ಕಾವ್ಯಯಾನ

ಅಪ್ಪ

Standing Man Wearing Gray Shirt While Smiling and Carrying Girl

ಅಪ್ಪ ಎಂದರೆ ನನ್ನಾಸರೆಯ ಹೆಗಲು
ಕಡುಗಪ್ಪಿನಂತಹ ಮುಗಿಲು
ಬಯ್ಬಿರಿದ ಭೂಮಿಗೆ ಸುರಿವ
ಮಳೆಯ ಹನಿಯ ಮುತ್ತಿನ ಸಾಲು

ಅಪ್ಪ ಎಂದರೆ ಪ್ರೀತಿಯ ಹೊನಲು
ಸವಿಜೇನಿಗೆ ಬೆರೆತ ಹಾಲು
ಮಗಳ ಕಾಯುವ ಒಡಲು
ಜೊತೆಗಿದ್ದರೆ ಜಗದಲಿ ನನ್ನ ಕೈಯೇ ಮೇಲು

ಅಪ್ಪ ಎಂದರೆ ನಗುವ ದ್ವನಿಯ ಕೊರಳು
ಸದಾ ಜೊತೆಗಿರುವ ನೆರಳು
ಹಿಡಿದು ಹೊರಟರೆ ಅಪ್ಪನ ಕಿರುಬೆರಳು
ಖುಷಿಯ ಬುಗ್ಗೆಯಲಿ ಮೆರವಣಿಗೆ ಹಗಲಿರುಳು

ಅಪ್ಪನಿಲ್ಲದಾ ಈ ಕ್ಷಣವು
ಹೃದಯದಲವಿತಿದೆ ನಿರಾಸೆಯು
ಯಾರಲ್ಲಿ ಹುಡುಕಲಿ ಅಪ್ಪನೊಲವು
ಅಪ್ಪನ ಕಳೆದುಕೊಂಡ ಈ ಬದುಕು ಕಣ್ಣೀರ ಮಡುವು.

********

ನಿರ್ಮಲಾ ಆರ್.

This image has an empty alt attribute; its file name is c7847065-59e3-449c-aadc-edef2e2c62ad.jpg

Leave a Reply

Back To Top