ನಾವು ಮತ್ತು ಸಾವು

ಕವಿತೆ

ನಾವು ಮತ್ತು ಸಾವು

ಸರಿತಾ ಮಧು

ನಮ್ಮ ಮಕ್ಕಳು ಮಕ್ಕಳಲ್ಲ

ಜನ್ಮದಾರಂಭದಿಂದ ಸಾಗಿ ಸಾವಿನೆಡೆಗಿನ ಪಥಕೆ
ಭಿನ್ನ ನಾಮಗಳನ್ನಿಟ್ಟು
ಕಟ್ಟಿಕೊಂಡ ವ್ಯೂಹವಿದು

ಹುಟ್ಟುವವನು ತನ್ನ ಸಾವನ್ನು
ಬೆನ್ನಿಗಿಟ್ಟುಕೊಂಡೇ ಮೈತಳೆದಿರುವಾಗ ನೆಪಗಳು
ಬೇಕಷ್ಟೆ, ಸಾವಿನೆಡೆಗೆ

ಸಾವಿಗೆ ಯಾರೂ ಹೊರತಲ್ಲ
ನಾನಾದರೂ ,ನೀನಾದರೂ
ನಿಗದಿಯಾದ ಸಮಯಕೆ ಜಗವ ತೊರೆಯುವುದಷ್ಟೇ

ಸ್ವರ್ಗವೋ , ನರಕವೋ
ಬಲ್ಲವರಾರು ? ಹೋದವರು
ತಿರುಗಿ ಬಂದವರಿಲ್ಲ ಅಂತೆಯೇ
ಸಾವ ಗೆದ್ದವರೂ ಇಲ್ಲಿ ಇಲ್ಲ

ಅರಿಯದವರಾರು ಸಾವಿನಾಟವ
ಬಾಳೆಂಬ ಪಗಡೆಯಾಟದಲ್ಲಿ
ದಾಳಗಳು ನಾವು ಉರುಳಿದೆಡೆಗೆ ಸಾಗುವುದಷ್ಟೇ

ಅಗೋಚರ ಸೂತ್ರಕೆ ಪಾತ್ರಧಾರಿಗಳು ನಾವು
ಸಾವೆಂದಿಗೂ
ಅನೂಹ್ಯ ನಮ್ಮ ಪಾಲಿಗೆ!!!

*******

One thought on “ನಾವು ಮತ್ತು ಸಾವು

Leave a Reply

Back To Top