ಕವಿತೆ
ಬಾಗಿಲು ಮುಚ್ಚಿದಾಗ
ಅಬ್ಳಿ,ಹೆಗಡೆ
ಗಟ್ಟಿಮುಟ್ಟಾದ ಬಾಗಿಲಿಗೆ,
ಸುಂದರ,ಕಲೆಯಚಿತ್ತಾರ.
..ಕದಮುಚ್ಚಿ,ಚಿಲಕ ಹಾಕಿದರೂ
ಅಭದ್ರ.ಮುರಿಯಲೂ ಬಹುದು
ಸೋಲಿನ ‘ಭೂತ’ಗಳು.
ಒಳಬರುವ ಹೆದರಿಕೆ,ರಾತ್ರಿ,
ಬಾನಂಗಳದಲ್ಲಿ ಆಡುವ-
ಮಕ್ಕಳ ತುಂಟಾಟಕ್ಕೆ ಸೋತು,
ಹೈರಾಣಾದ, ಅಸಹಾಯಕ
ತಾಯಿ,ಚಂದ್ರ-
ಒಡೆದು,ಪುಡಿ,ಪುಡಿಯಾಗಿಸಿ,
ಒಳಬರಬಹುದು ಚಿಲಕ-
ವಿದ್ದರೂ.ಕಣ್ಣಕೋರೈಸುವ,
ಸೂರ್ಯನ ಪ್ರಖರ ತೇಜ-
ದೆದುರು,ಕೈಕಟ್ಟಿ ಕುಳಿತ,
. ಕಳಾಹೀನ ಲಾಂದ್ರ.
ಅಭೇದ್ಯವಾದರೂ,ಭೇದಿಸಬಹುದು,
ಗಟ್ಟಿಮನಸ್ಸುಗಳ,ಹ್ರದಯಗಳ.
.ಸ್ರಷ್ಟಿಯನಂತ,ಸುಶ್ರಾವ್ಯ,
ತಾರಸ್ತಾಯಿಗಳ ಜುಗಲ್ಬಂದಿ-
. ಯಬ್ಬರದಲ್ಲಿ,ಮಂಕಾಗಿ
. ಮೂಲೆಸೇರಿದ ಮಂದ್ರ.
ಬಾಗಿಲು,ಕದ,ಚಿಲಕಗಳ,
ರಕ಼ಣೆಯಿದ್ದೂ,ಅವಿತಿಟ್ಟು-
ಕೊಳ್ಳುವ,ಹೇಡಿತನದಬದುಕಲ್ಲಿ
ಸೋಲುಗಳು ಒಳಬಂದು
ಸೋಲಿಸುವ,ಹೆದರಿಕೆ ಮಾತ್ರ,
ನಿತ್ಯ,ನಿರಂತರ….!
*************