ಹಾಯ್ಕುಗಳು
ಹಾಯ್ಕುಗಳು ಭಾರತಿ ರವೀಂದ್ರ 1) ವಾತ್ಸಲ್ಯ ತಾಯಿ ಸೆರಗುಅಂಬರವು ನಾಚಿತುವಾತ್ಸಲ್ಯ ಸಿರಿ. 2) ವಿಸ್ಮಿತ ಸುಖ ಕನಸು :ಕಂದಮ್ಮನ ಮೊಗದಿ :ದೇವ ವಿಸ್ಮಿತ. 3) ಚೆಲವು ಇಳೆ ಚೆಲವು :ಹಸಿರಿನ ಸಿರಿಯು,ನೆಮ್ಮದಿ ಬಿಡು. 4) ಮಧು ಮುತ್ತಿನ ಮಧು :ಮತ್ತೇರಿತು ದುಂಬಿಗೆ,ಶೃಂಗಾರ ಮಾಸ 5) ಹೃದಯ ಖಾಲಿ ಆಗಿತ್ತು :ಕನಸಿಲ್ಲದ ಮನ,ಬೆಂದ ಹೃದಯ. 6) ಸೀಮಂತ ಧರೆ ಸೀಮಂತ :ಹಕ್ಕಿಯ ಗಾನ ಸಭೆ,ನಾಚಿದ ಪ್ರಭೆ. 7) ಹೊಂಬಿಸಿಲು ಕಿರುನಗೆಯು :ಹೊಂಬಿಸಿಲು ಬಾಳಿಗೆ,ಸ್ವರ್ಗವು ಇಲ್ಲೇ. 8) ಹೂ ಬನ […]
ಕಾಡುವ ಹಕ್ಕಿ.
ಕಾಡುವ ಹಕ್ಕಿ ಅಬ್ಳಿ,ಹೆಗಡೆ ಹಾಡು ಹಕ್ಕಿಯೊಂದು ನಿತ್ಯಕಾಡುತಿದೆ ‘ಹಾಡು ನೀನು’ಎಂದು. ಗಂಟಲೊಣಗಿದರೆ ಕಂಠನುಲಿಯದದು ಹಾಡಲೇಗೆ ಇಂದು..? ಮರ್ಮವರಿಯದೆ ಧರ್ಮ,ಕರ್ಮಗಳ ನಡುವೆ ಬಂಧಿ ನಾನು. ಹಾರಲಾಗದಿದೆ ಭಾರ ರೆಕ್ಕೆಯಿದೆ ಹೊರಗೆ ಬಂದರೂನು. ನೋವು,ಹಿಂಸೆಗಳು ಸುತ್ತ ಕುಣಿಯುತಿವೆ ಕೊಳ್ಳಿ ದೆವ್ವದಂತೆ. ಹಸಿರು ಪ್ರಕ್ರತಿಯಾ ತಂಪು,ಸೊಂಪುಗಳು ಒಡಲ ಬೆಂಕಿಯಂತೆ. ಹರಿವನದಿಯಂತೆ ಬದುಕು ಸರಿಯುತಿದೆ ಸೆಳವು ಈಜಲಾರೆ. ಖುಷಿಯ ಬಾನಿನಲಿ ಹಾಡಿ,ತೇಲುವದು ಎಂತೋ…?ಹೇಳಲಾರೆ. ಭಾವ ಬತ್ತಿಹುದುಖುಷಿಯು ಸತ್ತಿಹುದು ಬರದು ಮಧುರಗೀತೆ. […]
ಕನ್ನಡಾಂಬೆ
ಕವಿತೆ ಕನ್ನಡಾಂಬೆ ಚಂದ್ರಮತಿ ಪುರುಷೋತ್ತಮ್ ಭಟ್ ಕರುನಾಡ ತಾಯೆ ಭುವನೇಶ್ವರೀ ಅಮ್ಮಾ ಕರುಣೇಶ್ವರೀಕರವ ಮುಗಿದು ಕೇಳುವೆನು ಕರುಣಿಸು ಬಾ ಕರುಣಾಮಯೀ ಬಲಗೈಯಲ್ಲಿ ದೀಪ ಹಿಡಿದ ಜ್ಞಾನದಾತೆ ಅಮ್ಮಾ ನೀನುಎಡಗೈಯಲ್ಲಿ ಪತಾಕೆ ಹಿಡಿದ ನ್ಯಾಯದೇವಿ ಅಮ್ಮಾ ನೀನು ಫಲಪುಷ್ಪ ಭರಿತಳಾಗಿ ಗಿರಿಯನೇರಿ ನಿಂತ ಅಮ್ಮಾ ನೀನುನಮ್ಮೆಲ್ಲರ ಪೊರೆಯುತಿರುವ ಅನ್ನದಾತೆ ಅಮ್ಮಾ ನೀನು ಅದೆಂಥ ಸ್ವರ್ಗ ಸುಖವು ಅಮ್ಮಾ ಜನ್ಮ ಕೊಟ್ಟ ನಿನ್ನ ಮಡಿಲುಮೇಲುಕೀಳು ಎಣಿಸದೆ ದಯಾಮಯಿಯಾದ ಅಮ್ಮಾ ನೀನು ಅದೆಷ್ಟು ಅಂದ ಚೆಂದ ನನಗೆ ನಿನ್ನ ಅಮ್ಮಾ ಎಂದು […]
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿ ಧಿಕ್ಕರಿಸಿದವನಿಗಾಗಿ ನೆನೆಯುತ್ತಿರುವೆ ನಾನೇಕೆ ಹೀಗೆಒಂದು ನುಡಿ ಆಡದವನಿಗಾಗಿ ಕೂಗುತ್ತಿರುವೆ ನಾನೇಕೆ ಹೀಗೆ ಬರುವನೆಂದು ಪಾರಿಜಾತ ಹೂಗಳನ್ನು ಹಾಸಿದ್ದೆ ಹಾದಿಗುಂಟಒಳಗೆ ಹೆಜ್ಜೆ ಇಡದವನಿಗಾಗಿ ಕಾಯುತ್ತಿರುವೆ ನಾನೇಕೆ ಹೀಗೆ ಹೊಂಗೆ ಮರದಲ್ಲಿ ದುಂಬಿಗಳ ಚಲ್ಲಾಟ ಕಂಡು ಉದ್ವೇಗಗೊಂಡೆಇರುಳೆಲ್ಲಾ ಅವನಿಗಾಗಿ ಕನವರಿಸುತ್ತಿರುವೆ ನಾನೇಕೆ ಹೀಗೆ ಹಂದರದ ಬಳ್ಳಿಯಲಿ ತುಂಬಿ ನಲಿಯುತಿದೆ ಸಿಹಿ ಬಂಡು ಹೀರುತ್ತಾತುಟಿಗೆ ಮಧು ಹಚ್ಚದವನಿಗಾಗಿ ಭಜಿಸುತ್ತಿರುವೆ ನಾನೇಕೆ ಹೀಗೆ ಒಂಟಿ ಕೋಗಿಲೆ ವಸಂತಾಗಮಕೆ ಸಂತಸದಲಿ ಹಾಡುತಿದೆ” ಪ್ರಭೆ “ಮಿಡಿಯದ ಹೃದಯ ಮಿಲನಕ್ಕಾಗಿ […]
ಕೊನೆ ಆಗುವ ಮೊದಲು
ಕವಿತೆ ಕೊನೆ ಆಗುವ ಮೊದಲು ಅಕ್ಷತಾ ಜಗದೀಶ ಬಿಸಿಲು ಕುದುರೆ ಬೆನ್ನತ್ತಿಓಡಿದೆ ಮನವು ಕಾಲ್ಕಿತ್ತಿಬಯಸಿದ್ದು ಎಲ್ಲಿಯು ಸಿಗದೆ ಹೋಯ್ತುಕಾದ ಜೀವಕೆ ಈಗ ಸುಸ್ತಾಯ್ತು… ಕಾಲವದು ಕಣ್ಮುಂದೆ ಕರಗುತಿದೆಕೈಗೆ ಸಿಲುಕದೆ ಮರೆಯಾಗುತಿದೆಎಲ್ಲವೂ ಬಹುಬೇಗ ಸಾಗುತಿದೆನಾನೇಕೋ ನಿಧಾನವಾದೆನೋ ಎನಿಸುತಿದೆ……. ಎಲ್ಲೋ ಒಂದು ಸಣ್ಣ ಹೊಳಪುಪದೇ ಪದೇ ಅದೇ ಹಳೆ ನೆನಪುಬಾಡಿ ಹೊಗುವ ಮೊದಲೆ ಹೂ..ಮುಡಿ ಸೇರಲಾರದ ನೋವು.. ಮರುಭೂಮಿಯಲ್ಲಿ ಕಾಣಬಹುದೇ ಒರತೆ…ಸಣ್ಣ ಆಸೆ ಇಟ್ಟು ಬರೆದೆ ಈ ಕವಿತೆಕಳಿಸಿಕೊಡುವೆ ದೇವ ಈ ಬರಹ ನಿನಗೆಹೊಸ ಚಿಲುಮೆ ಉಕ್ಕಲಿಬಾಳಿಗೆ ಪೂರ್ಣವಿರಾಮ ಇಡುವ […]
ನಾನು ದೀಪ ಹಚ್ಚುತ್ತೇನೆ
ಕವಿತೆ ನಾನು ದೀಪ ಹಚ್ಚುತ್ತೇನೆ ಕಾಡಜ್ಜಿ ಮಂಜುನಾಥ ನಾನು ದೀಪ ಹಚ್ಚುತ್ತೇನೆಮನದ ಕಹಿಗಳು ದಹಿಸಿಹೋಗಲೆಂದು ನಾನು ದೀಪ ಹಚ್ಚುತ್ತೇನೆದ್ವೇಷದ ಯೋಚನೆಗಳುಸುಟ್ಟು ಹೋಗಲೆಂದು ನಾನು ದೀಪ ಹಚ್ಚುತ್ತೇನೆಪ್ರೀತಿಸುವ ಮನಗಳುಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಜಾತೀಯತೆಯ ಬೀಜಗಳುನಾಶವಾಗಲೆಂದು ನಾನು ದೀಪ ಹಚ್ಚುತ್ತೇನೆಧರ್ಮದ ಹೆಸರಿನಲ್ಲಿ ನಡೆಯುವದೌರ್ಜನ್ಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಬಡವರ ಮನೆಮಗಳ ಮೇಲೆಅತ್ಯಾಚಾರ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಧನಿಕರ ದುಡ್ಡಿನ ದರ್ಪಹೊಗೆಯಾಗಿ ಕರಗಲೆಂದು ನಾನು ದೀಪ ಹಚ್ಚುತ್ತೇನೆಉನ್ನತ ಶಿಕ್ಷಣ ಪಡೆದವರು ಮಾಡುವಗುಲಾಮಗಿರಿಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆನೊಂದವರಿಗೆ ನ್ಯಾಯಸಿಗಲೆಂದು ನಾನು ದೀಪ […]
ಯಾತ್ರೆ
ಕವಿತೆ ಯಾತ್ರೆ ರಾಜೇಶ್ವರಿ ಚನ್ನಂಗೋಡು ಮುಗಿವಾಗ ನೀನುನನ್ನೆದೆ ಧುತ್ತಂದುನಿಂದುಮುನ್ನಡೆದಿದೆ.ಎದೆಗಿನ್ನೇನು ದಾರಿ?ಇನ್ನೆಷ್ಟು ಮಂದಿ ನನ್ನವರುನನ್ನ ನಾನಾಗಿಸಿದವರುಹೋದಾಗಲೂ ಹೀಗೇ ಮುನ್ನಡೆಯುತಿರುವುದು…ಅರ್ಥಹೀನವೀ ಯಾತ್ರೆಹಿಂದಿದ್ದ ಸುಖವನೆಲ್ಲ ಬಿಟ್ಟು ಮುನ್ನಡೆಯಲೇ ಬೇಕಾದ ಯಾತ್ರೆಅಂದವ ಹುಡುಕಿ ಚಂದವ ಹುಡುಕಿನಡೆದಷ್ಟೂ ಹಿಂದಿನಂದುಗಳೇನೀನಿದ್ದಾಗಿನ ಅವರಿದ್ದಾಗಿನಂದುಗಳೇಸೊಗಸೆಂದರಿತೂಮುಂದಡಿಯಿಡುವ ಯಾತ್ರೆನಾಳೆ ಇವನೂ ಅವಳೂ ಇಲ್ಲದಕಂದರಗಳಿಹವೆಂದರಿತೂನಿಲ್ಲಿಸಲಾಗದ ಯಾತ್ರೆಬೆಳಕಿತ್ತ ನೀನಾರಿದಾಗಇನ್ನಾರೂ ಆರುವ ಮುನ್ನನಾನಾರಿದರೇ ಚೆನ್ನವೆಂದನಿಸುವ ಯಾತ್ರೆಹೇಗೆ ಕಲ್ಪಿಸಿಕೊಳಬೇಕು?ಯಾಕೆ ನಡೆಯಲೆ ಬೇಕೀ ಯಾತ್ರೆ?
“ಬೆಳಕಾಗಲಿ ಬದುಕು”
ಕವಿತೆ ಬೆಳಕಾಗಲಿ ಬದುಕು ಪ್ರೊ. ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆ ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ ಕಮಟಾಗಿ ಹಳಸಿಹೋಗುವ ಮುನ್ನ ಯಾರ ಹೆಸರಿನ ಷರಾ ಬರೆದಿದೆಯೋ ಕತ್ತಿಯಂಚಿನಲಿ ಕತ್ತರಿಸಿಕೊಂಡು ಹೆಣವಾಗಿರುವ ಜೀವಕೋಶಗಳ ಮೇಲೆ ಸಾವೊಂದು ಬದುಕಾಗಿದೆ ನನಗೆ ಬದುಕೊಂದು ಸಾವಾಗಿದೆ ಕೊನೆಗೆ ಪಯಣವಿನ್ನು ಯಾರದೋ ಮನೆಗೆ ನೇತುಹಾಕಿರುವ ಅಂಗಡಿಯೊಳಗೆ ಒಡಲುಗೊಂಡದ್ದೆಲ್ಲವೂ ಬಿಕರಿಗೆ ಕಾಲು ಕೈ ಕಣ್ಣು ತೊಡೆಗಳೆಲ್ಲ ಮಾಗಿದ ಹಣ್ಣುಗಳ ಬನದ ಬೆಲ್ಲ ತನುವ ತುಂಬಿಕೊಳ್ಳಿ […]
ಗಜಲ್
ಗಜಲ್ ರವಿ.ವಿಠ್ಠಲ. ಆಲಬಾಳ. ತುಸು ಹೊತ್ತು ಕಳೆದೆ ,ತುಸು ದೂರ ನಡೆದೆ ,ಸಾಕಿಂದಿಗೆ ಈ ಪ್ರೀತಿಮೋಹಕ ನಗುವಿನಲಿ ಚೆಲುವೆಲ್ಲ ನೋಡಿದೆ ,ಸಾಕಿಂದಿಗೆ ಈ ಪ್ರೀತಿ. ಭಣಗುಡುವ ಎದೆಯಿಂದು ಉಲ್ಲಾಸವನು ತುಂಬಿ ತುಳುಕಿಸಿದೆತುಟಿಕೆಂಪಿನಲಿ ಹೊಸ ಮಿಂಚು ಕಾಣುತಿದೆ ,ಸಾಕಿಂದಿಗೆ ಈ ಪ್ರೀತಿ. ಕಳೆಕಟ್ಟಿಕೊಂಡು ಕಾಣುವ ಕನಸುಗಳಿಗೆ ಸಾವಿರದ ನೆನಕೆ ತಿಳಿಸುವೆಸವಿ ದಿನಗಳ ಕ್ಷಣವನು ತಿರುವಿ ಹಾಕುತಿದೆ ಸಾಕಿಂದಿಗೆ ಈ ಪ್ರೀತಿ . ಏನೆಲ್ಲ ಹೇಳಿದೆ,ಏನೆಲ್ಲ ಕೇಳಿದೆ ,ಬರೀ ಮಾತುಗಳಾಗೇ ಉಳಿದಿವೆದೂರವಿದ್ದರೂ ಸರಿಯೇ ,ನಿನ್ನ ಬಿಂಬ ಇಲ್ಲಿದೆ ಸಾಕಿಂದಿಗೆ ಈ […]
ಗಜಲ್
ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳುಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳುಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು ಬೇಡ ಕೊಟ್ಟಷ್ಟು ಆಸೆ ಬೆಳಿವವು ಅಂದು ಕೊಂಡಿಹಳುಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳುಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳುಹೊಟ್ಟೆ […]