ಕಾವ್ಯಯಾನ
ಲೆಕ್ಕ ಇಡುವುದನ್ನು ನಿಲ್ಲಿಸಿದ್ದೇನೆ ಚಂದ್ರಪ್ರಭ.ಬಿ ಅದೊಂದು ದಿನ ಅಪ್ಪ ನನ್ನ ಅವಸರಿಸಿ ಬರ ಹೇಳಿದ ಶಾಲೆಯಿಂದ ಓಡೋಡಿ ಬಂದ ನನ್ನ ತೆಕ್ಕೆಯಲ್ಲಿ ಬಿಗಿದು ಒಂದೇ ಸಮ ರೋಧಿಸಿದ ಅವನೂ ಅನಾಥನಾಗಿದ್ದ ನನ್ನಂತೆ ತನ್ನವ್ವನ ಕಳಕೊಂಡು ಆಡು ಕುರಿ ದನ ಮೇಯಿಸುತ್ತ ಅಪ್ಪನ ಕೂಗಿಗೆ ಓಗೊಡುತ್ತ ಆಗಾಗ ಶಾಲೆಗೂ ಮುಖ ತೋರಿಸುತಿದ್ದೆ ವರ್ಷದ ಕೊನೆಗೆ ಗೆಳೆಯರೆಲ್ಲ ಮುಂದಿನ ತರಗತಿಗೆ ನಾನು ಮಾತ್ರ ಹಿಂದೆ ಮೇಷ್ಟ್ರು ಹೇಳಿದರು – ‘ಗಣಿತದಲ್ಲಿ ನೀ ಎಲ್ಲ ಕಳಕೊಂಡೆ’ ವಸಂತ ಲಗ್ಗೆಯಿಟ್ಟುದು ಅರಿವಾದುದೇ ಅವಳ […]