ಕವಿತೆ
ಮರೆತೆಯೇಕೆ
ಅರುಣಾ ರಾವ್
ಕೊಳಲಗಾನವನು ಮಾಡುತ್ತ
ಹೆಂಗಳೆಯರೊಡನಾಡುತ್ತಾ
ಗೋವುಗಳ ಮೃ ಸವರುತ್ತಾ ಕುಳಿತಾಗಲೊಮ್ಮೆ
ಎನ್ನ ನೆನಪಾಗದೇ ನಿನಗೆ ಗೋಪಿ ಲೋಲ
ಸುತ್ತಲೂ ನೂರಾರು ಹೆಂಗಳೆಯರು
ಸರಸ ಸಲ್ಲಾಪಗೈಯುತ್ತ
ನನ್ನ ಜ್ಞಾಪಕವದು ಹೇಗಾದೀತು?
ಅಂದೊಂದು ದಿನ ಯಮುನಾ ತೀರದಲ್ಲಿ
ಸುಂದರ ಸಂಜೆಯಲ್ಲಿ ನನ್ನ ಮೃಯಾತು
ಕುಳಿತ ನೀ ತೀಡಿದೆನ್ನ ಮುಂಗುರುಳು
ಇಂದೇಕೋ ಅಂಕೆಯಿಲ್ಲದೆ ಹಾರ ತೊಡಗಿದೆ
ಜಾರಿರುವೆನ್ನ ಸೆರಗ ನಾ ಸರಿಪಡಿಸುವಾಗ
ನಿನ್ನ ಬೆಚ್ಚಿನೆಯ ನೋಟದ ನೆನಪು ನುಗ್ಗಿ
ಮೃಯಲ್ಲೇನೋ ಪುಳಕ
ನೀನಲ್ಲಿ ಎಲ್ಲವ ಮರೆತು ಹಾಯಾಗಿ
ವೇಣುಗಾನದಲ್ಲಿ ಮೃಮರೆತಿರುವೆ
ನಿನಗಲ್ಲಿದೆ ನುಡಿವ ಕೊಳಲು
ಸಾಂತ್ವನದಿ ಮಿಡಿವ ನೂರಾರು ಕೊರಳು
ನನಗಾರಿಹರಿಲ್ಲೆಂದು ಮರೆತು ಬಿಟ್ಟೆ
ಮುಡಿಸಿದ್ದ ಮಲ್ಲಿಗೆಯ ಘಮ ಈಗಿಲ್ಲವಾಗಿದೆ
ಮುಖದಲ್ಲಿ ಮುಪ್ಪನ ನೆರಿಗೆ ಒಡವೆ
ಮನಸ್ಸು ಮಾತ್ರ ಹಚ್ಚ ಹಸಿರು
ದಯೆಯಿಲ್ಲವಾಯಿತೇ ಒಂದಿಷ್ಟದರೂ
ಯಮುನೆಯಂಗಳದ ನೆನಪು ಮರೆಯಾಗಿ
ದ್ವಾರಕೆಯಲ್ಲಿ ನೀ ಸೊಂಪಾಗಿ
ಪಲ್ಲಂಗದ ಮೇಲೆ ಪವಡಿಸಿದ್ದೀಯೆ
ನಾನಿಲ್ಲಿ ಮಲಗಿಹೆ ಮುಳ್ಳಿನ ಹಾಸಿಗೆಯಲ್ಲಿ
****