ಕವಿತೆ
ಮುಂಗಾರಿನ ಮಳೆಯಲಿ
ಜಯಶ್ರೀ ಭ.ಭಂಡಾರಿ.
ಬೆಳಗಿನಿಂದ ಕಂಬ ನಿಂತಂಗ ನಿಂತ ಕಾಯ್ತಿದಿನಿ
ನೀ ಬರುವ ದಾರಿಗೆ ಎವೆಯಿಕ್ಕದೆ ನೋಡ್ತಿದಿನಿ
ಮುಂಗಾರು ಮಳೆಯ ಮಣ್ಣವಾಸನೆಯಲಿ
ನಿನ್ನ ಬೆವರಘಮಲು ತೇಲಿಬರುವದೆ ಎಂದು
ಪಟಪಟ ಮಳೆಹನಿಗಳೆಲ್ಲ ಕಣ್ಣತೋಯಿಸಿ
ನಿನ್ನ ನೆನಪುಗಳಲ್ಲಿ ಮನ ಹೂವಾಗಿಸಿ
ಪ್ರತಿಕ್ಷಣ ಶಬರಿಯಾಗಿರುವೆ ಕಣೆ ನಿನ್ನ ನೆನೆಸಿ
ಕಡಲಾದ ಭಾವನೆಗಳೆಲ್ಲ ಮುನಿಸಿ ಮುತ್ತಿಕ್ಕಿವೆ
ನಿನಗೇಕೆ ಇಂತಹ ಕಠಿಣ ಮನಸು
ಬರಬಾರದೆ ಭಾವನೆಗಳಿಗೆ ರೆಕ್ಕೆಮೂಡಿಸಿ
ಅರಳಬಾರದೆ ನನ್ನಿ ಬಾಹುಗಳ ಬಳಸಿ
ರಿಮ್ ಜಿಮ್ ನಾದದಲಿ ಒಂದಾಗುವಾ ಸರಸಿ
ಗೆಜ್ಜೆಯ ಹೊನ್ನ ಪಾದಗಳ ಅರಸಿ ನೀ
ಹೆಜ್ಜೆಯನಿಡುತ ಒಲಿದು ಬಾರೆ ಒಲವ ಕನವರಿಸಿ
ಎದೆಯಬಾಂಧಳದ ತುಂಬೆಲ್ಲ ನಿನ್ನದೆ ಘಮ
ನಿನಗೇಕೆ ಅರ್ಥವಾಗತಿಲ್ಲ ಈ ಹೃದಯ ಕುಲುಮೆ
ಬಚ್ಚಿಟ್ಟ ಭಾವನೆಗಳೆಲ್ಲ ತಣ್ಣಗಾಗುತಿವೆ
ಬಿಚ್ಚಿಟ್ಟ ಮನವಿದು ಮುನಿದು ಸೊರಗುತಿಹೆ
ಹನಿಗಳ ಲೀಲೆಯಲಿ ಕನಸು ಕಮರುತಿಹೆ
ಭಾವನೆಗಳು ಸೋರಿಹೋಗಿ ಕಮರುತಿಹೆ
ಮಳೆ ರಭಸ ಮಂದವಾಗುವ ಮುನ್ನ
ಮನಹಾಳಾಗಿ ರಚ್ಚೆಹಿಡಿಯುವ ಮುನ್ನ
ನನ್ನೆಲ್ಲ ಸಿಹಿಕನಸುಗಳು ಜಾರಿಹೋಗುವ ಮುನ್ನ
ಮನದನ್ನೆ ಮನ್ನಿಸಿ ಭಾವನೆಗಳಿಗೆ ರುಜು ಹಾಕುಬಾ
**********************************************
Very nice
ಸುಂದರವಾದ ಕಾವ್ಯ ಭಾವನೆಗಳನ್ನು ಗೂಡುಕಟ್ಟಿಸುತ್ತಿದೆ.
Super