Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಗಝಲ್ ಜಗತ್ತೇ ತನ್ನ ಸುತ್ತ ಸುತ್ತುತಿದೆ ಎಂದಾಗ ಹೊರಟು ಬಿಡಬೇಕು ಎಲ್ಲೆಲ್ಲೂ ಪ್ರೀತಿ ನೋಟವಿದೆ ಎಂದಾಗ ಹೊರಟು ಬಿಡಬೇಕು ಇಂದ್ರಚಾಪ ಮೂಡಿಸುವ ಹಗಲಿರುಳುಗಳೇನು ನಿರಂತರವೇ ಇಂದಿಗಿಂದಿನ ಬದುಕು ರಂಗೇರಿದೆ ಎಂದಾಗ ಹೊರಟು ಬಿಡಬೇಕು ಸುಖ ಸಂತಸಗಳು ಪ್ರತಿ ವರುಷ ಬರುವ ವಸಂತನ ತರವೇನು ಹರುಷ ನಲಿ ನಲಿದು ಉಕ್ಕುತಿದೆ ಎಂದಾಗ ಹೊರಟು ಬಿಡಬೇಕು ಎದೆಗೂಡ ಭಿತ್ತಿಯಲಿ ಒಲುಮೆ ಉಲಿವಾಗ ಸ್ವರ್ಗವೂ ನಾಚದೇನು ಸಮುಲ್ಲಾಸದಿ ಜೀವ ಗಂಧ ತೀಡುತಿದೆ ಎಂದಾಗ ಹೊರಟು ಬಿಡಬೇಕು ಇನಿಯನ ಉಸುರುಸಿರ ಬಿಸುಪು ಬೀಗಿ ಮೈ ಮನ ಮರೆಸದಿರದೇ ಕನಸು ಕಚಗುಳಿಯಿಟ್ಟು ಮಾಗುತಿದೆ ಎಂದಾಗ ಹೊರಟು ಬಿಡಬೇಕು […]

ಕಾವ್ಯಯಾನ

ಅಪ್ಪ ಅಪ್ಪ ಎಂದರೆ ನನ್ನಾಸರೆಯ ಹೆಗಲು ಕಡುಗಪ್ಪಿನಂತಹ ಮುಗಿಲು ಬಯ್ಬಿರಿದ ಭೂಮಿಗೆ ಸುರಿವ ಮಳೆಯ ಹನಿಯ ಮುತ್ತಿನ ಸಾಲು ಅಪ್ಪ ಎಂದರೆ ಪ್ರೀತಿಯ ಹೊನಲು ಸವಿಜೇನಿಗೆ ಬೆರೆತ ಹಾಲು ಮಗಳ ಕಾಯುವ ಒಡಲು ಜೊತೆಗಿದ್ದರೆ ಜಗದಲಿ ನನ್ನ ಕೈಯೇ ಮೇಲು ಅಪ್ಪ ಎಂದರೆ ನಗುವ ದ್ವನಿಯ ಕೊರಳು ಸದಾ ಜೊತೆಗಿರುವ ನೆರಳು ಹಿಡಿದು ಹೊರಟರೆ ಅಪ್ಪನ ಕಿರುಬೆರಳು ಖುಷಿಯ ಬುಗ್ಗೆಯಲಿ ಮೆರವಣಿಗೆ ಹಗಲಿರುಳು ಅಪ್ಪನಿಲ್ಲದಾ ಈ ಕ್ಷಣವು ಹೃದಯದಲವಿತಿದೆ ನಿರಾಸೆಯು ಯಾರಲ್ಲಿ ಹುಡುಕಲಿ ಅಪ್ಪನೊಲವು ಅಪ್ಪನ ಕಳೆದುಕೊಂಡ […]

ಕಾವ್ಯಸಂಕ್ರಾಂತಿ

ಸಂಕ್ರಮಣ ಅದ್ಭುತವ ತಂದರೆ ತರಲಿ ಈ ಸಂಕ್ರಮಣ ಬೇಡವೆನ್ನಲು ಯಾರು ನಾನು ಬದುಕು ತಂದ ಅಷ್ಟಿಷ್ಟು ನೆಮ್ಮದಿ ಜೊತೆಗೆ ಸಿಕ್ಕರೆ ಸಿಗಲಿ ಜೇನು ಸುಳಿಯಲ್ಲೋ ಮಕರದ ಬಾಯಲ್ಲೋ ಸಿಗದೆ ಸಾಗುತಿರಲಿ ಪಯಣ ಮಮಕಾರ ಕರ ಪಿಡಿದು ಸಂತಸದ ಸೆಲೆ ಹರಿದು ಆಗುತಿರಲಿ ಗಮನ …ಉದ್ದಕ್ಕೂ ಇರಲಿ ಅವನ ಕರುಣ ********** ಡಾ.ಗೋವಿಂದ ಹೆಗಡೆ

ಕಾವ್ಯಸಂಕ್ರಾಂತಿ

ಸಾಕೊಂದಿಷ್ಟು ಕವಿತಾ ಸಾರಂಗಮಠ ಉತ್ತರಾಯಣನ ಪುಣ್ಯ ಕಾಲಕೆ ಗದ್ದಲದ ಅಂಧರ ಮಂಡಿಪೇಟೆಯಲ್ಲಿ ಸಂಕ್ರಮಣ ಕಾಲಕೆ ಕಣ್ಣಾವೆಗಳಾದರೂ ಸಂಧಿಸಿವೆ ಸಾಕೊಂದಿಷ್ಟು ಈ ಕಾಲಕೆ..! ಹ್ಯಾಪಿ ಪೊಂಗಲ್ ಡೇ ಎಂಬ ಜಾಹೀರಾತಿಗೆ ಸಂತೋಷ ಉಕ್ಕಿ ಮೋಬೈಲ್ ಮಾತಲಿ ತೊಡಗಿದವರ ನಡುವೆಯೂ ಕುಂಟರಿಬ್ಬರ ತೆವಳುವಿಕೆಗೆ ಗಾಳಿಯಾದರೂ ಬೀಸಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಭವಿಷ್ಯ ಕೇಳಿ ಮದುವೆಯಾಗಬಾರದು ಎಂಬ ನುಡಿಗೆ,ಕಣ್ಣುಗಳ ಒದ್ದೆಮಾಡಿಕೊಂಡಿದ್ದೇನಿಲ್ಲಿ ಬಿಕ್ಕಿಸಿ ಅತ್ತಾಗ ಬೀದಿ ನಾಯಿಯಾದರೂ ನಲುಗಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಹಬ್ಬವೆಂದರೆ ಕಿಬ್ಬದಿಯ ಕೀಲು ಮುರಿಸಿಕೊಂಡು,ಗೇಣು ಭೂಮಿಗೆ ಕಾದಾಡಿ ನ್ಯಾಯ […]

ಕಾವ್ಯಯಾನ

ರಥ ಸಪ್ತಮಿ ಹೊಸ ಪಥದಿ ಮೂಡಿ ಬಂದ ಮಂಜಿನ ತೆರೆ ಸರಿಸಿ ನಕ್ಕಳಿವಳು ಎಳ್ಳು ಬೆಲ್ಲವ ನೀಡಿ ‘ಒಳ್ಳೆಯ ಮಾತಾಡು’ಅಂದಳು ಸೂರ್ಯ ನಕ್ಕಿದ್ದುಂಟೇ! ಸಿಡಿ ಮಿಡಿ ಅನ್ನುತ್ತಲೇ ಬಿಸಿ ತೋಳುಗಳ ಬಳಸಿ ಅಪ್ಪಿಕೊಂಡ. ******** ಪ್ರೇಮಲೀಲಾ ಕಲ್ಕೆರೆ

ಕಾವ್ಯಸಂಕ್ರಾಂತಿ

ಪರಿವರ್ತನೆಯ ಪರ್ವಕಾಲ  ಅವ್ಯಕ್ತ ಅನಂತ ಆಗಸದಿ ಸ್ವಚ್ಛಂದ ಕ್ರಮಿಸುವನು, ಆದಿತ್ಯ ಸ್ನೇಹರಾಶಿಗಳ ಮನೆಯಿಂದ ಮನೆಗೆ, ಧನುವಿಗೆ ಕೈಬೀಸಿ ಮಕರನಿಗೆ ಕೈಚಾಚುತಲಿ, ಕಾಯದ ನಾಡಿಗಳಿಗೆ ಉತ್ತರಾಯಣಾಗಮನದ ಸಂಭ್ರಮ… ಜೀವಲೋಕದ ದಿನಕರನ ಕಣಕಣದ ಆಟದ ಪರಿಯೋ ! ರಾತ್ರಿ ಮಾಗಿ ಹಗಲು ಹಿಗ್ಗಿ, ವಿರಸ ಕಳೆದು ಸರಸ ಬೆಳೆದು, ಶೀತ ಕರಗಿ ಶಾಖವರಳಿ, ಬಂಜೆ ಬಾಡಿ ಭೂ ರಮೆಯಾಗಿರಲು, ರವಿತೇಜನ ತಂಪಿಗೆ ಹಬ್ಬಿತೆಲ್ಲೆಡೆ ಸಂಕ್ರಮಣದ ಸಡಗರ… ಸ್ವಾಗತಿಸುವ ಸಂಭ್ರಮದಿ ಸಂತಸವ ಹಂಚುತಲಿ, ಎಳ್ಳು ಬೆಲ್ಲ ಕಡಲೆ ಕೊಬ್ಬರಿ ಕಬ್ಬು ಬಾಳೆ […]

ಕಾವ್ಯಸಂಕ್ರಾಂತಿ

ಸಂಕ್ರಾಂತಿ ಪ್ರಮಿಳಾ ಎಸ್.ಪಿ. ಪಥ ಬದಲಿಸುವ ನೇಸರನನ್ನು ಶರಶೆಯ್ಯಯ ಮೇಲೆ ಮಲಗಿ ಕಾದಿದ್ದನಂತೆ ಗಾಂಗೇಯ…. ಪುಣ್ಯಕಾಲಕ್ಕಾಗಿ! ಪೃಥ್ವಿಯ ತಿರುಗುವಿಕೆಯಲಿ ದಿನಕರನ ಮೇಲಾಟದಲಿ ಋತುಗಳ ಓಡಾಟದಲಿ ಇಳೆಯ ಜೀವಿಗಳ ಹೊಸ ವರುಷದ ಹುರುಪಿನಲಿ ವರುಷಕ್ಕೊಮ್ಮೆ ಬರುವುದೇ ಸಂಕ್ರಾಂತಿ ಉಳುವ ಯೋಗಿಯು ಬೆಳೆದ ಹುಲುಸಾದ ಫಸಲು ಮನ ತುಂಬಿ ಮನೆ ತುಂಬುವ ತವಕದಲಿರೆ ದುಡಿದ ದನಕರುಗಳ ಮಜ್ಜನಕ್ಕಿಳಿಸಿ ಮೈದಡವಿ ಹಿಗ್ಗು ತರುವುದೇ ಸಂಕ್ರಾಂತಿ ಕುಗ್ಗಿದ ಕೊರಗಿದ ಅಹಂ ಒಳಗೆ ಬೀಗಿದ ಮನಗಳು ಎಳ್ಳು ಬೆಲ್ಲ ನೀಡಿ-ಪಡೆದು ಹಗುರಾಗುವ ಘಳಿಗೆಯೇ ಸಂಕ್ರಾಂತಿ […]

ಕಾವ್ಯಸಂಕ್ರಾಂತಿ

ಸುಗ್ಗಿಯ ಸಂಭ್ರಮ ರತ್ನಾ ಬಡವನಹಳ್ಳಿ ಬಂದಾನೋ ಭಾಸ್ಕರ ಬೆಳ್ಳಿಯಾ ರಥವೇರಿ ಬುವಿಗೆ ಚೆಲ್ಲುತ ಬೆಳಕ ಹೊನ್ನಕಿರಣಗಳ ಕಾಂತಿ ದಿಕ್ಕು ಬದಲಿಸು ದೆಸೆಯ ತಿರುಗಿಸುತ ಸವಾರಿ ತಂದು ಧರೆಯಲಿ ಮಕರ ಸಂಕ್ರಾಂತಿಯ ಸಂಭ್ರಮ ಊರ ಬಾಗಿಲಿಗೆ ಹಸಿರು ತೋರಣವ ಕಟ್ಟಿ ತಲೆಗೊಂದು ಚೌಕದಾ ಪೇಟವಾ ಧರಿಸಿ ಎಳ್ಳು,ಬೆಲ್ಲ,ಕೊಬ್ಬರಿ ಕಬ್ಬಿನ ಸವಿಯ ಸವಿಯುತ ಬೆಳೆದ ಧಾನ್ಯಗಳ ರಾಶಿಯ ಮಾಡುವ ಸಂಭ್ರಮ ಎತ್ತುಗಳ ಅಲಂಕರಿಸಿ ಮೆರವಣಿಗೆ ಮಾಡುತಾ ಸುಗ್ಗಿಯ ಸಡಗರದಿ ಹುಗ್ಗಿಯನು ತಿನ್ನುತಾ ಕುಣಿ ಕುಣಿದು ನಲಿ ನಲಿದು ಹೆಜ್ಜೆ ಹಾಕುತ […]

ಕಾವ್ಯಸಂಕ್ರಾಂತಿ

ಹಳ್ಳಿಯ ಸಂಕ್ರಾಂತಿ ಸಂಭ್ರಮ ಸುಜಾತ ರವೀಶ್ ಹಬ್ಬಿದ ಮಬ್ಬು ಕಾವಳ ಹರ್ಯೋ ಹೊತ್ತು ನೇಸರ ತನ್ನ ರಥ್ವಾ ಹೊರಳ್ಸೋ ಹೊತ್ತು ಆರಂಬದ ಕೆಲ್ಸ ಮುಗಿದು ಇನ್ನ ಸ್ವಲ್ಪ ಪುರುಸೊತ್ತು ಪಟ್ಟ ಕಷ್ಟಕ್ಕೆ ಪ್ರತಿಫಲ ಎಣಿಸೋ ಹೊತ್ತು . ಭೂಮ್ತಾಯಿ ನಮ್ನೆಲ್ಲಾ ಹರಸ್ತಾ ನಿಂತವಳೇ ಕಾಳ್ಕಡ್ಡಿ ರೂಪ್ದಾಗೆ ಕಣಜಕ್ಕೆ ಬರ್ತೌಳೆ ಕಣದಾಗೆ ರಾಸಿ ರಾಸಿ ತುಂಬೈತೆ ನೆಲ್ಲು ಆಳೆತ್ತರ ಪೇರ್ಸೈತೆ ಮೇವಿಗೆ ಒಣಹುಲ್ಲು . ಬನ್ನಿ ಎಲ್ಲ ಸಂತೋಸ್ವಾಗಿ ಹಬ್ಬ ಮಾಡೋಣ ಹಸಿರು ತಂದು ತಲ್ಬಾಗ್ಲಿಗೆ ತೋರ್ಣಾವಾ ಕಟ್ಟೋಣ […]

ಕಾವ್ಯಸಂಕ್ರಾಂತಿ

ಗಝಲ್ ಸಂಕ್ರಾಂತಿ ವಿಶೇಷ ಎ.ಹೇಮಗಂಗಾ ಹೊಸ ವರುಷದೊಡೆ ಹರುಷವಿನ್ನೂ ಮೂಡಲಿಲ್ಲ ಬಂದರೇನು ಸಂಕ್ರಾಂತಿ? ದುರ್ದಿನಗಳ ಕರಾಳ ನೆನಪಿನ್ನೂ ಮಾಸಲಿಲ್ಲ ಬಂದರೇನು ಸಂಕ್ರಾಂತಿ? ದಕ್ಷಿಣದಿಂದ ಉತ್ತರದೆಡೆಗೆ ನಿಶ್ಚಿತ ಪಥದಲಿ ಸೂರ್ಯನ ಚಲನ ಸ್ವಾರ್ಥದ ಪಥವ ಮನುಜನಿನ್ನೂ ಬದಲಿಸಲಿಲ್ಲ ಬಂದರೇನು ಸಂಕ್ರಾಂತಿ ? ಯಾಂತ್ರಿಕ ಬದುಕಲ್ಲಿ ತುಂಬುವುದು ಸುಗ್ಗಿಯ ಸಂಭ್ರಮ ಅಲ್ಪಕಾಲ ಬಡವನೊಡಲ ಬಡಬಾಗ್ನಿಯಿನ್ನೂ ತಣಿಯಲಿಲ್ಲ ಬಂದರೇನು ಸಂಕ್ರಾಂತಿ? ಸೃಷ್ಟಿಕರ್ತನ ದೃಷ್ಟಿಯಲಿ ಯಾರು ಮೇಲು, ಯಾರು ಕೀಳು ಇಲ್ಲಿ? ಅಸಮಾನತೆಯ ಗೋಡೆಯನಿನ್ನೂ ಕೆಡವಲಿಲ್ಲ ಬಂದರೇನು ಸಂಕ್ರಾಂತಿ ? ಮಂದಿರ, ಮಸೀದಿ, […]

Back To Top