ಕಾವ್ಯ ಸಂಗಾತಿ

ನಿತ್ಯ ನೂತನ

ಅದೇ ಬಿಳಿ ಮುಗಿಲು
ಅದೇ ತಿಳಿ ಕಡಲು
ಅದೇ ಉರಿವ ನೇಸರ
ಅದೇ ಹೊಳವ ಚಂದಿರ
ಬದಲಾದುದ ಕಂಡಿಹೆ ಏನು !!?

ರಂಗು ರಂಗಿನ
ಫಳ ಫಳ ಹೊಳೆವ
ಪುಟ ಪುಟವೂ
ಚೆಂದ ಅಚ್ಚೋತ್ತಿಹ ಪಟ !
ತಿಥಿ ವಾರ ನಕ್ಷತ್ರ
ಎಣಿಸಿ ಗುಣಿಸಿ ನೋಡುವ
ಕೋಣೆ ಗೋಡೆಗೆ ನೆಲ ನೋಡುತಾ
ಜೋತು ಬಿದ್ದು ಮಾಸಕೊಂದು
ಅಂಗಿ ಬಿಚ್ಚಿ…
ವರುಷ ಪೂರ್ಣ ನೇತಾಡುವ
ದಿನ ದರ್ಶಿಕೆ ಮಾತ್ರ !!

ಇರುಳು ಸತ್ತು ಹಗಲು ಹುಟ್ಟಿ
ಹಳೆಯ ಕ್ಷಣಗಳ ಮರೆಸಿ
ಹೊಸ ಭಾವಗಳ ತಣಿಸಿ
ಮೂಡಣದಿ ಮುಗಿಲೆಲ್ಲ
ಹೊಂಬಣ್ಣವ ಚೆಲ್ಲಿ
ಗಿರಿ ಶಿಖರಗಳ ಮೇಲೆರಗಿ
ನವೋಲ್ಲಾಸ ಹೊತ್ತು
ತರುವ ಭಾಸ್ಕರ
ನಿತ್ಯ ನೂತನ ನಿತ್ಯ ನವ ಚೇತನ !!

ನಿನ್ನೆಯ ನೆನಹುಗಳಲಿ
ಕಾಲ ದೂಡದಿರಿ
ನಾಳೆಗಳ ಭರವಸೆಯಲಿ
ಮುಂದಿರುವ ಗುರಿಯಡೆಗೆ
ಕನಸುಗಳ ಗರಿ ಬಿಚ್ಚಿ ನನಸು
ಮಾಡುವುದ ಮರೆಯದಿರಿ..!! ಪ!!


ಅಶೋಕ ಬಾಬು ಟೇಕಲ್.

Leave a Reply

Back To Top