ಕವಿತೆ
ಎದೆಯಲ್ಲಿ ಅಡಗಿದ ಬೆಳಕು
ಡಾ ರೇಣುಕಾ ಅರುಣ ಕಠಾರಿ
ನನಗೆ ನಾನಾಗುವಾಸೆ
ನಿನ್ನನೂ ಒಳಗೊಂಡು ನೋವಿನ ನಡುವೆಯೂ
ನನ್ನೆದೆಯಲಿ ಹೂವರಳಿಸಿ
ನಕ್ಷತ್ರ ಪುಂಜಗಳ ಕಣ್ತಂಬಿಸಿ
ಆ ಆಕಾಶದಲ್ಲಿ ದಾರಿ ಕಾಣುವಾಸೆ ಹೆಚ್ಚಾಗಿದೆ.
ನನ್ನ ಪ್ರೀತಿ-ನೀತಿ
ದುಃಖ-ದುಮ್ಮಾನಗಳ ನಡುವೆ
ಆಸೆ ನಿರಾಸೆಗಳ ಕೇಂದ್ರದ ಸಾಗರದಲ್ಲಿಯು
ಬದುಕಿನ ಸಾಂದ್ರ ನೀನೇ.
ಪುಟಿದೇಳುವುದು ಒಮ್ಮೊಮ್ಮೆ ನಿನ್ನಲೂ
ಆರ್ಭಟ ದುರಂಕಾರ
ಎದೆಯಲ್ಲಿ ಅಡಗಿದ
ಶ್ರೇಷ್ಠತೆಯ ಹಾವ ಭಾವದಲ್ಲಿ
ಅಲ್ಲಗಳಿದಾಗಲೆಲ್ಲ ನಾನು
ಅನುದಿನವು ಸಾಯುತಲಿರುವೆ.
ಆಗಾಗ
ಸಂಜೆಯ ತಂಗಾಳಿಯ ಬೊಗಸೆಯಲಿ
ಕೆನ್ನೆಗಳ ತುಂಬಿಸಿ
ಎದೆಗೇರಿಸಿಕೊAಡಾಗ
ನಿನ್ನೆದೆಯ ಬಡಿತದ ಸದ್ದುಗಳ
ಲೆಕ್ಕ ಹಾಕುವೆನು.
ಪ್ರತಿ ಮಿಡಿತವೂ
ಬದುಕಿನ
ಜಮಾ ಖರ್ಚಿನ ಪುಟಗಳೇ.
ಪುಟಗಳ ಲೆಕ್ಕವೆ ಮೀರಿ ನಿಂತಿರುವ
ಚಿಲುಮೆಯ ಸಾಕ್ಷತ್ಕಾರ ನೀನು.
ಇದಕ್ಕೆ
ಎಲ್ಲವುಗಳ ನಡುವೆ
ನಿನ್ನನೂ ಒಳಗೊಂಡು
ನನಗೆ ನಾನಾಗುವಾಸೆ.
*******************************