ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Bamboo Flute Images, Stock Photos & Vectors | Shutterstock

ಮಾಲತಿ ಹೆಗಡೆ

ಎದೆಯ ಮಧುಬನವ ಹದಗೆಡಿಸಿ ತೊರೆದು ಹೋದೆ ನೀನು
ಮನದ ಮೃದು ಭಾವ ಚೆದುರಿಸಿ ತೊರೆದು ಹೋದೆ ನೀನು

ಲೋಕನಿಂದೆಗೆ ಕಿವುಡಾಗಿ ನಿನ್ನವಳಾಗಿದ್ದೆನೋ ಗಿರಿಧರಾ
ನನ್ನನೀ ಭವದ ಭಾಧೆಗೆ ಸಿಲುಕಿಸಿ ತೊರೆದು ಹೋದೆ ನೀನು

ಕಡೆದ ಮಜ್ಜಿಗೆಯಲ್ಲೆತ್ತಿದ ಶುದ್ಧ ನವನೀತದಂತಿತ್ತು ನನ್ನೊಲವು
ರಾಧೆಯ ರೋದನವ ಕಡೆಗಣಿಸಿ ತೊರೆದು ಹೋದೆ ನೀನು

ಇಹ ಪರದ ಚಿಂತೆಯನೆಲ್ಲ ತೂರಿ ವೇಣು ನಾದದಲಿ ಕರಗಿದ್ದೆ
ಜೀವ ಭಾವದ ನಂಟು ಕತ್ತರಿಸಿ ತೊರೆದು ಹೋದೆ ನೀನು

ಮರುಳೋ ಮಾಯೆಯೋ ಅರಿಯದ ಕಡುಮೋಹಿಯಾಗಿದ್ದೆ
ಆತ್ಮಸಾಂಗತ್ಯದಲಿ ಅಧೀನವಾಗಿಸಿ ತೊರೆದು ಹೋದೆ ನೀನು

**********

About The Author

2 thoughts on “ಗಝಲ್”

  1. Dr. Normal Battal

    ರಾಧೆಯ ಎದೆಯ ದುಗಡವನ್ನು, ನೋವಿನ ಭಾವವನ್ನು ಹೋರಹಾಕುವ, ಸುಂದರ ಗಜಲ್ ರಚನೆ

Leave a Reply

You cannot copy content of this page

Scroll to Top