Category: ಕಾವ್ಯಯಾನ

ಕಾವ್ಯಯಾನ

ಆನೆಯೂ ಅಂಬಾರಿಯೂ

ಕವಿತೆ ಆನೆಯೂ ಅಂಬಾರಿಯೂ ನೂತನ ದೋಶೆಟ್ಟಿ ಪರಿಹಾಸ್ಯಗಳು, ಅಣಕ ಹುಳುಗಳುಕಚ್ಚಿ ಹಿಡಿದಿದ್ದವು ಬಾಲದ ತುದಿಯನ್ನುಆನೆ ನಡೆಯುತಿತ್ತುತನ್ನದೇ ದಾರಿ ಮಾಡಿಕೊಂಡು ದೊಡ್ಡ ಹೊಟ್ಟೆಯ ಹಿಂದಿನ ಪುಟ್ಟ ಬಾಲದಲ್ಲಿಹುಳುಗಳು ನಗೆಯಾಡುತಿದ್ದವುನಡೆದದ್ದೇ ದಾರಿ ಹೇಗಾದೀತು?ಎಲ್ಲ ಆನೆಗಳೂ ಅಂಬಾರಿ ಹೊರಬಲ್ಲವೇ?ಬಾಲದ ಹುಳುಗಳು ಹುಡುಕುತಿದ್ದವುಒಜ್ಜೆ ಹೆಜ್ಜೆಗೆ ಹೊಯ್ದಾಡುತ್ತ ಬೆನ್ನ ಮೇಲೆ ಹರಡಿದರುರೇಶಿಮೆಯ ನುಣುಪು ವಸ್ತ್ರಕಡುಗೆಂಪು ಝರಿಯ ಚಿತ್ತಾರಪಟ್ಟೆ ಪೀತಾಂಬರಗಾಂಭೀರ್ಯದ ಹೆಗಲೇರಿದ ಅಂಬಾರಿ ಹೊರಟ ಗಜರಾಜನ ಸುತ್ತೆಲ್ಲ ಜನಸ್ತೋಮಜೈಕಾರ ಬಹುಪರಾಕುಬಾಲದ ತುದಿಯ ಹುಳುಗಳು ತಲೆಬಾಗಿ ವಂದಿಸಿದವುಜನರತ್ತ ಕೈ ಬೀಸಿದವು ಆನೆ ಮಾತ್ರ ನಡೆಯುತಿತ್ತುಹೆಗಲಲ್ಲಿ ಹೆಮ್ಮೆಯ ಹೊತ್ತು. […]

ಮರೆತೆಯೇಕೆ

ಮುಡಿಸಿದ್ದ ಮಲ್ಲಿಗೆಯ ಘಮ ಈಗಿಲ್ಲವಾಗಿದೆ
ಮುಖದಲ್ಲಿ ಮುಪ್ಪನ ನೆರಿಗೆ ಒಡವೆ
ಮನಸ್ಸು ಮಾತ್ರ ಹಚ್ಚ ಹಸಿರು
ದಯೆಯಿಲ್ಲವಾಯಿತೇ ಒಂದಿಷ್ಟದರೂ

ಭಾನುಮತಿಯ ಸ್ವಗತ

ಅರಮನೆಯ ದಾಸಿಯರು
ಪಿಸುಗುಡುತ್ತಿದ್ದಾರೆ ಭಾನುಮತಿ ಸತಿಹೋಗುವಳೋ ಏನೋ
ತಾಯ ಮಾತ ಕೇಳದೇ…

ನಾವು ಮತ್ತು ಸಾವು

ಕವಿತೆ ನಾವು ಮತ್ತು ಸಾವು ಸರಿತಾ ಮಧು ಜನ್ಮದಾರಂಭದಿಂದ ಸಾಗಿ ಸಾವಿನೆಡೆಗಿನ ಪಥಕೆಭಿನ್ನ ನಾಮಗಳನ್ನಿಟ್ಟುಕಟ್ಟಿಕೊಂಡ ವ್ಯೂಹವಿದು ಹುಟ್ಟುವವನು ತನ್ನ ಸಾವನ್ನುಬೆನ್ನಿಗಿಟ್ಟುಕೊಂಡೇ ಮೈತಳೆದಿರುವಾಗ ನೆಪಗಳುಬೇಕಷ್ಟೆ, ಸಾವಿನೆಡೆಗೆ ಸಾವಿಗೆ ಯಾರೂ ಹೊರತಲ್ಲನಾನಾದರೂ ,ನೀನಾದರೂನಿಗದಿಯಾದ ಸಮಯಕೆ ಜಗವ ತೊರೆಯುವುದಷ್ಟೇ ಸ್ವರ್ಗವೋ , ನರಕವೋಬಲ್ಲವರಾರು ? ಹೋದವರುತಿರುಗಿ ಬಂದವರಿಲ್ಲ ಅಂತೆಯೇಸಾವ ಗೆದ್ದವರೂ ಇಲ್ಲಿ ಇಲ್ಲ ಅರಿಯದವರಾರು ಸಾವಿನಾಟವಬಾಳೆಂಬ ಪಗಡೆಯಾಟದಲ್ಲಿದಾಳಗಳು ನಾವು ಉರುಳಿದೆಡೆಗೆ ಸಾಗುವುದಷ್ಟೇ ಅಗೋಚರ ಸೂತ್ರಕೆ ಪಾತ್ರಧಾರಿಗಳು ನಾವುಸಾವೆಂದಿಗೂಅನೂಹ್ಯ ನಮ್ಮ ಪಾಲಿಗೆ!!! *******

ಮೂಗು ಮತ್ತು ಮಾಸ್ಕು

ಎಲ್ಲೇನನ್ನು ಮಾಡಿದರೂ
ಇವನ ಮೂಗು ಹಾಕಿಬಿಡುತ್ತದೆ ಹಾಜರಿ
ಎಲ್ಲವನೂ ಸೆಳೆದು ಬಿಡುತ್ತದೆ
ಮನೆಯ ಗುಟ್ಟೆಲ್ಲ ಇವನ ಮೂಗಿನಡಿಯಲ್ಲಿ

ಕಾಯುವ ಕಷ್ಟ.

ಕವಿತೆ ಕಾಯುವ ಕಷ್ಟ. ಅಬ್ಳಿ,ಹೆಗಡೆ ಈ ‘ಹಡಿಲು ಬಿದ್ದ’ನೆಲ,ಈ ದಟ್ಟ ಕತ್ತಲು,ಈ ಮೌನ,ಈ,,ಖಾಲಿ ಹಾಳೆ,ಕಾಯುತ್ತಿವೆ….ಉತ್ತು ಬಿತ್ತುವವರ.ಉಳುವದೆಂದರೆ….ಬೇಕಾಬಿಟ್ಟಿ ಅಗೆಯುವದಲ್ಲ.ಮೊದಲು ಒದ್ದೆ-ಯಾಗಿಸಬೇಕುಗಟ್ಟಿ ಮೇಲ್ಪದರ.ಗುದ್ದಲಿ,ಪಿಕಾಸಿಗಿಂತನೇಗಿಲಾದರೆ ಸಲೀಸು-ಭೇದಿಸಿ ಒಳಗಿಳಿಯಲು.ತೀರ ಆಳಕ್ಕೂ ಇಳಿಯದೆಹಿತವಾಗಿ,ಹದವಾಗಿ,ಸಾವಕಾಶ,ನಾಜೂಕಾಗಿ-ಸಾಗುವಾಗಿನಖುಷಿಯೇ ಬೇರೆ.ಆಮೇಲೆ…ಬಿತ್ತಿದಂತೇ ಬೆಳೆ.ನೆಲದೊಳಗೊಂದು ಬೀಜ,ಕತ್ತಲೊಳಗೊಂದುಬೆಳಕ ಸಣ್ಣ ಕಿಡಿ,ಮೌನದೊಳಗೊಂದುಪಿಸು ಮಾತು,ಹಾಳೆಯ ಖಾಲಿ-ಯಲ್ಲೊಂದು ಅಕ್ಷರಮೊಳೆಯುವ ಕನಸ ಖುಷಿ.ಮೊದ,ಮೊದಲುನೋವಾದರೂ,ಕೊನೆ,ಕೊನೆಗೆ….‘ಆಹಾ’ ಸುಖದ ನರಳಿಕೆ.ಆ ಒಂದು ಕ಼ಣಕ್ಕಾಗಿಕಾಯುತ್ತಿವೆ..–ಈ,,ನೆಲ,ಈ..ಕತ್ತಲು,ಈ..ಮೌನ,ಈ..ಖಾಲಿ’ಹಾಳೆ’?,ಮೊದಲ ಮಳೆಯಾಗುವಮೊದಲು ಉಳುವವರಿಗಾಗಿಕಾಯುತ್ತಿವೆ ಎದೆತೆರೆದುಅಂಗಾತ ಮಲಗಿ…!!! ******************************

ದೇವರು ಮಾರಾಟಕ್ಕಿದ್ದಾರೆ…

ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ

ದೇವರುಮಾರಾಟಕ್ಕಿದ್ದಾರೆ…

ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ

ಜೋಕಾಲಿ ನಿಲ್ಲುವುದೆಲ್ಲಿ?

ಕವಿತೆ ಜೋಕಾಲಿ ನಿಲ್ಲುವುದೆಲ್ಲಿ? ಕವಿತಾ ಹೆಗಡೆ ಹರಿದು ಹಂಚಿ ಹೋಗಿದೆ ಬದುಕುತೇವವಿಲ್ಲದೆ ರೂಪ ತಾಳದುಮೌನ ಸಾಮ್ರಾಜ್ಯದ ಮಹಾರಾಜ ಅವನುಮಾತಿನರಮನೆಯಲ್ಲಿ ಅರಗಿಣಿ ನಾನುಮೂಕಳಾಗಲೋ ಮಲ್ಲಿಯಾಗಲೋ ನಿರ್ಲಿಪ್ತಲೋಕದಲಿ ಲುಪ್ತ ಅವನುಚಿಮ್ಮಿ ಚೆಲ್ಲುವ ಕಾರಂಜಿ ನಾನುಗುಪ್ತಗಾಮಿನಿಯಾಗಲೋ ಧುಮ್ಮಿಕ್ಕಲೋ ಗಳಿಸುವುದಕಾಗಿ ಬದುಕುವ ಜೀವ ಅವನುಬದುಕ ಉಳಿಸಲು ಹೆಣಗುವ ಆತ್ಮ ನಾನುಯಂತ್ರವಾಗಲೋ ಜೀವಸುಧೆಯಾಗಲೋ ಅತಿ ವೈರುಧ್ಯವೂ ಅನಾಕರ್ಷಕವೆ?ಅತಿ ಸಮರ್ಪಣೆಯೂ ನಿರಾಕರಣೆಯೆ? **********************************

Back To Top