ಕವಿತೆ
ನಾನು ದೀಪ ಹಚ್ಚುತ್ತೇನೆ
ಕಾಡಜ್ಜಿ ಮಂಜುನಾಥ
ನಾನು ದೀಪ ಹಚ್ಚುತ್ತೇನೆ
ಮನದ ಕಹಿಗಳು ದಹಿಸಿ
ಹೋಗಲೆಂದು
ನಾನು ದೀಪ ಹಚ್ಚುತ್ತೇನೆ
ದ್ವೇಷದ ಯೋಚನೆಗಳು
ಸುಟ್ಟು ಹೋಗಲೆಂದು
ನಾನು ದೀಪ ಹಚ್ಚುತ್ತೇನೆ
ಪ್ರೀತಿಸುವ ಮನಗಳು
ಹೆಚ್ಚಾಗಲೆಂದು
ನಾನು ದೀಪ ಹಚ್ಚುತ್ತೇನೆ
ಜಾತೀಯತೆಯ ಬೀಜಗಳು
ನಾಶವಾಗಲೆಂದು
ನಾನು ದೀಪ ಹಚ್ಚುತ್ತೇನೆ
ಧರ್ಮದ ಹೆಸರಿನಲ್ಲಿ ನಡೆಯುವ
ದೌರ್ಜನ್ಯ ನಿಲ್ಲಲೆಂದು
ನಾನು ದೀಪ ಹಚ್ಚುತ್ತೇನೆ
ಬಡವರ ಮನೆಮಗಳ ಮೇಲೆ
ಅತ್ಯಾಚಾರ ನಿಲ್ಲಲೆಂದು
ನಾನು ದೀಪ ಹಚ್ಚುತ್ತೇನೆ
ಧನಿಕರ ದುಡ್ಡಿನ ದರ್ಪ
ಹೊಗೆಯಾಗಿ ಕರಗಲೆಂದು
ನಾನು ದೀಪ ಹಚ್ಚುತ್ತೇನೆ
ಉನ್ನತ ಶಿಕ್ಷಣ ಪಡೆದವರು ಮಾಡುವ
ಗುಲಾಮಗಿರಿಯ ನಿಲ್ಲಲೆಂದು
ನಾನು ದೀಪ ಹಚ್ಚುತ್ತೇನೆ
ನೊಂದವರಿಗೆ ನ್ಯಾಯ
ಸಿಗಲೆಂದು
ನಾನು ದೀಪ ಹಚ್ಚುತ್ತೇನೆ
ಅತ್ಯಾಚಾರಿಗಳಿಗೆ ಶೀಘ್ರ
ಶಿಕ್ಷೆಯಾಗಲೆಂದು
ನಾನು ದೀಪ ಹಚ್ಚುತ್ತೇನೆ
ವಿಶ್ವವಿದ್ಯಾಲಯಗಳಲ್ಲಿ ಜಾತಿ
ಬೇರುಗಳು ನಶಿಸಿ ಹೋಗಲೆಂದು
ನಾನು ದೀಪ ಹಚ್ಚುತ್ತೇನೆ
ಶಿಕ್ಷಣವಂತರ ಭ್ರಷ್ಟಾಚಾರ
ನಿರ್ಮೂಲನೆಯಾಗಲೆಂದು
ನಾನು ದೀಪ ಹಚ್ಚುತ್ತೇನೆ
ಧ್ವನಿ ಇಲ್ಲದವರಿಗೆ
ಧ್ವನಿಯಾಗಲೆಂದು
ನಾನು ದೀಪ ಹಚ್ಚುತ್ತೇನೆ
ತಾಯ್ನಾಡಿಗೆ ದ್ರೋಹಬಗೆದವರು
ಅನಲನಿಗೆ ಆಹಾರವಾಗಲೆಂದು
ನಾನು ದೀಪ ಹಚ್ಚುತ್ತೇನೆ
ದೇಶದ ಸಂವಿಧಾನವನ್ನು
ಗೌರವಿಸುವವರು ಹೆಚ್ಚಾಗಲೆಂದು
ನಾನು ದೀಪ ಹಚ್ಚುತ್ತೇನೆ
ಅಜ್ಞಾನದ ಕತ್ತಲಲ್ಲಿರುವ ಜನರು
ಜ್ಞಾನದ ಬೆಳಕಿಗೆ ಬರಲೆಂದು
ನಾನು ದೀಪ ಹಚ್ಚುತ್ತೇನೆ
ದೀಪದ ಹೆಸರಲಿ ಮೋಸಗೈವ
ಭ್ರಷ್ಟಾಚಾರಿಗಳು ಮಣ್ಣಾಗಲೆಂದು
ನಾನು ದೀಪ ಹಚ್ಚುತ್ತೇನೆ
ಕಾಯದ ನೋವಿನ ಗಾಯಕೆ
ಉಪ್ಪು ಹಾಕುವರು ನಿಲ್ಲಲೆಂದು
ನಾನು ದೀಪ ಹಚ್ಚುತ್ತೇನೆ
ಹೆಣ್ಣನ್ನು ಗೌರವಿಸುವ
ಮನೆಗಳು ಮನಗಳು ಬೆಳಗಲೆಂದು
ನಾನು ದೀಪ ಹಚ್ಚುತ್ತೇನೆ
ಕರೋನಾ ವೈರಸ್
ಜಗತ್ತಿನಿಂದ ದಹನವಾಗಲೆಂದು
**********************************
.
ತುಂಬಾ ಚೆನ್ನಾಗಿದೆ