ಗಜಲ್

ಗಜಲ್

ಅಭಿಷೇಕ ಬಳೆ ಮಸರಕಲ್

ಹೊರ ಬಂದೊಮ್ಮೆ ನೋಡು ಬಾಗಿಲಿನ ಹೂ ಬಾಡಿಲ್ಲ ಇನ್ನು
ಕಣ್ತೆರೆದು ನೋಡು ಕಣ್ಣೊಳಗಿನ ಕನಸು ಜಾರಿಲ್ಲ ಇನ್ನು

ಸಂಜೆಯ ಬಾನು ನನ್ನಯ ಕಣ್ಣು ಕೆಂಪು ಗುಲಾಬಿ
ಪ್ರೇಮಿಗೂ ಗುಲಾಬಿಗೂ ಅದೆಂಥ ನಂಟು ತಿಳಿದಿಲ್ಲ ಇನ್ನು

ನಿನ್ನ ವಿಳಾಸ ಹುಡುಕುತ್ತಾ ನಡೆದ ದಾರಿಯ ಮರೆತೆ
ಹೊತ್ತಿಕೊಂಡ ಎದೆಯ ದಾವಾನಲ ಆರಿಲ್ಲ ಇನ್ನು

ಮನದ ಹವಾಲಿ ಸುತ್ತ ವಿರಹದ ನೆನಪುಗಳು ಸುತ್ತುತ್ತಿವೆ
ಕಿವಿಗೊಟ್ಟು ಕೇಳು ಎದೆಯ ಬಡಿತದ ಸದ್ದು ನಿಂತಿಲ್ಲ ಇನ್ನು

ಎದೆಯಲ್ಲಿ ನೋವಿಟ್ಟುಕೊಂಡು ನಿನ್ನೆದುರು ಹೇಗೆ ನಗಲಿ
ಅಭಿಯ ಪ್ರೀತಿ ಸುಳ್ಳೆಂದರೆ ಜಿಂದಗಿಯಲಿ ಬದುಕಲ್ಲ ಇನ್ನು


Leave a Reply

Back To Top