Category: ಕಾವ್ಯಯಾನ

ಕಾವ್ಯಯಾನ

ತಂತಿಯೊಳಗಣ  ಶಬ್ದ !

ಕಾವ್ಯ ಸಂಗಾತಿ ತಂತಿಯೊಳಗಣ  ಶಬ್ದ ! ಬಿದಲೋಟಿ ರಂಗನಾಥ್ ನಾನು ಶರಾಬಿನ ದಾಸ ಘಟಶೋಧನೆಯಲ್ಲಿನ ಬಂಧವನ್ನು ಹುಡುಕುತ್ತಲೇ ಹೋದೆ ಅವನ ನೆರಳಿತ್ತು ಅವಳ ಒಲವಿತ್ತು ನಾನೇ ಇರಲಿಲ್ಲ. ಶೋಧಿಸಿಸಲು ಎದೆಗೂಡಲ್ಲಿದ್ದ ಹಂಸದ ನಡಿಗೆಯ ಹೆಜ್ಜೆಯ ಸುತ್ತಿ ಹೊಲೆದ ಪಾಪದ ಮೂಟೆಯ. ತಿರುಗಿದೆ ಕಾಡು –ಮೇಡು ಬೆಟ್ಟ ಕಣಿವೆ ಕಂದರ ನಾ ಬಯಸಿದ್ದು ಸಿಗಲಿಲ್ಲ ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ ಸಕಲವೂ ನನ್ನೊಳಗೇ ಇತ್ತು ತಂತಿ ಮೀಟಿದ ಶಬ್ದ ನಿಜದ ನೆಲೆಯ ಬದುಕಿಗೆ ದಾರಿ ತೋರಿ ಬಯಲ ಪದಗಳು […]

ಕಾವ್ಯಯಾನ

ಹೊಸ ಹಾಡು ದೇವಯಾನಿ ನೆನಪಿಗೆಂದು ಕೊಳಲ ನಾನೆಂದೂ ಕೇಳಲೇ ಇಲ್ಲ ಚಕ್ರ ಹಿಡಿಯಲೆಂದೇ ಹೊರಟವನು ನೀನು , ಕೊಳಲು ಬೇಕಿರಲಿಲ್ಲ ಏನು ಮಾಡಲಿ ಈ ಕೊಳಲ ಗಾಳಿ ನುಸುಳಿದರೂ ರಾಧೆ ರಾಧೇ ಎಂದೇ ಉಲಿಯುತ್ತಿದ್ದ ಕೊಳಲೀಗ ಬರಿ ಬಿದಿರ ಕೊಳವೆಯಾಗಿ ಬಿದ್ದಿದೆ ನೀನು ಕೊಳಲೂದಲೆಂದೇ ಗೋಕುಲಕೆ ಈ ಜಗಕೆ ಬರಲಿಲ್ಲ ಬಿಡು ಆದರೂ ಚಕ್ರ ಹೊತ್ತ ಕೈ ಸೋತಾಗ ಕೊಳಲ ನೆನಪಾಗದ್ದೇ ನನಗೆ ವಿಸ್ಮಯ ಕೊಳಲೆಂದರೆ ರಾಧೆ ಎಂದುಕೊಂಡಿದ್ದೆ ಎಂದು ಹೆಮ್ಮೆ ಪಡುತ್ತಿದ್ದೆ ನಾನು ಕೊಳಲ ತೊರೆದಷ್ಟೇ […]

ಕಾವ್ಯಯಾನ

ಹೇಳಿ ಹೋಗು ಕಾರಣ ಸಂಗೀತ ಶ್ರೀಕಾಂತ್ ನುಡಿವೊಮ್ಮೆ ನಲ್ಲ ನಿನ್ನ ಕೊಳಲ!! ಕೊರಳ ಮಧುರ ಭಾವ ಹೊರಬರಲಿ.. ಎದೆಯೊಳಗಿರುವ ನಂಜು- ನೋವುಗಳೆಲ್ಲಾ ಹಾಡಾಗಿ ಹೊರ ಬಂದು ಕೇಳುವಂತಾಗಲಿ…. ಭಾವಧ್ಯುಯ್ಯಲೆಯಲಿ ಬದುಕಾ ದುಡುತ್ತಿರುವಾಗ ಅದನ್ನು ಧಿಕ್ಕರಿಸುತ್ತೆನೆಂಬುದು ಎಂಥ ಮೂರ್ಖತನವಾದಿತು? ನಿರ್ಭಾವದಲಿ ನಿಜವ ಕೊಲ್ಲ ಹೊರಟಿರುವುದೇಕೆ? ಬೆರಗಾಗಿದ್ದೆ ಹಿಂದೊಮ್ಮೆ ಬಂಡೆಗಳ ಮೇಲೂ ಚಿಗುರೊಡೆಯಬಲ್ಲೆ ಎಂಬ ಅದಮ್ಯ ಉತ್ಸಾಹಕ್ಕೆ ಜಗತ್ತನ್ನೆದುರಿಸಿ ನೆಡೆಯುತ್ತಿದ್ದ ನಿರ್ಭಿತ ನೆಡೆಗೆ.. ವಿರಹದ ದಳ್ಳುರಿಯ ದಾವನಲದಲ್ಲಿ ನಾ ಬೆಂದು ಬಸವಳಿಯುತ್ತಿರುವಾಗ ಬಂಧನ- ಬಿಡುಗಡೆ, ವಿರಹ- ವಿದಾಯ ಎಂಬೆಲ್ಲ ಅರ್ಥವಿರದ […]

ಮುಖವಾಡ

ದಾಕ್ಷಾಯಣಿ ನಾಗರಾಜ್ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, ದಾಕ್ಷಾಯಣಿ ನಾಗರಾಜ್ ಕವಿ […]

ಮಕ್ಕಳ ವಿಭಾಗ

ಕೆಂಚಬೆಕ್ಕಿಗೆ ಏನಾಯ್ತು? ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರು ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು […]

ಕಾವ್ಯಯಾನ

ಹೂ ಕವಿತೆಗಳು. ರಂಗಮ್ಮ ಹೊದೇಕಲ್ ಗಂಧವಾಗಲು ಬೇರು ಎಷ್ಟು ನೋಯಬೇಕೋ.. ಘಮ ವಾಗಲು ದಾರಿ ಎಷ್ಟು ಸವೆಯಬೇಕೋ.. ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಸೋತ ಮಾತು ಹುಗಿದು ಗಿಡ ನೆಡಬೇಕು ಅರಳಿದ ಹೂವಾದರೂ ಮಾತ ಕಲಿಸಿಯಾತು!! ಒಲವೂ ವಿಷವಾಗುವ ಕಾಲದಲ್ಲಿ ಹೂವೂ ಕೆರಳುವುದು ಅಚ್ಚರಿಯೇನಲ್ಲ!! ಬೇರಿನ ನೋವು..ಹೂವಿನ ನಗೆಯು! ನೊಂದೆನೆಂದು ಡಂಗೂರ ಸಾರದ ಬೇರು ಹೂ ನಗೆಯಲ್ಲಿ  ಲೋಕ ಸೆಳೆಯುತ್ತದೆ! ಬೇರಿನ ಕಣ್ಣೀರು ಗುರುತಾದವರು […]

ಕಾವ್ಯಯಾನ

ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ ಚಂದ್ರಪ್ರಭ.ಬಿ ಅದೊಂದು ದಿನ ಅಪ್ಪ ನನ್ನ ಅವಸರಿಸಿ ಬರ ಹೇಳಿದ ಶಾಲೆಯಿಂದ ಓಡೋಡಿ ಬಂದ ನನ್ನ ತೆಕ್ಕೆಯಲ್ಲಿ ಬಿಗಿದು ಒಂದೇ ಸಮ ರೋಧಿಸಿದ ಅವನೂ ಅನಾಥನಾಗಿದ್ದ ನನ್ನಂತೆ ತನ್ನವ್ವನ ಕಳಕೊಂಡು ಆಡು ಕುರಿ ದನ ಮೇಯಿಸುತ್ತ ಅಪ್ಪನ ಕೂಗಿಗೆ ಓಗೊಡುತ್ತ ಆಗಾಗ ಶಾಲೆಗೂ ಮುಖ ತೋರಿಸುತಿದ್ದೆ ವರ್ಷದ ಕೊನೆಗೆ ಗೆಳೆಯರೆಲ್ಲ ಮುಂದಿನ ತರಗತಿಗೆ ನಾನು ಮಾತ್ರ ಹಿಂದೆ ಮೇಷ್ಟ್ರು ಹೇಳಿದರು – ‘ಗಣಿತದಲ್ಲಿ ನೀ ಎಲ್ಲ ಕಳಕೊಂಡೆ’ ವಸಂತ ಲಗ್ಗೆಯಿಟ್ಟುದು ಅರಿವಾದುದೇ ಅವಳ […]

Back To Top