ಕವಿತೆ
ಪಾತ್ರೆಗಳು ಪಾತ್ರವಾದಾಗ
ಶಾಲಿನಿ ಆರ್.
ಬೇಳೆ ಬೇಯಿಸೋಕೆ
ಪಾತ್ರೆ ಬೇಕೆ ಬೇಕು!
ಹೊಟ್ಟೆ ತುಂಬಿಸೋಕೆ
ಮನದ ಅಗಣಿತಭಾವಗಳ
ತಣಿಸೋಕೆ?
ಹುಟ್ಟಿದ ಹಸಿವಿಗೆ
ತಿನುವ ಹಂಬಲಕೆ
ರುಚಿ ನೋಡೋಕೆ
ಕಾದ ಮನಗಳಿಗೆ
ಉಣ ಬಡಿಸೋಕೆ
ಹೇಗಾದರೂ ಸರಿ!
ಹದವಾದ ರುಚಿ
ತರಿಸಬೇಕು,
ಬೆಂದ ಬೇಳೆಗಳ
ಬತ್ತಿಸಿ,ಕರಗಿಸಿ
ಗುರಾಡಿ ,ಬಾಡಿಸಿ
ಮತ್ತಷ್ಟು ನೀರುಣಿಸಿ
ನೆಪಕ್ಕೊಂದು ಪಾತ್ರೆಯಿರಿಸಿ!
ಹಸಿದವರಿದ್ದರೆ
ಹೇಳಿ?
ಬೆಂದ ಬೇಳೆಗಳ ರುಚಿಗೆ!
ಹಸಿವಿಲ್ಲದವರನ್ನು
ಕರೆತನ್ನಿ ,
ಹಸಿವ ಇಂಗಿಸಲೋ?
ಇಲ್ಲವಾದರೆ,
ರುಚಿ ಸವಿಯಲು!
ಸ್ವಲ್ಪ ಹುಳಿ,ಖಾರ
ಒಗ್ಗರಣೆ ಸಾಕು!
ಇನ್ನಿತರ ಮಸಾಲ
ಪದಾರ್ಥಗಳು
ಬೇಕಿದ್ದರೆ
ಪಾತ್ರಕ್ಕೊಪ್ಪುವಂತೆ!
ರುಚಿಗೆ ಇಂತಿಷ್ಟೇ ಉಪ್ಪು,
ಮುಖ ಕಿವುಚದಂತೆ ಮತ್ತೆ!
ಹಿತ ಮಿತವಾದ
ಪದಾರ್ಥಗಳು
ಪಾತ್ರಗಳ ಸೋಕಿ
ನಾಲಿಗೆಯ ರುಚಿ!
ಮನಕಿಳಿದ ಗೆಲುವೋ?
ಬೆಂದ ಬೇಳೆಯದೋ
ಮನದಗಲದ
ಪಾ(ತ್ರೆ)ತ್ರ ದೋ???
****************************************************
good
ಧನ್ಯವಾದಗಳು ಗೀತಾ ಮೇಡಂ…
ಬದುಕು ಎಂಬ ಪಾತ್ರದಲ್ಲಿ ಪಾತ್ರೆ ಅತ್ಯವಶ್ಯಕ..
ಬದುಕುಳಿಯಲು ಅಹಾರಬೇಕು ,ಅಹಾರ ಬೆಯಿಸಲು ಪಾತ್ರೆ,,ಪಾತ್ರದ ಬದುಕು ನಿಭಾಯಿಸಲು, ಪಾತ್ರೆಯ ಪಾತ್ರ ಪ್ರಮುಖ,
ಧನ್ಯವಾದಗಳು ಡಾ. ಸುಧಾ…