Category: ಕಾವ್ಯಯಾನ

ಕಾವ್ಯಯಾನ

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆಒಲವ ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ ಅನುರಾಗದಲಿ ಹೆತ್ತು ಹೊತ್ತ ಉಸಿರುಗಳು ಅನಾಥವಾಗಿವೆಒಡಲಲಿ ಹೊರಳಾಡಿದ ಜೀವ ಮಣ್ಣು ಹಾಕಲು ಹಿಂಜರಿಯುತಿದೆ ಮುದ್ದಾಡಿ ಚಂದಿರ ತೋರಿಸಿದ ಲಾಲಿ ಹಾಡು ಮೂಕವಾಗಿದೆಕೈತುತ್ತು ಉಣಿಸಿದ ಕೈಗೆ ಮುತ್ತು ನೀಡಲು ಹಿಂಜರಿಯುತಿದೆ ಕುಸುಮಗಳು ನಲಿಯುತಿದ್ದವು ಸೋದರ ಜೊತೆ ಈಗ ಮಂಕಾಗಿವೆದುಂಬಿಯು ಬಿರಿದ ಸುಮದ ಮಕರಂದ ಹೀರಲು ಹಿಂಜರಿಯುತಿದೆ ವಿಶ್ವವೇ ಮೌನವಾಗಿದೆ ಇದೆಂತಹ ದುರಿತಕಾಲ “ಪ್ರಭೆ”ಬೌದ್ಧ ಪೌರ್ಣಮಿ ಕಿರಣಕೆ […]

ಈ ವಾರದಿಂದ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್

ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದು ಬದುಕು ತುಂಬಿ ತುಳುಕಿದೆ ಸಾಕಿ ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡುಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ ಭಾವ ಬಯಲಿಗೆ ಬೆಸುಗೆ ಹಾಕಿ ಮೌನ ಮನೆ ಮಾಡಿದೆಬಾಹು ಬಂಧನದಿ ಬಂಧಿಯಾಗುವ ಹೊಸ ಕನಸು ಚಿಗುರುತಿದೆ ಸಾಕಿ ಕಮರಿದ ಆಸೆ ಹಸಿರಾಗಿ ಉಸಿರ ಸೂಸಲು ಬಂದಿದೆಒಳಗಿನ ಗಾಯ ಮಾಯುವ ಮುನ್ನ ಪ್ರತಿ ಬಿಂಬ […]

ಜ್ಞಾನ ಬಿತ್ತಿದವ….ಬುದ್ದ

ಕವಿತೆ ಜ್ಞಾನ ಬಿತ್ತಿದವ….ಬುದ್ದ ಶಿವಲೀಲಾ ಶುದ್ಧೋದನ ಮಗನಂತೆ ಇವನುಮಗ್ಗುಲು ಹೊರಳಿಸಿದಂತೆಲ್ಲನಿದ್ರೆಯ ಕಂಬಳಿ ಕಿತ್ತೊಗೆದುಮೆಲ್ಲಗೆ ಸದ್ದಿಲ್ಲದಂತೆ ಎದ್ದೊದನಂತೆ ಹಣೆಗೊಂದು ಭಾವ ಲೇಪಿಸಿಕೊಂಡುವೈಭೋಗವ ವಸ್ತ್ರ ಕಳಚಿ ಬೆತ್ತಲಾಗಿಸಿಇರುಳಿಗೆಲ್ಲವ ಅರ್ಪಿಸಿ ಹೊಂಟವನುಬೀದಿ ಓಣಿಯಲಿ ದಿಟ್ಟಹೆಜ್ಜೆಯಿಟ್ಟವನು ನಿಶ್ಯಬ್ದ ದಾರಿಗುಂಟ ನಿಶಾಚರಿಗಳ ಘೀಳುರಕ್ತ ಸಿಕ್ತ ಪಾದದಲಿ ಮುಕ್ತಿಯ ಹಂಬಲವುಹಪಹಪಿಸಿದರು ಜ್ಞಾನ ದಾಹ ತೀರಲೊಲ್ಲದುದೇಹ ದಂಡಿಸಿದಷ್ಟು ಬಳಲಿತು ಭಾವದೊಡಲು ದಕ್ಕಿದುಡುಗೊರೆಯು ಮೋಕ್ಷವಾಗಲಿಲ್ಲಮೋಕ್ಷದ ಬೆನ್ನ ಹತ್ತಿದವಗೆ ದಿಕ್ಷೆಯಾಗಲಿಲ್ಲಆಸೆಯೇ ದುಃಖಕ್ಕೆ ಮೂಲವೆನ್ನುವಾಗೆಲ್ಲಕಾಯಕಕೆ ಮರಣಮೃದಂಗದಾ ಅಮಲೆಲ್ಲ ಮಿಂಚಿತೊಂದು ಬೆಳ್ಳಿರೇಖೆ ಕಣ್ಣಂಚಲ್ಲಿಪೂರ್ಣ ಚಂದಿರನ ಬೆಳದಿಂಗಳಲ್ಲಿದಿವ್ಯ ಮಂಗಳ ವಾದ್ಯ ಮೊಳಗಿದಂತೆಲ್ಲಹುಣ್ಣಿಮೆ ಶಶಿಯಲ್ಲಿ ಲೀನವಾದಂತೆಲ್ಲ […]

ಗೀತಕಾರಂಜಿ

ಕವಿತೆ ಗೀತಕಾರಂಜಿ ವಿದ್ಯಾಶ್ರೀ ಅಡೂರ್ ಗೀತೆ ಮೂಡಿ ಮನದೇರಾಗ ತಾಳ ಹಾಕಿ ಕುಣಿಯುತಿಹುದುನವಿಲಿನಂತೆ….ಕಾರ್ಮುಗಿಲು ಬಿಡದೆ ಮಳೆಯಸುರಿಸಿದಂತೆ…. ಹೊಕ್ಕಿ ಮನದಿ ವಿವಿಧ ಭಾವಸಿಕ್ಕಿದೆಲ್ಲ ನಲಿವು ನೋವಅಕ್ಕಪಕ್ಕ ಸುಳಿವ ಸಾವಕಂಡು ಹೃದಯ ನಲುಗಿಬೆದರಿದಂತೆ….ಮೊಂಡು ಹಠವ ಮಾಡಿ ನಮ್ಮಒಲಿಸಿದಂತೆ….. ಜರುಗಿ ಮನದ ಒಳಗೆ ಜಾತ್ರೆತುಂಬುತಿಹುದು ಹಿಡಿದ ಪಾತ್ರೆಕವಿತೆಯೊಂದು ನಿತ್ಯ ಯಾತ್ರೆಬರಡು ನೆಲದಿ ಹಸಿರಹರಡಿದಂತೆ…ಕೆಸರಲ್ಲೂನೂ ಕಮಲ ತಾನೇಅರಳಿದಂತೆ… ಬಿಸಿಲ ಬೇಗೆಯಲ್ಲಿ ಬೆವರಮಾಗಿ ಚಳಿಯಲ್ಲೂನು ಪದರಸೋನೆ ಮಳೆಯು ಕೂಡ ಮಧುರನೀಗುತಿಹುದು ಮನದ ಬರಡಕಾರಂಜಿಯಂತೆ…ಒಂಟಿ ಮನದ ಜತೆಗೆ ಜಗವೇನಡೆಯುವಂತೆ…. ******************************

ಬುದ್ಧನಾಗಲೂ ಕಷ್ಟವೀಗ

ಕವಿತೆ ಬುದ್ಧನಾಗಲೂ ಕಷ್ಟವೀಗ  ಹೇಮಚಂದ್ರ ದಾಳಗೌಡನಹಳ್ಳಿ ಈಗಲೀಗ ಎದ್ದು ಹೊರಡಬೇಕೆನಿಸುತಿದೆನಿನ್ನಂತೆ ತೊರೆದು ಎಲ್ಲವಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆಭಾಜನ ನೀನೀಗಲೂ ಜನಭಕ್ತಿಗೆತಮಗೇ ಸಾವು ಬಂದಡರಿ ನಿಂತರೂನಿಂತ ಕಟ್ಟಡ ಕಾಮಗಾರಿಗೆ ಬಳಲಿಅಳಲುಗೊಂಡಳುತ ನರಳುವರ ಕಂಡು(ಈಗಲೀಗ) ತರಿದು‌ ಹಸುರ; ತೋಡಿ ನೆಲಬಸುರಮೀರಿದಂಕೆಗೆ ಮುತ್ತಿ ಮಾರಿ ಶಂಕೆಸುಳಿವ ಉಳಿದ ಗಾಳಿಯನೂ ಮುಕ್ತ ಮೂಸದಂತೆಮೂಗು ಬಾಯಿ ಬಂಧಿಸಿ; ಮನೆಯೊಳಗೇ ಸಂಧಿಸಿಕೊರೆದ ಕೊಳವೆ ಬಾವಿ ಕೆಲಸವರ್ಧಕೆ ನಿಂತುದಕೆಅವಲತ್ತುಕೊಂಡಳಲುತಿರುವ ತಿರುಕರ ಕಂಡು(ಈಗಲೀಗ) ಬಿರುಕು ಗೋಡೆ; ತೂತು ಮಾಡುಳ್ಳಮನೆಯೊಳಗೆ ಬರಲು ಮಳೆನೀರುಮಳೆಗೆ ಶಾಪ ಹಾಕುವ ಅಂಧರುಹುತ್ತಗಳ ಕೆಡವಿ ಮನೆಯ […]

ಕರುಣಾಳು ಬಾ ಬೆಳಕೆ

ಜ್ಞಾನದ ಸುದೀಪ ಹೊತ್ತಿಸಿ
ಅಜ್ಞಾನದ ತಮವ ಓಡಿಸಿದ
ಕರುಣಾಳು ಬೆಳಕು ಬುದ್ಧ
ಮತ್ತೊಮ್ಮೆ ಅವತರಿಸಿ ಬಾ

ಬಾಗಿಲು ಮುಚ್ಚಿದಾಗ

ಕವಿತೆ ಬಾಗಿಲು ಮುಚ್ಚಿದಾಗ ಅಬ್ಳಿ,ಹೆಗಡೆ  ಗಟ್ಟಿಮುಟ್ಟಾದ ಬಾಗಿಲಿಗೆ,       ಸುಂದರ,ಕಲೆಯಚಿತ್ತಾರ.     ..ಕದಮುಚ್ಚಿ,ಚಿಲಕ ಹಾಕಿದರೂ       ಅಭದ್ರ.ಮುರಿಯಲೂ ಬಹುದು       ಸೋಲಿನ ‘ಭೂತ’ಗಳು.       ಒಳಬರುವ ಹೆದರಿಕೆ,ರಾತ್ರಿ,       ಬಾನಂಗಳದಲ್ಲಿ ಆಡುವ-       ಮಕ್ಕಳ ತುಂಟಾಟಕ್ಕೆ ಸೋತು,       ಹೈರಾಣಾದ, ಅಸಹಾಯಕ                       ತಾಯಿ,ಚಂದ್ರ-        ಒಡೆದು,ಪುಡಿ,ಪುಡಿಯಾಗಿ‌ಸಿ,        ಒಳಬರಬಹುದು ಚಿಲಕ-        ವಿದ್ದರೂ.ಕಣ್ಣಕೋರೈಸುವ,        ಸೂರ್ಯನ ಪ್ರಖರ ತೇಜ-        ದೆದುರು,ಕೈಕಟ್ಟಿ ಕುಳಿತ,        .             ಕಳಾಹೀನ ಲಾಂದ್ರ.        ಅಭೇದ್ಯವಾದರೂ,ಭೇದಿಸಬಹುದು,        ಗಟ್ಟಿಮನಸ್ಸುಗಳ,ಹ್ರದಯಗಳ.       […]

Back To Top