ಗಜಲ್
ಪ್ರಭಾವತಿ ಎಸ್ ದೇಸಾಯಿ
ಬಳ್ಳಿಯಂತೆ ಬಳಕುತ ಗೆಜ್ಜೆ ಸದ್ದಲಿ ಜಗ ಗೆಲ್ಲುವ ಆಸೆ
ಕಣ್ಣ ನೋಟದಲಿ ಹೂ ಬಾಣ ಹೂಡಿ ಹೃದಯ ಕೊಲ್ಲುವ ಆಸೆ
ಎದೆ ಹೊಲದಲಿ ಗೆಜ್ಜೆ ಹೆಜ್ಜೆ ಮೂಡಿಸುತ ಹೊಸ ಹಾದಿ ಮಾಡಿದೆ
ಒಲವಿನ ಅಮಲೇರಿಸುವ ಹನಿ ಹನಿ ಶರಾಬು ಚೆಲ್ಲುವ ಆಸೆ
ಪ್ರೀತಿಯ ಬನದಲಿ ಚಿಗುರಿದ ಹೂ ಕಾಯಿ ಹಣ್ಣು ಮನ ಸೆಳೆಯುತಿವೆ
ಅನುರಾಗದ ತೋಟದಲ್ಲಿನ ಮಾಗಿದ ಮಾವು ಮೆಲ್ಲುವ ಆಸೆ
ಮನದಂಗಳದಲಿ ಗರಿಬಿಚ್ಚಿದ ನಾಟ್ಯ ಮಯೂರಾಗಿ ಕುಣಿದೆ
ಬೆರಗು ಮೂಡಿಸುವ ಚೆಲುವ ಶಿಲಾ ಬಾಲೆಯಾಗಿ ನಿಲ್ಲುವ ಆಸೆಗೆ
ಮೃದಂಗದ ನಾದ ತಾಳಕ್ಕೆ ತುಂಡಾಯಿತು ನೂಪುರ ಮಾಲೆ
ಅವನ ಧ್ಯಾನ “ಪ್ರಭೆ”ಯಲಿ ತಲೀನಳಾಗಿ ಸೋಲುವ ಆಸೆ
************************************