ಕಾವ್ಯಯಾನ
ಗಝಲ್ ರತ್ನರಾಯಮಲ್ಲ ಆಗಸದಲ್ಲಿ ನೇಸರ ಹುಟ್ಟುತಿದ್ದಾನೆ ನೋಡಿಕನಸುಗಳು ಮೂಟೆ ತರುತಿದ್ದಾನೆ ನೋಡಿ ಇರುಳು ಕಳೆದು ಹೋಗಿದೆ ಹಗಲಿನ ಒಡಲಲ್ಲಿಚೈತನ್ಯವನ್ನು ಹೊತ್ತು ಬಂದಿದ್ದಾನೆ ನೋಡಿ ಮೂಡಣದಲ್ಲಿ ರವಿ ಅಂಬೆಗಾಲು ಇಡುತಿರುವನುಅಕ್ಷಯ ಉಲ್ಲಾಸವನ್ನು ಹಂಚುತಿದ್ದಾನೆ ನೋಡಿ ಅವನಿಯನ್ನು ಹೊಂಗಿರಣಗಳು ಚುಂಬಿಸುತಿವೆಪಾದರಸದ ಚಲನೆಯನ್ನು ನೀಡುತಿದ್ದಾನೆ ನೋಡಿ ಹಕ್ಕಿಗಳ ಚಿಲಿಪಿಲಿಯು ಹೃದಯವನ್ನು ತಟ್ಟುತ್ತಿದೆನಿರಾಸೆಯ ಕೊಳೆಯನ್ನು ತೊಳೆಯುತಿದ್ದಾನೆ ನೋಡಿ ಗಿಡ-ಮರಗುಳು ತಂಗಾಳಿಯಿಂದ ಸ್ವಾಗತಿಸುತಿವೆಬಾಳಿನ ಅನನ್ಯ ಕಲೆಯನ್ನು ಕಲಿಸುತಿದ್ದಾನೆ ನೋಡಿ ಹಾಸಿಗೆಯನ್ನು ತೊರೆದು ಹೊರಗೆ ನೋಡು ಮಲ್ಲಿಮಂದಹಾಸದ ಪಾಠವನ್ನು ಹೇಳುತಿದ್ದಾನೆ ನೋಡಿ
ಕಾವ್ಯಯಾನ
ನೀ ಹೋದರೂ.. ಶೀಲಾ ಭಂಡಾರ್ಕರ್ ನಿನ್ನ ನೆನಪುಗಳು..ನನ್ನ ಬಳಿಯೇ ಉಳಿದಿವೆನಿನ್ನ ಜತೆ ಹೋಗದೆ.. ಇನ್ನೂ ..ಚೆನ್ನಾಗಿ ಬೆಳೆಯುತ್ತಿವೆ..ದಟ್ಟವಾಗಿಮನದ ತೋಟದೊಳಗೆ ನೀನಾಡಿದ್ದ ಮಾತುಗಳುಆಸೆಯಿಂದ ಕತ್ತೆತ್ತುತ್ತವೆ ಆಗಾಗಹಳೆಯ ಆಲದ ಮರದಪೊಟರೆಯೊಳಗಿನಿಂದಮರಿ ಕೋಗಿಲೆಗಳು ಇಣುಕಿದ ಹಾಗೆ. ಎಷ್ಟು ದೂರದವರೆಗೆನಡೆದು ಬಂದಿವೆ ನೋಡುಆ ನೆನಪುಗಳು ಬರಿಗಾಲಿನಲ್ಲಿ.ಬೇಸಿಗೆಯಿಂದ ಮಳೆಯವರೆಗೆಬಾಲ್ಯದಿಂದ ತಾರುಣ್ಯದವರೆಗೆ ಅಡಗಿ ಕುಳಿತುಸಂಭಾಷಿಸುತ್ತವೆ ಕೆಲವುತಮ್ಮ ತಮ್ಮಲ್ಲೇಒಳಕೋಣೆಯೊಳಗೆ. ಎಲ್ಲವೂ ನೆನಪಿದೆ ನನಗೆನಿನ್ನ ಪ್ರೀತಿ. ನಿನ್ನ ಮಾತು..ತಿಳಿ ಹಾಸ್ಯ ಮತ್ತು ನಿನ್ನ ನಗೆ. ನೇರಳೆ ಹಣ್ಣೆಂದು ತಿನ್ನಿಸಿದಬೇವಿನ ಹಣ್ಣಿನ ರುಚಿಯೂಮರೆತಿಲ್ಲ ಇನ್ನೂ ನನಗೆ ಕಹಿ ಹಾಗೆಯೇ ಉಳಿದುಕೊಂಡಿದೆ..ನಾಲಿಗೆಯ […]
ಕಾವ್ಯಯಾನ
ಗಝಲ್ ಸುಜಾತಾ ಲಕ್ಮನೆ ಗಂಟಿಕ್ಕಿ ಹುರಿ ಹುಬ್ಬು ಹಾರಿಸಿದಂತೆಲ್ಲ ನಾನೇನೂ ಬೆದರುವುದಿಲ್ಲಪೊದೆ ಮೀಸೆಯಲ್ಲೇ ರೋಷ ಉಕ್ಕಿಸಬೇಡ ಸೊಪ್ಪು ಹಾಕುವುದಿಲ್ಲ ತವರಲ್ಲಿ ಮುದ್ದಾಗಿ ಅಂಗೈಲೇ ಬುವಿ ಬಾನು ದೋಚಿದವಳು ನಾನುಕಣ್ಣಲ್ಲೇ ಕೆಣಕಿದಂತೆಲ್ಲ ಮೈ ಮನದ ಕಣಗಳೆಲ್ಲ ನವಿರೇಳುವುದಿಲ್ಲ ನಿನ್ನಂತೆಯೇ ಆಡಿ ನಲಿದು ಬಣ್ಣದ ಲಂಗದಲಿ ಕನಸ ಜೀಕಿದವಳುಮಾತು ಮೌನಕೆ ಮಣಿವ ಬೆಳ್ನಗೆಯಲಿ ಸ್ವಂತಿಕೆ ನಳನಳಿಸುವುದಿಲ್ಲ ನಿನ್ನ ಸೇವೆಯೇ ಎನ್ನ ಜೀವನದ ಪರಮ ಗುರಿಯೆಂಬ ಭ್ರಮೆಯೇಕೆಸದಾ ಕೀಲುಗೊಂಬೆಯಂತೆ ನಡೆವ ಪರಿ ನನಗೂ ಇಷ್ಟವಾಗುವುದಿಲ್ಲ ಕಾಲ ಮೇಲೆ ಕಾಲು ಹಾಕಿ ಕೂತು […]
ಕಾವ್ಯಯಾನ
ಗಝಲ್ ತೇಜಾವತಿ ಹೆಚ್.ಡಿ. ಅಸಲಿಗೆ ನಕಲಿಯ ಲೇಪನ ಬಳಿದಿರಬಹುದು ನೋಡುಕಂಗಳಿಗೆ ಆವರಿಸಿರುವ ಪೊರೆಯ ಸರಿಸಿ ಅರಿಯಬಹುದು ನೋಡು ಭಿತ್ತಿಯ ಮೇಲೆ ಬಿದ್ದ ಛಾಯೆಯು ಮಿಥ್ಯವಿರಬಹುದು ಒಮೊಮ್ಮೆಅಂತಃಕರಣದ ಅಕ್ಷಿಯರಳಿಸಿ ದಿಟವ ತಿಳಿಯಬಹುದು ನೋಡು ತಳವಿಲ್ಲದ ಬಾವಿ ಅನಂತ ಆಳವ ತೋರಿರಬಹುದು ಅಲ್ಲಿಭ್ರಮೆಯಿಂದ ಹೊರಬಂದು ನೈಜತೆಯ ಕಾಣಬಹುದು ನೋಡು ದಿಗಂತವು ಇಳೆ ಆಗಸವು ಸಂಧಿಸಿದಂತೆ ಭಾಸವಾಗುವುದುವಿಶ್ವವನ್ನೊಮ್ಮೆ ಪರ್ಯಟಿಸಿ ಅವಲೋಕಿಸಬಹುದು ನೋಡು ಅಖಂಡ ಆಗಸವು ನೀಲವರ್ಣದಿ ಗೋಚರಿಸುವುದು ಮೇಲೆಬೆಳಕಿನ ಮೂಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸಬಹುದು ನೋಡು ********
ಗಝಲ್
ಗಝಲ್ ತೇಜಾವತಿ ಹೆಚ್.ಡಿ. ಕೊರೆಯುವ ಚಳಿಯಲ್ಲೂ ವಹ್ನಿಯೊಡಲು ದಹಿಸುತ್ತಿದೆ ಸಾಕಿಬಹಿರಂಗದ ತೊಗಲು ಅಂತರಂಗದ ಜ್ವಾಲೆಯಲ್ಲಿ ಮೈ ಕಾಯಿಸುತ್ತಿದೆ ಸಾಕಿ ಹೆಪ್ಪುಗಟ್ಟಿದ್ದ ಹೃದಯ ರಂಧ್ರ ಮುಚ್ಚಿದ್ದ ಕಾಯದ ಬಾಯಿ ತೆರೆದುನರನಾಡಿಯಲ್ಲೂ ಶರವೇಗದಿ ಕಾವು ಮಿಂಚಂತೆ ಸಂಚರಿಸುತ್ತಿದೆ ಸಾಕಿ ರೆಕ್ಕೆ ಮೂಡದ ಹಕ್ಕಿಯ ಕನಸೊಳಗೆ ಮೌನದ ನೀರವತೆ ಮಡುಗಟ್ಟಿದೆಹನಿವ ಮಳೆಯೊಡನೆ ಹರಿವಕಂಬನಿ ಧರೆಯಲಿ ಲೀನವಾಗುತ್ತಿದೆ ಸಾಕಿ ಸಲಿಲದಿಂದ ಬೇರ್ಪಟ್ಟ ಮತ್ಸ್ಯದ ಒದ್ದಾಟದ ಚಡಪಡಿಕೆಯಲಿಜಾತಕಪಕ್ಷಿ ಜೀವಸೆಲೆಗಾಗಿ ಕಾತರಿಸಿ ಜವವ ಕಾಯುತ್ತಿದೆ ಸಾಕಿ ಇರುಳ ತಿಂಗಳ ತೇಜಸ್ಸನ್ನು ಭ್ರಮಿಸಿ ಸ್ಮೃತಿಪಟಲದ ಅಕ್ಷಿಗಳಲ್ಲಿಜಾರಿದ ಅಶ್ರುಬಿಂದುಗಳ […]
ಕಾವ್ಯಯಾನ
ಸಮುದ್ರ ಸಂಗೀತ ಫಾಲ್ಗುಣ ಗೌಡ ಅಚವೆ. ದೂರ ದಿಗಂತದಿಂದ ಓಡಿ ಬರುವಅಲೆಗಳು ದಂಡೆಗೆ ಅಪ್ಪಳಿಸುತ್ತಿವೆನಿರಾಳವಾಗುತ್ತಿವೆ.ಗುರಿಯ ಸಾಫಲ್ಯತೆಪ್ರಯತ್ನದ ಫಲವತ್ತತೆಸಾರುತ್ತಿದೆ ಕಡಲುಹಾಗೆ ಒಳಗೆ ಇಣುಕಿದರೆದಂಡೆಯ ಮೌನ ಸಂಗೀತಕೇಳುವುದು. ಸತ್ತ ಮೀನು ಸೌದೆ ಕೋಲುಎಲ್ಲವನ್ನೂ ದಂಡೆಗೆಸೆವತಾನು ಶುಭ್ರಗೊಳ್ಳುವ ಪರಿಅಚ್ಚರಿ!ಒಂದು ಕ್ಷಣ ಮನದಲ್ಲಿಣುಕಿದರೆನಿನ್ನೊಳಗಿನ ದ್ವೇಷ, ಅಸೂಯೆಕೋಪ ಸಣ್ಣತನಗಳ ಇದೇದಂಡೆಯಲ್ಲಿ ಬಿಟ್ಟು ಹೊರಡುವೆನಿಶ್ಕಲ್ಮಶ ಮನಸ ಹೊತ್ತು. ಶರಧಿಯೋಳಗಿನ ಆಳ ವಿಸ್ತಾರಭೋರ್ಗರೆತ,ಭರತ ಇಳಿತಗಳುಲಾಗಾಯ್ತಿನಿಂದಿಲ್ಲಿವರೆಗೆಸೇರುವ ಹೊಳೆಹಳ್ಳ,ನದಿಗಳುಕೂಡುತ್ತಲೇ ಇವೆ.ಎಲ್ಲ ಇದ್ದು ಇಲ್ಲದಂತಿರುವಸಮುದ್ರ ಸಮತೋಲನದ ಪಯಣನಿನ್ನೊಳಗೆ ಬಿಂದು ಸಿಂಧುವಾಗಲಿ. ಆಗಾಗ್ಗೆ ಅಥವಾ ಸಂಜೆಯಲ್ಲಿಸಣ್ಣಗೆ ಅಲೆವ ಅಲೆ ತನ್ನೊಳಗಿನಸುಪ್ತ ಸಂಗೀತ ಸೃಷ್ಟಿಸುವುದುನಿನ್ನೊಳಗಿನ […]
ಕಾವ್ಯಯಾನ
ಅಪ್ಪ ವೀಣಾ ನಿರಂಜನ್ ಯಾಕೋ ನಾನುಇವತ್ತಿಗೂ ಕೂಡಬೆಳೆದು ದೊಡ್ಡವಳಾಗಲೇ ಇಲ್ಲ! ಅಪ್ಪ ಮಾತ್ರಎಂದಿನಂತೆ ನನ್ನೊಳಗೆಬೆಳೆಯುತ್ತಲೇ ಇದ್ದಾನೆಅಪ್ಪನ ಅಸ್ಪಷ್ಟ ನೆನಪುಕಾಡಿದಾಗಲೆಲ್ಲನನ್ನವನೆದುರಿಗೆ ಮಗುವಾಗಿಬಿಡುವ ನಾನುಸುಖಾಸುಮ್ಮನೆರಚ್ಚೆ ಹಿಡಿಯುತ್ತೇನೆ ಹುಸಿ ರಂಪಎರಡು ಹನಿ ಕಣ್ಣೀರುಬಾಲ್ಯದ ಸವಾರಿಮಾಡಿಬಿಡುವ ಮನಸ್ಸುಅಪ್ಪನ ಕಾಯಿಲೆಅಮ್ಮನ ಗೋಳುಸರೀಕರ ತಾತ್ಸಾರನಮ್ಮಗಳ ಅಕಾಲ ಗಾಂಭೀರ್ಯತೆಎಷ್ಟು ನೀರು ಹಿಡಿದೀತುಪುಟ್ಟ ಬೊಗಸೆ ! ಪಾಳುಬಿದ್ದ ಅಪ್ಪನ ಮಹಾಮನೆಗೋಡೆ ಮಣ್ಣ ತಾರಸಿಯಮೇಲೆಲ್ಲ ಹುಲ್ಲು ಕಳೆಸಸ್ಯಗಳದೇ ಕಾರುಬಾರುಬಿರಿದು ಚೂರಾದ ಕಂಬಗಳುಎಷ್ಟು ಕತೆಗಳ ಹೇಳಿದರೂಮುಗಿಯದು ಇತಿಹಾಸ. ಮುದಿ ಹೆಂಗಸು ಹಜರತ್ ಬಿಇಂದಿಗೂ ಸ್ಮರಿಸುತ್ತಾಳೆಅಪ್ಪ ಕೊಡಿಸಿದ ಸರ್ಕಾರಿ ಮನೆಮತ್ತು ವಿಧವಾ ಪಿಂಚಣಿಯನ್ನು […]
ಅನುವಾದ ಸಂಗಾತಿ
ಕಡಲೊಳಗೆ ಕಡಲಾಮೆಗಳು ಇಂಗ್ಲೀಷ್ ಮೂಲ:Melvin B Tolson ಕನ್ನಡಕ್ಕೆ: ವಿ.ಗಣೇಶ್ ವಿಚಿತ್ರ ಆದರೂ ಸತ್ಯವಿದು ಕೇಳಿ ಕಡಲಿನಲಿರುವ ಕಡಲಾಮೆಗಳ ಕಥೆ ಕಡಲಾದರೇನು ಒಡಲಾದರೇನು? ಕುಣಿದು ಕುಪ್ಪಳಿಸುವುದಕೆ ಚಿಂತೆ ಒಮ್ಮೊಮ್ಮೆ ಅನ್ನ ಆಹಾರಗಳಿಲ್ಲದೆ ಶಾರ್ಕಗಳು ಕಡಲಲ್ಲಿ ಒದ್ದಾಡುವುವು ಬೇಟೆಯನು ಹುಡುಕುತ್ತ ಬರುವ ಶಾರ್ಕ್‍ಗಳಿಗೆ ಸಿಗುವುದೀಆಮೆಗಳು ಉದರವನು ತಣಿಳಿಸಲು ಆಕ್ರಮಿಸಿ ನುಂಗುವುವು ಇಡಿ ಕಡಲಾಮೆಗಳನು ಬೆಣ್ಣೆಯಂತಹ ದೇಹದೊಳಗಿಳಿಯುತ್ತ ಜಾರುವುದು ಆಮೆಯು ಉದರದೊಳಗೆ ಒಳಸೇರಿದೊಡೆ […]
ಕಾವ್ಯಯಾನ
ಪ್ರೀತಿ ಬಡತನ ವಾಣಿ ಭಂಡಾರಿ ಅವ್ವನ ಸದ್ದಿರದ ಖಾಲಿ ಅಡಿಗೆ ಮನೆಯು,ಬಣಬಣ ಎನುತಲಿ ಮನವನು ಹಿಂಡಿದೆ.ಒಡಲೊಪ್ಪತ್ತಿಗೆ ಕೂಳು ತರಲು ಆಚೆಮನೆ,ಕಂಡ್ಲಿಲಿ ನಿಂತ ಅವ್ವನ ಬಂಗಿ ಕಾಣದಾಗಿದೆ. ಒಲೆಯೊಳು ಉರಿವ ಬೆಂಕಿಗೆ ಬೇಸರವು,ಚೆರ್ಗೆಯೊಳು ಕಾದಾರಿದ ಎಸರ್ನೀರಿತ್ತು.ತಣ್ಣಗಾಗಿ ಮತ್ತೊತ್ತುರಿಯಲು ಮನಸಿಲ್ಲದೆ, ಹೊಗೆಯುಗುಳುತಲಿ ನೋವಲಿ ಮಲಗಿತು. ಹಸಿ ಸೌದೆಯೊಳು ಉಗುಳೊ ಹೊಗೆಯಂತೆ,ಮನವು ಜಡ್ಡುಗಟ್ಟಿದಂತಹ ಮಸಿಯರಬೆ.ಇಲ್ಲಣವಿರದ ಖಾಲಿಪಾತ್ರೆ ಹೊರಳಿ ಮಲಗಿ,ಗಿಲಾವಿರದ ಗೋಡೆ ಕಥೆ ಹೇಳಿ ಮನದಲಿ ಹಬೆ. ತೊಳೆದ ಪಾತ್ರೆಯೊಳು ಪಾವಕ್ಕಿಯಿರದೆ,ಮನೆಮನದ ಮೂಲೆಯಲ್ಲಿ ರಶ್ಮಿ ಚೆಲ್ಲಿದೆ.ಬಡತನಕಿರುವ ಸಾವು ಪ್ರೀತಿಗಿರದಿಲ್ಲಿ ಎನುತ,ನೆಮ್ಮದಿ ತಾಣವೆ ಅಮ್ಮನಡಿಗೆ […]
ಕಾವ್ಯಯಾನ
ಬಂಗಾರದ ನೆನಪಿನ ಬೆಳ್ಳಿ ಗೆಜ್ಜೆ’ ವಸುಂಧರಾ ಕದಲೂರು ಮೊನ್ನೆ ಬಯಸೀ ಬಯಸೀಆಭರಣದಂಗಡಿಯಲಿ ಬಂಗಾರಬಣ್ಣದ ಗೆಜ್ಜೆ ಕೊಂಡೆ. ಬೆಳ್ಳಿ ಪಾದತುಳಿದು ಬಂದ ಹಾದಿ ನೆನಪುರಿಂಗಣಿಸಿ ಅನಾವರಣವಾಯಿತು ಹಣೆ ಕೆನ್ನೆ ಕೈಗಳ ಮೇಲೆ ಕಾಸಗಲಕಪ್ಪನು ದೃಷ್ಟಿ ಸೋಕದಂತೆ ಹಾಕಿಮುದ್ದು ಮಾಡಿ, ಪುಟ್ಟ ಕಾಲಿಗೆ ಹಗೂರಕಾಲ್ಮುರಿ ಕಿರುಗೆಜ್ಜೆಯನು ತೊಟ್ಟಿಲಲಿಟ್ಟುತೂಗಿದ ಸಂಭ್ರಮದ ನೆನಪಾಯಿತು.. ಗೋಡೆ ಹಿಡಿದು ತಟ್ಟಾಡಿಕೊಂಡುಹೆಜ್ಜೆಗೊಮ್ಮೆ ಝಲ್ಲೆನುವ ಪುಟ್ಚಪಾದಊರಿ ಬರುವ ಸದ್ದನು ಮುಂದುಮಾಡಿದಗೆಜ್ಜೆಯ ಸಮಾಚಾರ ನಾಕಾರು ಬೀದಿತಟ್ಟಿ ಕೇಕೆ ಹಾಕಿದ ನೆನಪಾಯಿತು.. ಅದೇನು ಗಮ್ಮತ್ತು ! ಗತ್ತು!ಮತ್ತು,ಸದ್ದು ಮಾಡದ ಗೆಜ್ಜೆ ತೊಟ್ಟಿದ್ದರೆದಾರಿ […]