ಕವಿತೆ
ಮಣ್ಣಿಗೆ ವಿದಾಯ ಹೇಳುತ್ತೇವೆ!
ಅಲ್ಲಾಗಿರಿರಾಜ್ ಕನಕಗಿರಿ
ಗುಟ್ಕಾ- ತಂಬಾಕು ಬೀರ್ – ಬ್ರಾಂಡಿ
ಮಾರುವವರು ದೇಶವಾಳುತ್ತಿದ್ದಾರೆ.
ಅವರ ವಸ್ತುವಿಗೆ ಅವರೇ ಬೆಲೆ ನಿಗದಿ ಮಾಡಿಕೊಂಡು.
ಆದರೆ ನಾವು ಇಡೀ ದೇಶಕ್ಕೆ ಅನ್ನ ಕೊಡುತ್ತೇವೆ.
ಬೆಳೆಗೂ ಬದುಕಿಗೂ ಬೆಲೆ ಇಲ್ಲದೆ ಬೀದಿ ಪಾಲಾಗಿದ್ದೇವೆ.
ಅನ್ನ ಉಂಡವರು ಒಂದು ಸಲ ಯೋಚಿಸಿ ನೋಡಿ.
ಅನ್ನದಾತನ ನೋವು ಸಾವು ಸಂಕಟ ಏನೆಂದು.
ಇಲ್ಲವೆಂದರೆ ನಾವೇ ಮಣ್ಣಿಗೆ ವಿದಾಯ ಹೇಳುತ್ತೇವೆ.
ಮಕ್ಕಳ ಹೆಗಲ ಮೇಲೆ ಇಡಬೇಕೆಂದ ನೇಗಿಲು,
ನಿಮ್ಮ ಮ್ಯೂಸಿಯಂನಲ್ಲಿ ಇಟ್ಟು ಸಲಾಂ ಹೊಡೆಯುತ್ತೇವೆ
***************************