ಕನ್ನಡಾಂಬೆ

ಕವಿತೆ

ಕನ್ನಡಾಂಬೆ

ಚಂದ್ರಮತಿ ಪುರುಷೋತ್ತಮ್ ಭಟ್

ಕರುನಾಡ ತಾಯೆ ಭುವನೇಶ್ವರೀ ಅಮ್ಮಾ ಕರುಣೇಶ್ವರೀ
ಕರವ ಮುಗಿದು ಕೇಳುವೆನು ಕರುಣಿಸು ಬಾ ಕರುಣಾಮಯೀ

ಬಲಗೈಯಲ್ಲಿ ದೀಪ ಹಿಡಿದ ಜ್ಞಾನದಾತೆ ಅಮ್ಮಾ ನೀನು
ಎಡಗೈಯಲ್ಲಿ ಪತಾಕೆ ಹಿಡಿದ ನ್ಯಾಯದೇವಿ ಅಮ್ಮಾ ನೀನು

ಫಲಪುಷ್ಪ ಭರಿತಳಾಗಿ ಗಿರಿಯನೇರಿ ನಿಂತ ಅಮ್ಮಾ ನೀನು
ನಮ್ಮೆಲ್ಲರ ಪೊರೆಯುತಿರುವ ಅನ್ನದಾತೆ ಅಮ್ಮಾ ನೀನು

ಅದೆಂಥ ಸ್ವರ್ಗ ಸುಖವು ಅಮ್ಮಾ ಜನ್ಮ ಕೊಟ್ಟ ನಿನ್ನ ಮಡಿಲು
ಮೇಲುಕೀಳು ಎಣಿಸದೆ ದಯಾಮಯಿಯಾದ ಅಮ್ಮಾ ನೀನು

ಅದೆಷ್ಟು ಅಂದ ಚೆಂದ ನನಗೆ ನಿನ್ನ ಅಮ್ಮಾ ಎಂದು ಕೂಗಲು
ತನು ಮನದಲ್ಲೂ ಕನ್ನಡ ಮಿಡಿಸಿದ ಕನ್ನಡಾಂಬೆ ಅಮ್ಮಾನೀನು

ದುಷ್ಟರಿಗೆ ಶಿಕ್ಷಿಸಿ ಶಿಷ್ಟರಿಗೆ ರಕ್ಷಿಸುವ ಮಹಾಮಾಯೆ ಅಮ್ಮಾ ನೀನು
ಹಸಿರು ಸಿರಿಯ ಸುಧೆಯ ಕೊಟ್ಪ ಶಾಂತಿದೂತೆ ಅಮ್ಮಾ ನೀನು

ಮಕ್ಕಳಿಗೆ ಅಕ್ಷರದಾಹ ನೀಗಿಸುವ ಶಾರದಾಂಬೆ ಅಮ್ಮಾ ನೀನು
ಜಾತಿ ಕುಲ ತೊಲಗಿಸಿ ಕಣ್ತಣಿಸಿದ ಕಣ್ಮಣಿ ಕನ್ನಡಮ್ಮಾ ನೀನು

ದೂಷಣೆಗೂ ಮೌನವಾಗಿ ಸಹನಶೀಲಳಾಗಿರುವೆ ಅಮ್ಮಾನೀನು
ಎಲ್ಲೆಡೆ ಏಕತೆಯ ಮಂತ್ರ ಬೀರಿ ಜಗನ್ಮಾತೆಯಾದೆ ಅಮ್ಮಾ ನೀನು

*****************************

5 thoughts on “ಕನ್ನಡಾಂಬೆ

  1. ತುಂಬಾ ಚೆನ್ನಾಗಿದೆ ಮೇಡಂ
    ಇದೇ ರೀತಿ ಇನ್ನೂ ಹೆಚ್ಚು ಕವನಗಳನ್ನು ಬರೆಯಿರಿ.

Leave a Reply

Back To Top