Category: ಕಾವ್ಯಯಾನ

ಕಾವ್ಯಯಾನ

ಗಜಲ್ ಹಗಲು ವೇಷ ತೊಟ್ಟವರಲ್ಲ ನಾವುಕಾಲಿಗೆ ಗೆಜ್ಜೆಕಟ್ಟಿ ಕುಣಿಯುವರಲ್ಲ ನಾವು ನಾನಾ ಪರಿಯ ಅನುಭವ ಪಡೆಯುವುದೇಕೆಜಗದಿ ಜಂಗಮರಂತೆ ತಿರುಗುವರಲ್ಲ ನಾವು ಶಿರದಲ್ಲೊಂದು ಗಂಟು ಹೊತ್ತು ನಡೆದೆವಲ್ಲಉರಗದ ತೆರದಲಿ ಹರಿಯುವರಲ್ಲ ನಾವು ಗೇಣುಹೊಟ್ಟೆ ತುಂಬಿಸಲು ನೂರೆಂಟು ಆಟಬಿಡಾರದಲಿ ಶಾಶ್ವತದಲಿ ಇರುವವರಲ್ಲ ನಾವು ಹರಿದ ಎಕ್ಕಡದಂತೆ ಬಾಳು ನರಕವಾಗಿದೆಹಿಲಾಲಿನ ಬೆಳಕನ್ನು ನೋಡುವವರಲ್ಲ ನಾವು ಮೃಷ್ಟಾನ್ನಕ್ಕೆ ಕೈಗಳನ್ನು ಬೊಗಸೆ ಒಡ್ಡಲಿಲ್ಲಕಣ್ಣೆತ್ತಿ ಮೇಲೊಮ್ಮೆ ದಿಟ್ಟಿಸುವರಲ್ಲ ನಾವು ಮುಖಕ್ಕೆ ಬಣ್ಣಹಚ್ಚಿ ನಗಿಸುತಿಹನು ಅಭಿನವಸುಖದಲಿ ತೇಲುತ ಸಾಯುವವರಲ್ಲ ನಾವು ಶಂಕರಾನಂದ ಹೆಬ್ಬಾಳ

ಕಾವ್ಯ ಸಂಗಾತಿ ನಿತ್ಯ ನೂತನ ಅದೇ ಬಿಳಿ ಮುಗಿಲುಅದೇ ತಿಳಿ ಕಡಲುಅದೇ ಉರಿವ ನೇಸರಅದೇ ಹೊಳವ ಚಂದಿರಬದಲಾದುದ ಕಂಡಿಹೆ ಏನು !!? ರಂಗು ರಂಗಿನಫಳ ಫಳ ಹೊಳೆವಪುಟ ಪುಟವೂಚೆಂದ ಅಚ್ಚೋತ್ತಿಹ ಪಟ !ತಿಥಿ ವಾರ ನಕ್ಷತ್ರಎಣಿಸಿ ಗುಣಿಸಿ ನೋಡುವಕೋಣೆ ಗೋಡೆಗೆ ನೆಲ ನೋಡುತಾಜೋತು ಬಿದ್ದು ಮಾಸಕೊಂದುಅಂಗಿ ಬಿಚ್ಚಿ…ವರುಷ ಪೂರ್ಣ ನೇತಾಡುವದಿನ ದರ್ಶಿಕೆ ಮಾತ್ರ !! ಇರುಳು ಸತ್ತು ಹಗಲು ಹುಟ್ಟಿಹಳೆಯ ಕ್ಷಣಗಳ ಮರೆಸಿಹೊಸ ಭಾವಗಳ ತಣಿಸಿಮೂಡಣದಿ ಮುಗಿಲೆಲ್ಲಹೊಂಬಣ್ಣವ ಚೆಲ್ಲಿಗಿರಿ ಶಿಖರಗಳ ಮೇಲೆರಗಿನವೋಲ್ಲಾಸ ಹೊತ್ತುತರುವ ಭಾಸ್ಕರನಿತ್ಯ ನೂತನ ನಿತ್ಯ […]

ಕಾವ್ಯ ಸಂಗಾತಿ ಕಾಯುತ್ತಿದ್ದೇನೆ ದಿನವೊಂದಕ್ಕಾಗಿ ಕಾಯುತ್ತಿದ್ದೇನೆಅಮಾವಾಸ್ಯೆಯ ಚಂದಿರಹೊರಳಿ, ಮರಳಿ ಬೆಳದಿಂಗಳ ಹೊತ್ತುಹುಣ್ಣಿಮೆಯೂರಿಗೆ ಬಂದೇ ಬರುವನೆಂದು ಕಣ್ಣ ಬೆಳಕು ಮರೆಯಾದರೂಮತ್ತೆ ಸೂರ್ಯ ಉದಯಿಸುವನೆಂದುಸೇರದ ತೀರಗಳಿಗೆ ಮುತ್ತಿಡಲುಅಲೆಗಳು ಓಡೋಡಿ ಬಂದೇ ಬರುವವೆಂದು ಆಗಸದಂಚಿನಲ್ಲಿ ನಗುವಾಗಿ,ಒಲವಾಗಿ,ಗೆಲುವಾಗಿ, ನಮಗಾಗಿಕಾಮನಬಿಲ್ಲು ಮೂಡುವದಿನವೊಂದಕ್ಕಾಗಿ ಕಾಯುತ್ತಿದ್ದೇನೆ…. ಒಲವು

ಗಜಲ್

ಮನದ ಹವಾಲಿ ಸುತ್ತ ವಿರಹದ ನೆನಪುಗಳು ಸುತ್ತುತ್ತಿವೆ
ಕಿವಿಗೊಟ್ಟು ಕೇಳು ಎದೆಯ ಬಡಿತದ ಸದ್ದು ನಿಂತಿಲ್ಲ ಇನ್ನು

ಗಜಲ್

ಕಣ್ಣುಗಳು ಕೂಡುವಲ್ಲಿಗೆ ಹೃದಯ ಬೆರೆತಿದ್ದವು ಅವುಗಳ ತಪ್ಪೇನಿತ್ತು…?
ಮರೀಚಿಕೆಯಾಗಿಯಾದರೂ ಮೈ ಮರೆತಿರುವಾಗ ಬಂದು ಮೆರೆದು ಬಿಡು ಒಮ್ಮೆ

Back To Top