ಹಾಯ್ಕುಗಳು
ಭಾರತಿ ರವೀಂದ್ರ
1) ವಾತ್ಸಲ್ಯ
ತಾಯಿ ಸೆರಗು
ಅಂಬರವು ನಾಚಿತು
ವಾತ್ಸಲ್ಯ ಸಿರಿ.
2) ವಿಸ್ಮಿತ
ಸುಖ ಕನಸು :
ಕಂದಮ್ಮನ ಮೊಗದಿ :
ದೇವ ವಿಸ್ಮಿತ.
3) ಚೆಲವು
ಇಳೆ ಚೆಲವು :
ಹಸಿರಿನ ಸಿರಿಯು,
ನೆಮ್ಮದಿ ಬಿಡು.
4) ಮಧು
ಮುತ್ತಿನ ಮಧು :
ಮತ್ತೇರಿತು ದುಂಬಿಗೆ,
ಶೃಂಗಾರ ಮಾಸ
5) ಹೃದಯ
ಖಾಲಿ ಆಗಿತ್ತು :
ಕನಸಿಲ್ಲದ ಮನ,
ಬೆಂದ ಹೃದಯ.
6) ಸೀಮಂತ
ಧರೆ ಸೀಮಂತ :
ಹಕ್ಕಿಯ ಗಾನ ಸಭೆ,
ನಾಚಿದ ಪ್ರಭೆ.
7) ಹೊಂಬಿಸಿಲು
ಕಿರುನಗೆಯು :
ಹೊಂಬಿಸಿಲು ಬಾಳಿಗೆ,
ಸ್ವರ್ಗವು ಇಲ್ಲೇ.
8) ಹೂ ಬನ
ಕಾವ್ಯದ ಬೀಜ :
ಕವಿ ಬಿತ್ತಿ ಮನದಿ,
ಹೂ ಬನ ಹಾಗೆ.
9) ಪ್ರೇಮದ ರಾಗ
ಒಲವ ರಂಗು :
ಮೊಗ್ಗೊಂದು ಅರಳಿತು
ಪ್ರೇಮದ ರಾಗ.
10) ಬಂಗಾರ
ಜೀವನ ಪಾಠ :
ಅರಿತು ನಡೆದಲ್ಲಿ
ಬಾಳು ಬಂಗಾರ.
*********************************
ಎಲ್ಲವೂ ಚೆನ್ನಾಗಿವೆ