ಹೇಳಿ ಹೋಗು ಕಾರಣ
ಸಂಗೀತ ಶ್ರೀಕಾಂತ್
ನುಡಿವೊಮ್ಮೆ ನಲ್ಲ ನಿನ್ನ ಕೊಳಲ!!
ಕೊರಳ ಮಧುರ ಭಾವ ಹೊರಬರಲಿ..
ಎದೆಯೊಳಗಿರುವ ನಂಜು- ನೋವುಗಳೆಲ್ಲಾ
ಹಾಡಾಗಿ ಹೊರ ಬಂದು ಕೇಳುವಂತಾಗಲಿ….
ಭಾವಧ್ಯುಯ್ಯಲೆಯಲಿ ಬದುಕಾ ದುಡುತ್ತಿರುವಾಗ
ಅದನ್ನು ಧಿಕ್ಕರಿಸುತ್ತೆನೆಂಬುದು ಎಂಥ
ಮೂರ್ಖತನವಾದಿತು? ನಿರ್ಭಾವದಲಿ
ನಿಜವ ಕೊಲ್ಲ ಹೊರಟಿರುವುದೇಕೆ?
ಬೆರಗಾಗಿದ್ದೆ ಹಿಂದೊಮ್ಮೆ ಬಂಡೆಗಳ
ಮೇಲೂ ಚಿಗುರೊಡೆಯಬಲ್ಲೆ ಎಂಬ
ಅದಮ್ಯ ಉತ್ಸಾಹಕ್ಕೆ ಜಗತ್ತನ್ನೆದುರಿಸಿ
ನೆಡೆಯುತ್ತಿದ್ದ ನಿರ್ಭಿತ ನೆಡೆಗೆ..
ವಿರಹದ ದಳ್ಳುರಿಯ ದಾವನಲದಲ್ಲಿ
ನಾ ಬೆಂದು ಬಸವಳಿಯುತ್ತಿರುವಾಗ
ಬಂಧನ- ಬಿಡುಗಡೆ, ವಿರಹ- ವಿದಾಯ
ಎಂಬೆಲ್ಲ ಅರ್ಥವಿರದ ಆಲಾಪ ಬೇಕೆ?
ನಿನ್ನೆಲ್ಲಾ ನೆನಪುಗಳ ವಿಲೇವಾರಿ ಮಾಡಿ
ಜಾರಿ ಬಿಡೋಣವೆಂದರೆ ನನ್ನ ಪ್ರೀತಿಯೇನು
ಪದ್ಮಪತ್ರದ ಮೇಲಿನ ಜಲಬಿಂದುವಲ್ಲಾ,
ಹೇಳುವಷ್ಟು ಸಲೀಸೆ ಕಾಡುವ ನೆನಪುಗಳ ತಾಳುವುದು/ ದೂಡುವುದು…??
ಸುಖದ ಸ್ವಪ್ನಗಳನ್ನೆಲ್ಲ ಬಚ್ಚಿಟ್ಟು
ನನ್ನೆದೆಯ ಬಾಗಿಲಿನ ರಂಗೋಲಿ ಒದ್ದು
ತುಟಿ ಬಿಚ್ಚದೆ, ನೂರು ಮಾತಿನ ಭಾವಗಳ
ಕವಿತೆಯಾಗಿಸದೆ ಹೋಗಿದ್ದು ಏಕೆಂದು
ಹೇಳಿಬಿಡು ನೀನು ಅಷ್ಟೇ ಸಾಕೆನಗೆ…..
=====================
ಪರಿಚಯ:
ಬಾಲ್ಯ/ ಓದು ಎಲ್ಲಾ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ. ಸದ್ಯ ಹಾಸನದಲ್ಲಿ ವಾಸ. ಓದು/ ಬರಹ ಹವ್ಯಾಸ.
ಚಂದದ ಕವಿರೆ