ಕವಿತೆ
ಪ್ರೇಮವ್ಯೋಮಯಾನ…!
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಡಾ. ಅರಕಲಗೂಡು ನೀಲ
ಚಂದ್ರನ ಗುರುತು ಹಿಡಿಯುವುದೇ ಹಾಗೆ
ಗುರುತ್ವ ಹಗುರು
ಮೇಲ್ಮೈ ಭೂಮಿಗಿಂತ ನವುರು
ಮೇಲೆ ಬಿದ್ದುದೆಲ್ಲದರ ಅಲ್ಪ ಜಿಗಿತ
ಹಾಗಿದ್ದೂ ನಮ್ಮ ಜನ ನೂರಾರು
ನಗರಿ ನಿರ್ಮಿಸಿ ಚಂದಿರನೀಗ
ನಿರ್ಭರ ಭರ್ತಿ ಭಾರ!
ಚಂದ್ರನಾಗರಿಕ ಸೂರ್ಯಕುವರ
ತಾನಲ್ಲಿಂದಲೆ ಇಣುಕಿ
ಅವನಿಯತ್ತ ಕಣ್ಣಲ್ಲೆ ಕುಟುಕಿ
ಭುವನಸುಂದರಿ ವಸುಕಾಂತೆಗೆ
ಗಂಟು ಮೂರನು
ಅಂಘ್ರಿ ಏಳನು
ಅಂಗೀಕರಿಸಿ ಪೂರ್ಣಚಂದ್ರನ ಕಡೆ
ರಾಕೆಟ್ಟು ಬಿಟ್ಟನು!
ದಿಗ್ಭ್ರಾಂತಳಾದಳು ವಸುಕಾಂತೆ
ಕೇಳರಿಯದೆ ಕಂಡ ಆ ಚಂದ್ರಸಂತೆ!
ಭುವಿಯಲ್ಲಿ ಬರಿ ಬಸ್ಸು, ಈಗೀಗ
ಸೂಪರ್ ಸ್ಪೀಡ್ ರೈಲು, ವಿಮಾನ
ಮಾನವರಹಿತ ಅಥವಾ
ಅವನನ್ನೂ ಹೊತ್ತ ರಾಕೆಟ್ಟು
ಆಗೊಮ್ಮೆ ಈಗೊಮ್ಮೆ ವಿರಳವಾಗಿ!
ಇಲ್ಲಿ, ವ್ಯೋಮದ ಉತ್ತುಂಗಕ್ಕೇ
ಅಂತರಂಗಕ್ಕೇ ಪಯಣ
ತಾಸುತಾಸಿಗೂ ಹತ್ತಿಪ್ಪತ್ತು
ಝೇಂಕರಿಸಿ ಹಾರಾಡುವ
ದೈತ್ಯಾಕಾರ ರಾಕೆಟ್ಟು!
ನಭೋನಿಲ್ದಾಣಗಳಲಿ ಎಲ್ಲೆಲ್ಲೂ
ಕಂಡರಿಯದ ಸೌಲಭ್ಯ ಸಂಪತ್ತು…
ಕ್ಷೀರಪಥದ ಎಲ್ಲ ಗ್ರಹಕ್ಕೂ
ಕ್ಷುದ್ರಗ್ರಹ ಒಂದೊದಕ್ಕೂ
ಸಂಪರ್ಕದೊತ್ತಡ
ಹಾಗೆಯೇ ವ್ಯೋಮಗರ್ಭದ
ಅನಂತದಲ್ಲಿ ಅವಿತ
ಕಂಡು ಕಾಣದೆಲ್ಲ ದೈತ್ಯ ಕಾಯಕ್ಕೂ
ಕ್ಷಣಾರ್ಧದಲಿ ಚಿಮ್ಮಿ ಮಿಂಚಂತೆ
ಭುಸುಗುಟ್ಟು ಹರಿದೋಡಿ ಮಾಯ
ಸುರಿಮಳೆ ರಾಕೆಟ್ಟು…!
ಸೂರ್ಯಕುವರ ವಸುಕಾಂತೆ
ಇಬ್ಬರೂ ವೈವಾಹಿಕ ಮಧುಸ್ಪರ್ಷಕೆ
ಹಾರಿದಲೆಲ್ಲ ವಿನೂತನ ಚಂದ್ರರೂಪ
ಕಣ್ಣು ತುಂಬಿ ಚಲ್ಲುವ ಬೆಳದಿಂಗಳು
ಅಮರಾಮೃತ ಮೀರಿದ
ಮೃದು ಮಧುರ ಮಧುಪಾತದ
ಓಕುಳಿಯಲಿ ಈಜು ಈಜಾಟ…
*****************************
ಕಂಠ ಮೂರ್ತಿ.
ಕವನ ಬಹಳ ಚನ್ನಾಗಿದೆ. ಅಭಿನಂದನೆಗಳು
Kavithe apyayamanavagide