ಕವಿತೆ
ಸುಮ್ಮನೆ ಬದುಕಿಬಿಡು
ವಿಶಾಲಾ ಆರಾಧ್ಯ
ಬದುಕಿ ಬಿಡಬೇಕು ಸುಮ್ಮನೆ
ದುಮ್ಮಾನ ಬಿಗುಮಾನವಿಲ್ಲದೆ
ಎಲ್ಲರೊಳಗೊಂದಾಗಿಯೂ
ತಾನೇತಾನಾಗಿ
ಆಕಾಶಕ್ಕೇಕೆ ಚಪ್ಪರ ..
ನಿಸರ್ಗಕ್ಕೇನು ಮದುವೆಯೇ?
ಇಷ್ಟಕ್ಕೂ ಮದುವೆಗೆ ಚಪ್ಪರ
ಬೇಕೇ ಬೇಕೆಂದವರಾರು?
ಮದುವೆಗೆ ಗಂಡು ಹೆಣ್ಣಿದ್ದರೆ ಸಾಕು
ಬೇರೆಲ್ಲಾ ಬೇಲಿಗಳ ಕಿತ್ತು ಹಾಕು
ಪ್ರಕೃತಿ ಚೈತ್ರದ ಚಿಗುರೊಡನೆ
ಮೈನೆರೆದಾಳೆ ಚಲುವೆರೆದಾಳೆ
ಹೆಣ್ಣಿನ ಗುಣವೇ ಈ ಮಣ್ಣಿಗೂ
ಮೈದುಂಬಿದಾಗ ಮಿಕ್ಕಿ ಎರೆವುದು
ಪ್ರಕೃತಿ ಸಹಜ ! ಅದಕೇಕೆ ನಿಯಮ
***************************
ಕವಿತೆ ಸೊಗಸಾಗಿದೆ ವಿಶಾಲಾರವರೇ.