ಕವಿತೆ
ಜೋಕಾಲಿ ನಿಲ್ಲುವುದೆಲ್ಲಿ?
ಕವಿತಾ ಹೆಗಡೆ
ಹರಿದು ಹಂಚಿ ಹೋಗಿದೆ ಬದುಕು
ತೇವವಿಲ್ಲದೆ ರೂಪ ತಾಳದು
ಮೌನ ಸಾಮ್ರಾಜ್ಯದ ಮಹಾರಾಜ ಅವನು
ಮಾತಿನರಮನೆಯಲ್ಲಿ ಅರಗಿಣಿ ನಾನು
ಮೂಕಳಾಗಲೋ ಮಲ್ಲಿಯಾಗಲೋ
ನಿರ್ಲಿಪ್ತಲೋಕದಲಿ ಲುಪ್ತ ಅವನು
ಚಿಮ್ಮಿ ಚೆಲ್ಲುವ ಕಾರಂಜಿ ನಾನು
ಗುಪ್ತಗಾಮಿನಿಯಾಗಲೋ ಧುಮ್ಮಿಕ್ಕಲೋ
ಗಳಿಸುವುದಕಾಗಿ ಬದುಕುವ ಜೀವ ಅವನು
ಬದುಕ ಉಳಿಸಲು ಹೆಣಗುವ ಆತ್ಮ ನಾನು
ಯಂತ್ರವಾಗಲೋ ಜೀವಸುಧೆಯಾಗಲೋ
ಅತಿ ವೈರುಧ್ಯವೂ ಅನಾಕರ್ಷಕವೆ?
ಅತಿ ಸಮರ್ಪಣೆಯೂ ನಿರಾಕರಣೆಯೆ?
**********************************
One thought on “ಜೋಕಾಲಿ ನಿಲ್ಲುವುದೆಲ್ಲಿ?”