Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಕಣ್ಣೀರು ಜಗದೀಶ್ ಬನವಾಸಿ ಕಣ್ಣೀರು ಬರುವಷ್ಟು ಬರಲಿಎದೆಯ ನೋವು ತೊಳೆದುನೆನಪುಗಳ ಪುಟ ಓದ್ದೆಯಾಗುವಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳು ಬರುವಷ್ಟು ಅತ್ತು ಬಿಡುನೆನಪುಗಳು ನೇಪಥ್ಯಕ್ಕೆ ಮರಳಿಮರೆಯಾದ ಕನಸೊಂದು ರೆಕ್ಕೆಬಿಚ್ಚದಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳುವ ಹರಿವಿಗೆ ತಡೆಯಾಗುವಗೊಡ್ಡು ನೆಪಗಳ ಒಡ್ಡದಿರುಒಡೆದ ಕಟ್ಟೆ ಬರಿದಾಗಲಿ ಬಿಡುಮತ್ತೆಂದು ಅವು ತಿರುಗಿ ಬಾರದಂತೆ. *******

ಕಾವ್ಯಯಾನ

ಸಂಕೋಲೆ ಸಾಯಬಣ್ಣ ಮಾದರ ಬಿಟ್ಟು ಬಿಡಿಬಿಟ್ಟು ಬಿಡಿಕೈ ಕಟ್ಟಿ ನೆಲಕ್ಕೆ ಹಾಕಿಮಂಡಿಯೂರಿ ಕುಳಿತಿರುವರೆಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ ಮನುಷ್ಯರು ನಾವುನೀವು ಕ್ರೂರಿ ಮೃಗಗಳೆ? ಚರ್ಮದೊಳಗೆ ರಕ್ತ ಉಂಟುಅದರಲ್ಲಿ ವರ್ಣ ಜಾತಿ ಉಂಟೆ?ಬೇರೆ ಬೀಜಕ್ಕೆ ಹುಟ್ಟಿದ ಮರ ನೀವುತಯಾರಾಗಿದೆ ಕಾಲವೇ ಕಡಿಯಲು ಮಸಣದಲ್ಲಿ ಮಾನವೀಯತೆ ಹೂತ್ತುಮನುಷ್ಯತ್ವವೆ ಮೂಲೆಗೊತ್ತಿಜಾತಿ ಎಂಬ ಶಿಖರ ಏರಿವರ್ಣದ ಗಿರಿ ಮುಟ್ಟಿಅರ್ಚುವ ಮೂರ್ಖರೇಯಾವ ಜೀವಿ ನೀವು ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನುಕಟ್ಟಿ ಬಡಿದು ಕೇಕೆ ಹಾಕಿದವರು ನೀವುನೀರು […]

ಕಾವ್ಯಯಾನ

ಗೆ ರಾಮಸ್ವಾಮಿ ಡಿ.ಎಸ್. ನೀನು ನಡೆಸಿಕೊಡಬಹುದಾದ ಒಂದು ಮಾತುನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ.ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋಆ ಉಳಿದು ಹೋದ ಮಾತನ್ನ ನೀನುಕಣ್ಣಲ್ಲಿ ಕಣ್ಣಿಟ್ಟು ಬೆರಳಿಗೆ ಬೆರಳ ಹೊಸೆದುಹಣೆಯ ಚುಂಬಿಸಿ ಹೇಳಿದ್ದೆಎಂದರೆ ಇಲ್ಲ, ಋಜುವಾತಿಗೆ ಸಾಕ್ಷಿ. ಆದರೆ ಇದ್ದಕ್ಕಿದ್ದಂತೆ ಹೀಗೆ ನನ್ನೊಂದಿಗೆ ಮಾತು ನಿಲ್ಲಿಸಿ,ಅವರಿವರ ಜೊತೆಗೆ ಮಾತಿನ ನಟನೆಯಾಡಿದರೆಮತ್ಯಾರದೋ ಪಟಕ್ಕೆ ಚಂದ ಎಂದು ಲೈಕಿಸಿದರೆನನ್ನ ಹೊಟ್ಟೆಯಲ್ಲೇನೂ ಕಿಚ್ಚು ಹೊತ್ತುವುದಿಲ್ಲಬದಲಿಗೆ ನಿನ್ನ ಸಂಕಟವ ಅಳೆಯಬಲ್ಲೆ.ಎಲ್ಲವನೂ ಮರೆತವರಂತೆ ಕೂಡಿದ್ದು, ಕಳೆದದ್ದುಕನಸ ಗುಣಿಸುತ್ತಲೇ ಕಡೆಗೆ ಬದುಕ ಭಾಗಿಸಿದ್ದುಭವದ […]

ಕಾವ್ಯಯಾನ

ಏಕೆ ಹೀಗೆ? ನೀ.ಶ್ರೀಶೈಲ ಹುಲ್ಲೂರು ಅಧರದಲಿರುವ ಲಾಲಿ ರಂಗುಪದರು ಪದರಾಗೆರಗುತಿಹುದುಮರುಗುತಿರುವ ಮನದ ಮತಿಯುಅತಿಯ ಮೀರಿ ಕೊರಗುತಿಹುದು ಕಣ್ಣಲಿಟ್ಟ ಒಲವ ಬಾಣಎದೆಯನಿರಿದು ನರಳುತಿಹುದುಕಳೆದಿರುವ ಕಾಲ ಸಾಲುಪದವ ಕಿತ್ತು ಕೊರಗುತಿಹುದು ಆಗಸದ ಸೊಗಸ ಮೋಡನಕ್ಕು ತಾನೆ ಅಳುತಲಿಹುದುಚಕ್ರವಾಕ ಹೆದೆಯ ಮೆಟ್ಟಿಮುದವನಪ್ಪಿ ನಗುತಲಿಹುದು ಇರುವ ಸುಖದ ಕೊರಳ ಮುರಿದುದು:ಖ ಕೇಕೆಗೈಯುತಿಹುದುದಾರಿ ನಡೆವ ಧೀರನೆದೆಗೆಒದ್ದು ಹಾಸಗೈಯುತಿಹುದು ಮನುಜರಾಳದೊಡಲ ಬಗೆದಕರುಳೆ ಸಿಳ್ಳೆಯೂದುತಿಹುದುಭವದಿ ತೇಲುತಿರುವ ಘಟದಉಸಿರ ಗುಳ್ಳೆಯೊಡೆಯುತಿಹುದು ಏಕೆ ಹೀಗೆ ದೇವ ಭಾವ ?ತನ್ನ ತಾನೆ ತುಳಿಯುತಿಹುದುನರರ ನಡುವೆ ನರಕ ತೂರಿಮರುಕವಿರದೆ ಅಳಿಯುತಿಹುದು *******

ಆವಿಷ್ಕಾರ

ಆವಿಷ್ಕಾರ ಡಾ.ಅಜಿತ್ ಹರೀಶಿ ಗುಪ್ತಗಾಮಿನಿ ರಕುತಹೃದಯದೊಡಲಿಂದ ಚಿಮ್ಮುತಕೋಟಿ ಜೀವಕಣಗಳಿಗುಣಿಸುತಜೀವಿತವ ಪೊರೆಯುವುದುಎಷ್ಟು ಸಹಸ್ರಕಾಲದ ನಡೆಯುಹೀಗೆ ಅರಿವಾದಂತೆಹೊಸ ಕಾಯಕಲ್ಪ ಜೀವನಕ್ಕೆ…! ಪರಮಾಣುಗಳಲಿ ಅದುಮಿಟ್ಟಬಹಳ ಬಲವಾದ ಸ್ಫೋಟಅಣ್ವಸ್ತ್ರಗಳೊಳಗೆ ಬಿಗಿದಿಟ್ಟುಲಕ್ಷ ಜೀವಗಳ ಮರಣಪಟ್ಟಿರಣಕಹಳೆ ಊದುವ ಮೊದಲೇಯುದ್ಧ ನಡೆಸುವ ರಣನೀತಿಅಸ್ತ್ರಗಳು‌ ಅಣುವಾದಂತೆಬೃಹತ್ ದ್ವೇಷ ಜಗಕ್ಕೆ…! ಧರಣಿ ಹೂಡದ ಧರೆಯ ಮೇಲೆಹಸಿರುಟ್ಟು ನಿಂತ ಸಸ್ಯಶ್ಯಾಮಲೆಕಾಡು, ನಾಡಿಗೆ ಜೀವಂತ ದೇವರೇಇವು ಜೀವಿಸುತ್ತವೆ, ಎಂಬ ವಿಜ್ಞಾನಈ  ತಿಳಿವು ಬಂದಂತೆಮುನ್ನಡೆಯಾಯಿತು ವಿನಾಶಕ್ಕೆ..! **********

ನಿರೀಕ್ಷೆ

ನಿರೀಕ್ಷೆ ಉಷಾ ಸಿ.ಎನ್ ಅಂದು ಭಾನುವಾರ ಕನ್ನಡಿಯ ಮುಂದೆ ನಿಂದು ನೀ ಮೆಚ್ಚುವ ಬಣ್ಣವ ಧರಿಸಿದ್ದೆ ಅದಕೊಪ್ಪುವ ಬಿಂದಿ ಬಳೆಗಳ ತೊಟ್ಟು ನೀಳ ಕೇಶವ ಹೆಣೆದು ಮಲ್ಲಿಗೆಯ ಮುಡಿದಿದ್ದೆ ನಗೆ ಚೆಲ್ಲುವ ತುಟಿಗಳಿಗೆ ಕೆಂಪು ಬಣ್ಣ ಲೇಪಿಸಿ ನಿನ್ನ ಕಣ್ಣುಗಳ ನೆನೆದು ನನ್ನ ಕಣ್ಣಿಗೆ ಕಾಡಿಗೆ ಬಳಿದಿದ್ದೆ ಅನುಗಾಲ  ನಿನ್ನತ್ತ ಬರಲು ತವಕಿಸುವ ಕಾಲುಗಳಿಗೆ  ಗೆಜ್ಜೆ ತೊಟ್ಟಿದ್ದೆ ಕಂಗಳಲಿ ಮಿಂಚಿಟ್ಟು, ತುಟಿಗಳಲಿ ನಗೆಯಿಟ್ಟು ನಿನ್ನ ದಾರಿಯ ಕಾದಿದ್ದೆ. ನೀ ಬಾರದೆ  ನಿರೀಕ್ಷೆಗಳು  ನೀರ ಮೇಲಣ ಗುಳ್ಳೆಗಳಾದವು ಕನಸುಗಳು […]

ಚೆಲ್ಲಿ ಹೋಯಿತು ಉಸಿರು

ಚೆಲ್ಲಿ ಹೋಯಿತು ಉಸಿರು ( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ವಿಜಯಶ್ರೀ ಹಾಲಾಡಿ ಚೆಲ್ಲಿಹೋಯಿತು ಉಸಿರು…( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ಗಾಳಿಗೆ ಗಂಧ ತುಂಬುತ್ತಿದ್ದಬಾಗಾಳು ಮರವನ್ನುಈ ಬೆಳಗು ಕಡಿಯಲಾಗಿದೆಮರದ ಮಾಂಸ ರಕ್ತ ಚರ್ಮಚೆಲ್ಲಾಡಿದ ಬೀದಿಯೊಳಗೆಇದೀಗ ತಾನೇ ನಡೆದುಬಂದೆನೆಲದಲ್ಲಿ ಜಜ್ಜಿಹೋದ ಹೂಮೊಗ್ಗು ಎಲೆಗಳ ಕಂಬನಿಕುಡಿಯುತ್ತಾ… ಹಕ್ಕಿ ಕೊರಳಿಗೆ ಕಷಾಯಕುಡಿಸಿದ ಸಂಗಾತಿ ಮರಮಣ್ಣಿನಾಳದ ಕಸುವುಗಳನಕ್ಷತ್ರಗಳಿಗೆ ಅಂಟಿಸಿದಅವಧೂತ ಮರಜೀವಜಂತುಗಳಿಗೆ ಜೀವಜಲಮೊಗೆದ ತಾಯಿಮರಬದುಕಿತ್ತು ಇಲ್ಲೇ ಕಣ್ಣೆದುರಲ್ಲೇಮಾತು ಮೀರಿದಬುದ್ಧಕಾರುಣ್ಯದಂತೆಮಮತೆ ತೋಳುಗಳಂತೆ… ಚೆಲ್ಲಿಹೋಯಿತು ಉಸಿರುಸಾವು ಹೆಪ್ಪುಗಟ್ಟಿದಂತೆ!****** ಬಾಗಾಳು ಮರ– […]

ಗಝಲ್

ಗಝಲ್ ಸಹದೇವ ಯರಗೊಪ್ಪ ಎದೆ ಎತ್ತರ ಬೆಳೆದು ನಿಂತ ಪೀಕಿನಲಿ ಕಣ್ಣು ತಪ್ಪಿಸಿ ಎಲ್ಲಿ ಹೋದೆ|ಬತ್ತಿದೆದೆಯ ಬಾವಿಗೆ ಕಣ್ಣೀರು ಕುಡಿಸಿ ಎಲ್ಲಿ ಹೋದೆ|| ಬಿತ್ತಿದ ತಾಕುಗಳಿಗೆ ಉಳಿ ನೀರು ಉಣಿಸದೆ ಸೆರಗ ಜಾಡಿಸಿದೆ|ಮಣ್ಣಿನ ಹೊಕ್ಕಳಿಂದ ಅನ್ನದ ಬೇರು ಕತ್ತರಿಸಿ ಎಲ್ಲಿ ಹೋದೆ|| ತೂಗಿ ತೊನೆವ ಬೆವರ ತೆನೆಗಳಿಗೆ ಕವಣೆ ಬೀಸಲೆ ಇಲ್ಲ|ನೇಸರನ ಕಾಯುವ ಸೂರ್ಯಕಾಂತಿ ದಿಕ್ಕು ಬದಲಿಸಿ ಎಲ್ಲಿ ಹೋದೆ| ಬಿರುಕು ಬಿಟ್ಟ ನೆಲದ ಕೆಂಡಕ್ಕೆ ಬೆವರ ದೂಪದ ಬೆರಕೆ|ತೀರದ ಸಾಲಕ್ಕೆ ಉಳುವ ನೇಗಿಲ ಅಡಾ ಇರಿಸಿ […]

ಗರಿ ಹುಟ್ಟುವ ಗಳಿಗೆ

ಗರಿ ಹುಟ್ಟುವ ಗಳಿಗೆ ಫಾಲ್ಗುಣ ಗೌಡ ಅಚವೆ ರಾತ್ರಿಯಿಡೀ ಹೊಯ್ದ ಮಳೆಗೆಹದಗೊಂಡ ಹರೆಯದ ಬೆದೆಗೆಮುದನೀಡಿದ ನರಳುವಿಕೆಯಲ್ಲಿಇನ್ನೂ ಎದ್ದಿಲ್ಲ ಇಳೆ ಬೇಸಿಗೆಗೆ ಧಿಕ್ಕಾರ ಕೂಗಿದಮರಜಿರಲೆಗಳ ಅನಿರ್ದಿಷ್ಟಾವಧಿಯನಿರಸನ ಅಂತ್ಯವಾಗಿದೆಹಣ್ಣಿನರಸ ನೀಡಲು ಮೋಡಗಳುಧರೆಗಿಳಿದಿವೆ. ಮತ್ತೆ ಮತ್ತೆ ಬೀಳುವ ಮಳೆಅವಳ ನೆನಪುಗಳ ಚಿಗುರಿಸಿಬದುಕುವ ಆಸೆ ಮೂಡಿಸಿದೆಹುಲ್ಲು ಕಡ್ಡಿಗೆ ಜೀವ ಬಂದಂತೆ! ಹೊಯ್ಯುವ ಜುಮುರು ಮಳೆಗೆಅದುರುವ ಮರದ ಎಲೆಗಳುಮೋಡಗಳಿಗೆ ಸಂತಸದ ಸಂದೇಶರವಾನಿಸಿವೆ. ಧರೆಗಿಳಿದ ಮಳೆಗೆ ಬೆರಗಾದ ಕಪ್ಪೆಗಳುಕೂಗಿ ಕೂಗಿ ಕೂಗಿಖುಷಿಗೊಂಡು ಬೆದೆಗೊಂಡಿವೆ. ಹೊಳೆ ಹಳ್ಳಗಳಲ್ಲಿಯ ಮರಿಗಪ್ಪೆಗಳುಬಾಲ ಕಳಚಿ ಮೂಡಿ ಬಂದರೆಕ್ಕೆಗಳ ಕಂಡುಛಂಗನೆ ಕುಣಿದು ಕುಪ್ಪಳಿಸಿವೆ. […]

Back To Top