ಪ್ರೇಮವ್ಯೋಮಯಾನ…!
ಕವಿತೆ ಪ್ರೇಮವ್ಯೋಮಯಾನ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಡಾ. ಅರಕಲಗೂಡು ನೀಲ ಚಂದ್ರನ ಗುರುತು ಹಿಡಿಯುವುದೇ ಹಾಗೆಗುರುತ್ವ ಹಗುರುಮೇಲ್ಮೈ ಭೂಮಿಗಿಂತ ನವುರುಮೇಲೆ ಬಿದ್ದುದೆಲ್ಲದರ ಅಲ್ಪ ಜಿಗಿತಹಾಗಿದ್ದೂ ನಮ್ಮ ಜನ ನೂರಾರುನಗರಿ ನಿರ್ಮಿಸಿ ಚಂದಿರನೀಗನಿರ್ಭರ ಭರ್ತಿ ಭಾರ! ಚಂದ್ರನಾಗರಿಕ ಸೂರ್ಯಕುವರತಾನಲ್ಲಿಂದಲೆ ಇಣುಕಿಅವನಿಯತ್ತ ಕಣ್ಣಲ್ಲೆ ಕುಟುಕಿಭುವನಸುಂದರಿ ವಸುಕಾಂತೆಗೆಗಂಟು ಮೂರನುಅಂಘ್ರಿ ಏಳನುಅಂಗೀಕರಿಸಿ ಪೂರ್ಣಚಂದ್ರನ ಕಡೆರಾಕೆಟ್ಟು ಬಿಟ್ಟನು! ದಿಗ್ಭ್ರಾಂತಳಾದಳು ವಸುಕಾಂತೆಕೇಳರಿಯದೆ ಕಂಡ ಆ ಚಂದ್ರಸಂತೆ!ಭುವಿಯಲ್ಲಿ ಬರಿ ಬಸ್ಸು, ಈಗೀಗಸೂಪರ್ ಸ್ಪೀಡ್ ರೈಲು, ವಿಮಾನಮಾನವರಹಿತ ಅಥವಾಅವನನ್ನೂ ಹೊತ್ತ ರಾಕೆಟ್ಟುಆಗೊಮ್ಮೆ ಈಗೊಮ್ಮೆ ವಿರಳವಾಗಿ! ಇಲ್ಲಿ, ವ್ಯೋಮದ […]
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಬಳ್ಳಿಯಂತೆ ಬಳಕುತ ಗೆಜ್ಜೆ ಸದ್ದಲಿ ಜಗ ಗೆಲ್ಲುವ ಆಸೆಕಣ್ಣ ನೋಟದಲಿ ಹೂ ಬಾಣ ಹೂಡಿ ಹೃದಯ ಕೊಲ್ಲುವ ಆಸೆ ಎದೆ ಹೊಲದಲಿ ಗೆಜ್ಜೆ ಹೆಜ್ಜೆ ಮೂಡಿಸುತ ಹೊಸ ಹಾದಿ ಮಾಡಿದೆಒಲವಿನ ಅಮಲೇರಿಸುವ ಹನಿ ಹನಿ ಶರಾಬು ಚೆಲ್ಲುವ ಆಸೆ ಪ್ರೀತಿಯ ಬನದಲಿ ಚಿಗುರಿದ ಹೂ ಕಾಯಿ ಹಣ್ಣು ಮನ ಸೆಳೆಯುತಿವೆಅನುರಾಗದ ತೋಟದಲ್ಲಿನ ಮಾಗಿದ ಮಾವು ಮೆಲ್ಲುವ ಆಸೆ ಮನದಂಗಳದಲಿ ಗರಿಬಿಚ್ಚಿದ ನಾಟ್ಯ ಮಯೂರಾಗಿ ಕುಣಿದೆಬೆರಗು ಮೂಡಿಸುವ ಚೆಲುವ ಶಿಲಾ ಬಾಲೆಯಾಗಿ ನಿಲ್ಲುವ […]
ಹೊಸ ದಿಗಂತ
ಕವಿತೆ ಹೊಸ ದಿಗಂತ ಅಕ್ಷತಾ ಜಗದೀಶ ಚುಮ್ಮು ಚುಮ್ಮು ನಸುಕಿನಲಿಮುಂಜಾನೆಯ ನಡಿಗೆ..ತಾ ಬರುವ ಸೂಚನೆ ನೀಡುತದಿನಕರ ಮೂಡುವ ಘಳಿಗೆ..ಹಕ್ಕಿಗಳ ಮಧುರ ಇಂಚರ ನಾದತಲೆ ತೂಗುತ ನಿಂತಿವೆನಡೆವ ದಾರಿಯ ಇಕ್ಕೆಲಗಳಲ್ಲಿಹೂ ಗಿಡ ಬಳ್ಳಿಗಳು….. ಅದೇಕೋ ಏನೋ..ಕಾಣದಾಗಿದೆ ಇಂದುಆ ಸುಂದರ ಕ್ಷಣಗಳು..ಮುಂಜಾನೆ ನಡಿಗೆ ಇದೆ…ಮೈ ಕೊರೆಯುವ ಚಳಿಯು ಇದೆದಿನಕರನ ಆಗಮನವು ಆಗುತಿದೆ..ಆದರೇನು…?ಹಕ್ಕಿಗಳ ನಾದವಿಲ್ಲದಾರಿಯ ಇಕ್ಕೆಲಗಳಲ್ಲಿಸ್ವಾಗತ ಕೋರುತ ನಿಂತಮರಗಿಡಗಳು ಕಾಣದಾಗಿದೆ… ಹಾ! ಈಗ ಅರಿವಾಯಿತೆನಗೆನಾ ನಡೆದ ದಾರಿ ಈಗಮರ ಗಿಡಗಳ ನುಂಗಿ ನಗರವಾಗಿದೆಕೆರೆಗಳಿಲ್ಲ ಮರ ಗಿಡಗಳಿಲ್ಲಚಿಲಿಪಿಲಿ ಹಾಡುವ ಹಕ್ಕಿಗಳಿಲ್ಲ ವಿಪರ್ಯಾಸವೆಂದರೆ …..ಅದರ […]
ಗಜಲ್
ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು […]
ಮಣ್ಣಿಗೆ ವಿದಾಯ ಹೇಳುತ್ತೇವೆ!
ಕವಿತೆ ಮಣ್ಣಿಗೆ ವಿದಾಯ ಹೇಳುತ್ತೇವೆ! ಅಲ್ಲಾಗಿರಿರಾಜ್ ಕನಕಗಿರಿ ಗುಟ್ಕಾ- ತಂಬಾಕು ಬೀರ್ – ಬ್ರಾಂಡಿಮಾರುವವರು ದೇಶವಾಳುತ್ತಿದ್ದಾರೆ.ಅವರ ವಸ್ತುವಿಗೆ ಅವರೇ ಬೆಲೆ ನಿಗದಿ ಮಾಡಿಕೊಂಡು. ಆದರೆ ನಾವು ಇಡೀ ದೇಶಕ್ಕೆ ಅನ್ನ ಕೊಡುತ್ತೇವೆ.ಬೆಳೆಗೂ ಬದುಕಿಗೂ ಬೆಲೆ ಇಲ್ಲದೆ ಬೀದಿ ಪಾಲಾಗಿದ್ದೇವೆ. ಅನ್ನ ಉಂಡವರು ಒಂದು ಸಲ ಯೋಚಿಸಿ ನೋಡಿ.ಅನ್ನದಾತನ ನೋವು ಸಾವು ಸಂಕಟ ಏನೆಂದು. ಇಲ್ಲವೆಂದರೆ ನಾವೇ ಮಣ್ಣಿಗೆ ವಿದಾಯ ಹೇಳುತ್ತೇವೆ.ಮಕ್ಕಳ ಹೆಗಲ ಮೇಲೆ ಇಡಬೇಕೆಂದ ನೇಗಿಲು,ನಿಮ್ಮ ಮ್ಯೂಸಿಯಂನಲ್ಲಿ ಇಟ್ಟು ಸಲಾಂ ಹೊಡೆಯುತ್ತೇವೆ ***************************
ಎದೆಯಲ್ಲಿ ಅಡಗಿದ ಬೆಳಕು
ಕವಿತೆ ಎದೆಯಲ್ಲಿ ಅಡಗಿದ ಬೆಳಕು ಡಾ ರೇಣುಕಾ ಅರುಣ ಕಠಾರಿ ನನಗೆ ನಾನಾಗುವಾಸೆನಿನ್ನನೂ ಒಳಗೊಂಡು ನೋವಿನ ನಡುವೆಯೂನನ್ನೆದೆಯಲಿ ಹೂವರಳಿಸಿನಕ್ಷತ್ರ ಪುಂಜಗಳ ಕಣ್ತಂಬಿಸಿಆ ಆಕಾಶದಲ್ಲಿ ದಾರಿ ಕಾಣುವಾಸೆ ಹೆಚ್ಚಾಗಿದೆ. ನನ್ನ ಪ್ರೀತಿ-ನೀತಿದುಃಖ-ದುಮ್ಮಾನಗಳ ನಡುವೆಆಸೆ ನಿರಾಸೆಗಳ ಕೇಂದ್ರದ ಸಾಗರದಲ್ಲಿಯುಬದುಕಿನ ಸಾಂದ್ರ ನೀನೇ. ಪುಟಿದೇಳುವುದು ಒಮ್ಮೊಮ್ಮೆ ನಿನ್ನಲೂಆರ್ಭಟ ದುರಂಕಾರಎದೆಯಲ್ಲಿ ಅಡಗಿದಶ್ರೇಷ್ಠತೆಯ ಹಾವ ಭಾವದಲ್ಲಿಅಲ್ಲಗಳಿದಾಗಲೆಲ್ಲ ನಾನುಅನುದಿನವು ಸಾಯುತಲಿರುವೆ. ಆಗಾಗಸಂಜೆಯ ತಂಗಾಳಿಯ ಬೊಗಸೆಯಲಿಕೆನ್ನೆಗಳ ತುಂಬಿಸಿಎದೆಗೇರಿಸಿಕೊAಡಾಗನಿನ್ನೆದೆಯ ಬಡಿತದ ಸದ್ದುಗಳಲೆಕ್ಕ ಹಾಕುವೆನು. ಪ್ರತಿ ಮಿಡಿತವೂಬದುಕಿನಜಮಾ ಖರ್ಚಿನ ಪುಟಗಳೇ.ಪುಟಗಳ ಲೆಕ್ಕವೆ ಮೀರಿ ನಿಂತಿರುವಚಿಲುಮೆಯ ಸಾಕ್ಷತ್ಕಾರ ನೀನು. ಇದಕ್ಕೆಎಲ್ಲವುಗಳ ನಡುವೆನಿನ್ನನೂ […]
ಪಾತ್ರೆಗಳು ಪಾತ್ರವಾದಾಗ
ಕವಿತೆ ಪಾತ್ರೆಗಳು ಪಾತ್ರವಾದಾಗ ಶಾಲಿನಿ ಆರ್. ಬೇಳೆ ಬೇಯಿಸೋಕೆಪಾತ್ರೆ ಬೇಕೆ ಬೇಕು!ಹೊಟ್ಟೆ ತುಂಬಿಸೋಕೆಮನದ ಅಗಣಿತಭಾವಗಳತಣಿಸೋಕೆ? ಹುಟ್ಟಿದ ಹಸಿವಿಗೆತಿನುವ ಹಂಬಲಕೆರುಚಿ ನೋಡೋಕೆಕಾದ ಮನಗಳಿಗೆಉಣ ಬಡಿಸೋಕೆಹೇಗಾದರೂ ಸರಿ! ಹದವಾದ ರುಚಿತರಿಸಬೇಕು,ಬೆಂದ ಬೇಳೆಗಳಬತ್ತಿಸಿ,ಕರಗಿಸಿಗುರಾಡಿ ,ಬಾಡಿಸಿಮತ್ತಷ್ಟು ನೀರುಣಿಸಿನೆಪಕ್ಕೊಂದು ಪಾತ್ರೆಯಿರಿಸಿ! ಹಸಿದವರಿದ್ದರೆಹೇಳಿ?ಬೆಂದ ಬೇಳೆಗಳ ರುಚಿಗೆ!ಹಸಿವಿಲ್ಲದವರನ್ನುಕರೆತನ್ನಿ ,ಹಸಿವ ಇಂಗಿಸಲೋ?ಇಲ್ಲವಾದರೆ,ರುಚಿ ಸವಿಯಲು! ಸ್ವಲ್ಪ ಹುಳಿ,ಖಾರಒಗ್ಗರಣೆ ಸಾಕು!ಇನ್ನಿತರ ಮಸಾಲಪದಾರ್ಥಗಳುಬೇಕಿದ್ದರೆಪಾತ್ರಕ್ಕೊಪ್ಪುವಂತೆ!ರುಚಿಗೆ ಇಂತಿಷ್ಟೇ ಉಪ್ಪು,ಮುಖ ಕಿವುಚದಂತೆ ಮತ್ತೆ! ಹಿತ ಮಿತವಾದಪದಾರ್ಥಗಳುಪಾತ್ರಗಳ ಸೋಕಿನಾಲಿಗೆಯ ರುಚಿ!ಮನಕಿಳಿದ ಗೆಲುವೋ?ಬೆಂದ ಬೇಳೆಯದೋಮನದಗಲದಪಾ(ತ್ರೆ)ತ್ರ ದೋ??? ****************************************************
ಅನಿರ್ಬಂಧ
ಆದರೆ…ಮಗೂ
ಅನ್ಯರು ಯಾರೂ ಒಳ ಪ್ರವೇಶಿಸಲೇ ಇಲ್ಲ..!
ಜೀಕು ಜೋಕಾಲಿ
ಜೀಕು ಜೋಕಾಲಿ ಕೆ.ಸುನಂದಾ ಸಾಗುತಿರಲೀ ಪಯಣ ನಿಲ್ಲದೇ ಬಾಳಲಿಏಳು ಬೀಳುಗಳೆನಿತು ಬಂದರೂ ಬರಲಿಕಾರ್ಮೋಡ ಕರಗುತ ಸರಿಯಲೇಬೇಕುಹಸನಾದ ಹೊಂಬೆಳಕು ಸೂಸಲೇಬೇಕು ಬದುಕೊಂದು ಆಟ ಸವಿಯ ರಸದೂಟಆಸ್ವಾದಿಸುತ ನಡೆ ಸುಂದರದಾ ನೋಟದೇವನಿತ್ತ ಕಾಣಿಕೆ ಈ ಜಗದ ಚಲನೆಯುನಾವೆಲ್ಲರೂ ಅವನಾಟದ ಗೊಂಬೆಯು ಒಲವಿನ ಹಂದರದಿ ಜೀಕುತ ಜೋಕಾಲಿಏರಿಳಿಯುತ್ತ ಸಾಗು ನೀ ಸಮಭಾವದಲಿಸ್ಥಿರವಲ್ಲವೋ ಬಂಧನಗಳು ಭುವಿಯಲಿಇದ್ದರೂ ಇಲ್ಲದಂತೆ ಇರಬೇಕು ಜಗದಲಿ ಪ್ರೀತಿ ಪ್ರೇಮದ ಮನಸ್ಸುಗಳೆ ಆಲಯವುಅಂತರಾತ್ಮನೇ ಗರ್ಭಗುಡಿಯ ದೇವನುವರ್ಣಿಸಲಾಗದ ಪ್ರಕೃತಿಯ ಪೂಜಿಸುತ್ತನಡೆ ನೀ ಉಪಕಾರ ಸ್ಮರಣೆ ನೆನೆಯುತ್ತ **************************************
ಗಜಲ್
ಗಜಲ್ ಸಿದ್ಧರಾಮ ಕೂಡ್ಲಿಗಿ ಮನದ ದುಗುಡ ಕಳೆಯಲಿಕ್ಕೆ ಇರುವುದೊಂದು ಕಿಟಕಿ ಜಗದ ತಮವ ತೊಡೆಯಲಿಕ್ಕೆ ಇರುವುದೊಂದು ಕಿಟಕಿ – ಅರಿವ ಕುಡಿದು ಎದೆಯ ತೆರೆದು ಮೂಡಿತೊಂದು ಕನಸು ಬಯಲ ಹಕ್ಕಿ ಮೇಲೆ ಹಾರಲಿಕ್ಕೆ ಇರುವುದೊಂದು ಕಿಟಕಿ – ಏನೊಂದೂ ಇರದ ತಾಣದಿಂದ ತೇಲಿ ಬಂತೊಂದು ರಾಗ ರಾಗದೊಳಗೆ ರಾಗ ಮೂಡಲಿಕ್ಕೆ ಇರುವುದೊಂದು ಕಿಟಕಿ – ಸೂರ್ಯ ಚಂದ್ರ ತಾರೆ ಧೂಮಕೇತು ಮತ್ತದೇ ಕಾಲಚಕ್ರ ಜೀವಸೆಲೆಯ ಸುರುಳಿ ಮೂಡಲಿಕ್ಕೆ ಇರುವುದೊಂದು ಕಿಟಕಿ – ನೊಂದು ಬೆಂದು ದಹಿಸಿಕೊಂಡು ಅರಳಿತೊಂದು […]