ಕಾವ್ಯ ಸಂಗಾತಿ

ಕಾಯುತ್ತಿದ್ದೇನೆ

ದಿನವೊಂದಕ್ಕಾಗಿ ಕಾಯುತ್ತಿದ್ದೇನೆ
ಅಮಾವಾಸ್ಯೆಯ ಚಂದಿರ
ಹೊರಳಿ, ಮರಳಿ ಬೆಳದಿಂಗಳ ಹೊತ್ತು
ಹುಣ್ಣಿಮೆಯೂರಿಗೆ ಬಂದೇ ಬರುವನೆಂದು

ಕಣ್ಣ ಬೆಳಕು ಮರೆಯಾದರೂ
ಮತ್ತೆ ಸೂರ್ಯ ಉದಯಿಸುವನೆಂದು
ಸೇರದ ತೀರಗಳಿಗೆ ಮುತ್ತಿಡಲು
ಅಲೆಗಳು ಓಡೋಡಿ ಬಂದೇ ಬರುವವೆಂದು

ಆಗಸದಂಚಿನಲ್ಲಿ ನಗುವಾಗಿ,
ಒಲವಾಗಿ,ಗೆಲುವಾಗಿ, ನಮಗಾಗಿ
ಕಾಮನಬಿಲ್ಲು ಮೂಡುವ
ದಿನವೊಂದಕ್ಕಾಗಿ ಕಾಯುತ್ತಿದ್ದೇನೆ….


ಒಲವು

Leave a Reply