ಸಂಕಟ

ಕವಿತೆ

ಸಂಕಟ

ಡಾ. ಸುರೇಖಾ ರಾಠೋಡ್.

abstract painting

ಹೊಟ್ಟೆ ತುಂಬಿದವರಿಗೇನು ಗೊತ್ತು
ಹಸಿವಿನಿಂದ ಸಾಯುವವರ ಸಂಕಟ…

ಹಣವಿದ್ದವರಿಗೇನು ಗೊತ್ತು
ಹಣವಿಲ್ಲದವರ ಸಂಕಟ…

ನೋವು ಕೊಟ್ಟವರಿಗೇನು ಗೊತ್ತು
ನೋವು ಅನುಭವಿಸಿದವರ ಸಂಕಟ..

ಅಪಮಾನ ಮಾಡಿದವರಿಗೇನು ಗೊತ್ತು
ಅಪಮಾನಕ್ಕೊಳಗಾದವರ ಸಂಕಟ…

ಸಂಶಯ ಪಟ್ಟವರಿಗೇನು ಗೊತ್ತು
ಸಂಶಯದಿಂದ ನೋವು ಅನುಭವಿಸಿದವರ ಸಂಕಟ…

ಸಹಾಯ ಮಾಡದವರಿಗೇನು ಗೊತ್ತು
ಸಹಾಯ ಪಡೆದವರ ಸಂಕಟ…

ದಾನ ಮಾಡದವರಿಗೇನು ಗೊತ್ತು
ದಾನದ ಮಹತ್ವ…

ಪರೋಪಕಾರ ಮಾಡದವರಿಗೇನು ಗೊತ್ತು
ಉಪಕಾರ ಪಡೆದವರ ಸಂಕಟ…

ಜ್ಞಾನ ನೀಡದವರಿಗೇನು ಗೊತ್ತು
ಅಜ್ಞಾನದಿಂದ ನೋವು ಅನುಭವಿಸುವವರ ಸಂಕಟ…

ಮೋಸ ಮಾಡಿದವರಿಗೇನು ಗೊತ್ತು
ಮೋಸಕ್ಕೊಳಗಾದವರ ಸಂಕಟ….

ಪ್ರೀತಿ ತೋರದವರಿಗೇನು ಗೊತ್ತು
ಪ್ರೀತಿಯಿಂದ ವಂಚಿತರಾದವರ ಸಂಕಟ…

ಪೋಷಕರಿದ್ದವರಿಗೇನು ಗೊತ್ತು
ಪೋಷಕರಿಲ್ಲದವರ ಸಂಕಟ…
…….

Leave a Reply

Back To Top