ನಿರೀಕ್ಷೆ

ನಿರೀಕ್ಷೆ

Pink Flower Photography

ಉಷಾ ಸಿ.ಎನ್

ಅಂದು ಭಾನುವಾರ

ಕನ್ನಡಿಯ ಮುಂದೆ ನಿಂದು

ನೀ ಮೆಚ್ಚುವ ಬಣ್ಣವ ಧರಿಸಿದ್ದೆ

ಅದಕೊಪ್ಪುವ ಬಿಂದಿ ಬಳೆಗಳ ತೊಟ್ಟು

ನೀಳ ಕೇಶವ ಹೆಣೆದು ಮಲ್ಲಿಗೆಯ ಮುಡಿದಿದ್ದೆ

ನಗೆ ಚೆಲ್ಲುವ ತುಟಿಗಳಿಗೆ ಕೆಂಪು ಬಣ್ಣ ಲೇಪಿಸಿ

ನಿನ್ನ ಕಣ್ಣುಗಳ ನೆನೆದು ನನ್ನ ಕಣ್ಣಿಗೆ ಕಾಡಿಗೆ ಬಳಿದಿದ್ದೆ

ಅನುಗಾಲ  ನಿನ್ನತ್ತ ಬರಲು ತವಕಿಸುವ ಕಾಲುಗಳಿಗೆ

 ಗೆಜ್ಜೆ ತೊಟ್ಟಿದ್ದೆ

ಕಂಗಳಲಿ ಮಿಂಚಿಟ್ಟು,

ತುಟಿಗಳಲಿ ನಗೆಯಿಟ್ಟು

ನಿನ್ನ ದಾರಿಯ ಕಾದಿದ್ದೆ.

ನೀ ಬಾರದೆ

 ನಿರೀಕ್ಷೆಗಳು  ನೀರ ಮೇಲಣ ಗುಳ್ಳೆಗಳಾದವು

ಕನಸುಗಳು ಕನಸುಗಳಾಗಿಯೆ ಉಳಿದವು.

*********

Leave a Reply

Back To Top