ಕಾವ್ಯ ಸಂಗಾತಿ

ಒಂದು ದಿನ ಇಲ್ಲವಾಗಿ ಹೋದಾಗ

ನಡೆದ ಕಾಲುಗಳು ಇಲ್ಲವಾಗುತ್ತವೆ
ಆದರೆ ಆ ದಾರಿ ಮಾತ್ರ ಇರುತ್ತದೆ
ಸವೆಸಿದ ಕಾಲ ಇಲ್ಲವಾಗುತ್ತದೆ
ನಡೆದ ದೂರ ಮಾತ್ರ ದಾಖಲಾಗುತ್ತದೆ

ಬರೆದ ನನ್ನ ಕೈಗಳು ಇಲ್ಲವಾಗುತ್ತವೆ
ತೆರೆದ ಭಾವಗಳು ಪುಸ್ತಕವಾಗಿರುತ್ತವೆ
ಶ್ರಮಿಸಿದ ಈ ಕಾಯ ಇಲ್ಲವಾಗುತ್ತದೆ
ಕಾಯಕ ಮಾತ್ರ ದಾಖಲಾಗುತ್ತದೆ

ನಿರೀಕ್ಷೆಯ ಹೊತ್ತ ಮನ ಇಲ್ಲದಾಗುತ್ತದೆ
ದಕ್ಕಿಸಿಕೊಂಡ ಒಲವು ಕಾದಿರುತ್ತದೆ
ಅನುವಾದ ವ್ಯಸನಗಳು ಅಳಿಯುತ್ತವೆ
ಅವಮಾನದ ದಿನಗಳು ಉಳಿದಿರುತ್ತವೆ

ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು ದುಃಖ
ಮುಟ್ಟಿದ್ದಕ್ಕಿಂತ ತಟ್ಟಿದ್ದೇ ಹೆಚ್ಚು ಪಕ್ಕಾ
ಹೊತ್ತವರು ಅರಿವಾದದ್ದೇ ‌ನಡುಬರಕ
ಕೊಟ್ಟು ಹೋಗಲೇನಿಲ್ಲಾ ಒಂದೂ ಸಿಕ್ಕಾ


ವಿಶಾಲಾ ಆರಾಧ್ಯ

7 thoughts on “

  1. ಕೊನೆಯ ಸಾಲುಗಳು ಕೊಟ್ಟಿದಕ್ಕಿಂತ.. ಪಡೆದದ್ದೆ ಹೆಚ್ಚು..ಇಷ್ಟವಾಯ್ತು..ಸೂಪರ್ಬ್

  2. ಜಗದ ಯತಾರ್ಥಕ್ಕೆ ಕನ್ನಡಿ ಯಾಗಿ ತೋರುವ ನಿಮ್ಮ ಕಾವ್ಯ ತುಂಬಾ ಚೆನ್ನಾಗಿ ಇದೆ ಇದರಲ್ಲಿ ಎರಡು ಮಾತಿಲ್ಲ. ಈ ರಚನೆ ಓದಲು ಅವಕಾಶ ನೀಡಿದ ನಿಮಗೆ ಹಾಗೂ ಪತ್ರಿಕೆಯ ಸಂಪಾದಕ ರಿಗೆ ಮನಸಾರೆ ಧನ್ಯವಾದಗಳು

Leave a Reply

Back To Top