್ಲದ
ಪಯಣ ರಭಸದಿ ಹುಡುಕುತ್ತಲೆ
ಇತ್ತು ನೆಮ್ಮದಿಯ ದಡವ
ದಣಿವರಿಯದ ದೇಹದ ಜೊತೆಗೆ
ಹೆಗಲಲ್ಲಿ ಭದ್ರವಾಗಿದ್ದವು ಕನಸಿನ
ಜೋಳಿಗೆ
ಒಮ್ಮೊಮ್ಮೆ ನಿಂತಲ್ಲೇ ನಿಂತು ,
ಕಾದು ,ಕಾದು , ಕೆಂಡಕಿಂತಲು
ಬಿಸಿಯಾಗಿ ! ಎಲ್ಲ ಬೇಗುದಿಗಳನ್ನು
ತನ್ನೊಳಗೆ ಸುಟ್ಟು ಬೂದಿಮಾಡಿತು ……
ದಿಟ್ಟತನ ನೋಡುಗರ ಎದೆಯಲ್ಲಿ
ಭಯದ ಬುಗುರಿಯ ಆಡಿಸಿದ್ದು
ಕ್ಷಣ ಮಾತ್ರದಲ್ಲಿ
ಸಂಕೋಲೆಗಳನ್ನು ಕಿತ್ತು ಒಸೆದಮೇಲೆ
ಹೆದರುವದು ಯಾತಕ್ಕೆ ?
ಭವಿಷ್ಯ ಕ್ಕೂ ,ವಾಸ್ತವಕ್ಕೂ …..
ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವು
ಭಯದ ಭೂತಗಳು …
*******************************
ನಿಜ…ಸಂಕೋಲೆಗಳನ್ನು ದಾಟಿದ ಮೇಲೆ ಭಯ ತರವಲ್ಲ.
ಚೆಂದವಾದ ಕವನ