ಸಂಕಟ
ನೋವು ಕೊಟ್ಟವರಿಗೇನು ಗೊತ್ತು
ನೋವು ಅನುಭವಿಸಿದವರ ಸಂಕಟ
ಮಾವನ ಕರೆ
ಕವಿತೆ ಮಾವನ ಕರೆ ಶೃತಿ ಮೇಲುಸೀಮೆ ಮೊಂಡ ಕೋಲ ಕಟ ಕಟ ಕುಟ್ಟುತ್ತಾಒಂಟಿ ಕಾಲ ಕುಂಟ ಮಾವಕೂಗ್ತಾ ಬಂದಿದ್ದ ಕೂಗ್ತಾ ಬಂದಿದ್ದ ನೀಲವ್ವ ತಾರವ್ವ ಎಂದುಕಣ್ ಅಗಲಿಸಿ ಕೇಳ್ತಾನೋಡ್ತಾ ನಿಂತಿದ್ದ ನೋಡ್ತಾ ನಿಂತಿದ್ದ ಹಸಿದ ಹೊಟ್ಟೆ , ಸಪ್ಪೆ ಮಾರಿ ಮಾಡ್ಕೊಂಡುತಿನ್ನಕ ತಾರವ್ವ ತಂಗ್ಯವ್ವ ಎಂದುಕರಿತಾ ನಿಂತಿದ್ದ ಕರಿತಾ ನಿಂತಿದ್ದ ಪುಟ್ಟಿ ಪುಟ್ಟಿ ಹಣ್ಣು ಮಾರುವಾಗರೊಕ್ಕ ಕೊಟ್ಟು ಒಯ್ಯನದಿದ್ದ ಮಾವ ಇಂದುಕಿಸೆಲೀ ರೊಕ್ಕ ಇಲ್ಲದೆ ಬಾಯಿ ಚಪ್ಪರಿಸುತದ್ದಸೊಸೆ ಮುಂದೆ ಸೋತು ಕೇಳ್ತಿದ್ದ ಸೋತು ಕೇಳ್ತಿದ್ದ ಬಾ ಮಾವ […]
ವೀಣಾ ನಿರಂಜನರವರ ಕವಿತೆ
ಕವಿತೆ ವೀಣಾ ನಿರಂಜನರವರ ಕವಿತೆ ನಕ್ಷತ್ರಗಳನ್ನು ನೋಡುವಾಗನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರುಈಗ ಖುದ್ದು ನಕ್ಷತ್ರವಾಗಿದ್ದಾರೆಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿನಕ್ಷತ್ರವಾಗಿ ಬಿಡುವವರ ಕುರಿತುನಾನೀಗ ಯೋಚಿಸುತ್ತಿದ್ದೇನೆ ಅಂಗಳದ ತುಂಬ ಚೆಲ್ಲಿದ್ದಮಲ್ಲಿಗೆಯ ಹೂಗಳನ್ನಾಯುತ್ತಿದ್ದವರುಹೂಗಳು ಬಾಡುವ ಮುನ್ನವೇಪರಿಮಳವ ಅಲ್ಲೇ ಬಿಟ್ಟುನಡೆದೇ ಬಿಟ್ಟರು ಸದ್ದಿಲ್ಲದೆಆ ಪರಿಮಳವಿನ್ನೂ ಹಾಗೇ ಇದೆನನ್ನ ಮನದೊಳಗೆ ರಾತ್ರಿ ನೀರವ ಮೌನದಲ್ಲಿಬಿಚ್ಚಿ ಕೊಳ್ಳುತ್ತಿದ್ದ ಬದುಕ ಕಟ್ಟುವಕನಸುಗಳು, ಪಿಸುಮಾತು, ನಸುನಗೆಹಾಡಾಗಿ ಹೊಮ್ಮುತ್ತಿದ್ದ ಭಾವಗಳುಎದೆಯ ದನಿಗೆ ರಾಗವಾಗುವ ಮುನ್ನವೇಸ್ವರಗಳ ಕಳಚಿಟ್ಟು ನಡೆದರು ಎಲ್ಲೋ ದೂರದಲ್ಲಿ ಪುಟ್ಟ ನಕ್ಷತ್ರಗಳಾಗಿಮಿನುಗುತ್ತಿರುವ ಈ ನನ್ನ ಜನಕಾಲ ಕಾಲಕ್ಕೆ ಸುರಿವ […]
ತರಹಿಗಜಲ್
ಅವಳು ಅಬಲೆಯಲ್ಲ ಸಬಲೇ ಈ ಜಗದ ಸೃಷ್ಟಿಯ ಕಾರಣ ಕರ್ತೆ ಅವಳು
ಜನನಿಗೆ ಅನಾಥಾಶ್ರಮದಿ ನೋಯಿಸುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ
ದಾನ
ಹೊಟ್ಟೆ ಬಿರಿಯುವಂತೆ
ತಿಂದುಂಡು ಉಳಿದದ್ದನ್ನು
ಹಸಿದವರಿಗೆ ನೀಡುವರು
ಸೆಲ್ಫಿ ಪೋಸ್ ನೊಂದಿಗೆ
ಅನರ್ಥರು
ಮರಕುಟುಕ ಬಲ್ಲುದೆ
ತನಿವಣ್ಣು ತರು ಬೆಲೆ?
ಹುಳ ಹುಪ್ಪಡಿ ಕುಕ್ಕಿ-
ತಿನುವ ಕರ್ಮ. |
ಅವಳ ನಗೆ ನಾದ.
ಅವಳ ಹಿತ ಬಯಸಿ ಒಲವ ಹನಿಸಿ
ಪೂಜಿಸುವ ಭಕ್ತೆ ನಾನು
ಕಲ್ಲಾಗಿ ದೂರದಲೆ ಉಳಿದು
ಕಾಣದಂತಿರುವ ಅಭಯ ಹಸ್ತ ಅವ
ಸಹಜವಲ್ಲದ್ದು
ನಿಸರ್ಗ ಸಹಜವಲ್ಲದ ಬರಡು ಯಾಂತ್ರಿಕ ಜೀವನ
ಸಂವೇದನೆಯಿಲ್ಲದ ರಸಹೀನ ಬದುಕಿನ ಯಾನ
ಅನ್ನದಾತ
ಬೊಬ್ಬೆಯೆದ್ದ ಅಂಗೈಗೆ ಮದ್ದು ಮಾಡುವಷ್ಟಿಲ್ಲ
ಬೋಳು ನೆಲದಲಿ ಚಿಗುರೊಡೆದ ಹರುಷಕೆ
ಬೌದ್ಧಿಕವಾಗಿ ಅಕ್ಷರ ದಕ್ಕಿಲ್ಲದಿದ್ದರೂ ಪದಕಟ್ಟಿ ಹಾಡ್ಯಾನು
ಹೆಗಲಿಗೆ ಒರಗಿ.
ನನ್ನ ಮಧುರವಾದ
ಭಾವಗಳೆಲ್ಲ ಬೆರೆತು ಕೊಂಡವು
ನಿನ್ನ ಮಾತುಗಳಲ್ಲಿ