ಕವಿತೆ
ಮಾವನ ಕರೆ
ಶೃತಿ ಮೇಲುಸೀಮೆ
ಮೊಂಡ ಕೋಲ ಕಟ ಕಟ ಕುಟ್ಟುತ್ತಾ
ಒಂಟಿ ಕಾಲ ಕುಂಟ ಮಾವ
ಕೂಗ್ತಾ ಬಂದಿದ್ದ ಕೂಗ್ತಾ ಬಂದಿದ್ದ
ನೀಲವ್ವ ತಾರವ್ವ ಎಂದು
ಕಣ್ ಅಗಲಿಸಿ ಕೇಳ್ತಾ
ನೋಡ್ತಾ ನಿಂತಿದ್ದ ನೋಡ್ತಾ ನಿಂತಿದ್ದ
ಹಸಿದ ಹೊಟ್ಟೆ , ಸಪ್ಪೆ ಮಾರಿ ಮಾಡ್ಕೊಂಡು
ತಿನ್ನಕ ತಾರವ್ವ ತಂಗ್ಯವ್ವ ಎಂದು
ಕರಿತಾ ನಿಂತಿದ್ದ ಕರಿತಾ ನಿಂತಿದ್ದ
ಪುಟ್ಟಿ ಪುಟ್ಟಿ ಹಣ್ಣು ಮಾರುವಾಗ
ರೊಕ್ಕ ಕೊಟ್ಟು ಒಯ್ಯನದಿದ್ದ ಮಾವ ಇಂದು
ಕಿಸೆಲೀ ರೊಕ್ಕ ಇಲ್ಲದೆ ಬಾಯಿ ಚಪ್ಪರಿಸುತದ್ದ
ಸೊಸೆ ಮುಂದೆ ಸೋತು ಕೇಳ್ತಿದ್ದ ಸೋತು ಕೇಳ್ತಿದ್ದ
ಬಾ ಮಾವ ಏನು ಉಂಡಿ ಎಂದಾಗ
ತೊಂಬ್ಲ ತಿಂದು ಬಂದಿನಿ ,ರುಚಿ ಕೆಟ್ಟ ಬಾಯಿ
ಗಂಗಳದಲ್ಲಿ ಅಂಬಲಿ ಆದ್ರೂ
ಕೊಡವ್ವ ಎಂದಿದ್ದ ಕೊಡವ್ವ ಎಂದಿದ್ದ
ಹೇಗಿದಿಯಾ ಮಾವ ಎಂದಾಗ
ನನ್ನ ಬದುಕು ನಾಟಕದ ಪಾತ್ರ ಆದಂಗಾಗಿದೆ
ಹರೆದರಲ್ಲಿ ವಿಜೃಂಭಿಸಿದ ಜೀವ
ಸತ್ವ ಕಳಕೊಂಡ ಕಲ್ಕಿ ಜಗ ಎಂದಿದ್ದ ಕಲ್ಕಿ ಜಗ ಎಂದಿದ್ದ
ಇದ್ದು ಇಲ್ಲದಂಗಿರುವ ಜೀವ್ನ ಕಾಳು ಇದೆ ಕೂಳಿಲ್ಲ
ಹಣದ ಹುಚ್ಚು ಹಿಡಿದ ಮನಸು
ಎಲ್ಲಾ ಇದ್ದು ಇಲ್ಲೆ ಸುತ್ತುತ್ತಿದೆ ಏನು ಇಲ್ಲದಂಗ ಎಂದು
ನಿಟ್ಟುಸಿರು ಬಿಟ್ಟಿದ್ದ ನಿಟ್ಟುಸಿರು ಬಿಟ್ಟಿದ್ದ
****
ಬಹಳ ಚೆನ್ನಾಗಿದೆ!