Category: ಕಾವ್ಯಯಾನ

ಕಾವ್ಯಯಾನ

ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ನಿನ್ನ ಪ್ರೀತಿ ನಿನ್ನ ಪ್ರೀತಿ ಮಳೆ ಬಂದು ಇಳೆತೊಯ್ದುಮೋಡದಲಿ ಮಳೆಬಿಲ್ಲುಬಣ್ಣ ಬಣ್ಣದಎರಕ ನಿನ್ನ ಪ್ರೀತಿ ಮಳೆ ಹೋಯ್ದ ರಭಸಕ್ಕೆತೊಯ್ದು ತಪ್ಪಡಿಯಾಗಿನಾಚಿನಿಂತ ಗಿಡ ಮರ ಬಳ್ಳಿನಿನ್ನ ಪ್ರೀತಿ ಮಳೆ ನೀರು ಹರಿದಾಡಿಹೊಳೆ ಹಳ್ಳ ಸಂಭ್ರಮಿಮೈದುಂಬಿ ಹರಿದಂತೆನಿನ್ನ ಪ್ರೀತಿ ಮಳೆಯ ಪ್ರೀತಿಯನುಂಡುಇಳೆಯು ಬಸಿರನು ಹೊತ್ತುಹಸಿರುಟ್ಟು ನಗುವಂತೆನಿನ್ನ ಪ್ರೀತಿ

ತೀನ್ ಕಾಫಿಯಾ ಗಜಲ್

ಕಾವ್ಯ ಸಂಗಾತಿ ತೀನ್ ಕಾಫಿಯಾ ಗಜಲ್ ನಯನ. ಜಿ. ಎಸ್ ಟಿಸಿಲೊಡೆಯುತಿಹ ಸಂಚಿನೊಳು ಭಾವಗಳ ಹರಣಕಂದಳಿಸುತಿಹ ಸ್ವಾರ್ಥತೆಯೊಳು ಜೀವಗಳ ಹರಣ ಮಬ್ಬಿನ ಸೋಗಿನಲಿ ಅಖಾಡಕ್ಕಿಳಿದಿವೆ ಚೋದ್ಯಗಳುಸವೆಸುತಿಹ ಹೆಜ್ಜೆಗೆಜ್ಜೆಗಳೊಳು ಭವ್ಯಅಸುಗಳ ಹರಣ ಪಾಪ ಭೀತಿಯನು ಮೀರಿತಲಿ ವಿಜೃಂಭಿಸುತಿದೆ ಕೃತ್ಯಎಣಿಕೆಯಾಗುತಿಹ ಸಾಲಂಕಿಗಳೊಳು ಸ್ವಪ್ನಗಳ ಹರಣ ಬಾಷ್ಪಗರೆಯುವ ಮುಗ್ಧತೆಗೆ ಜೀವಂತಿಕೆಯಲಿ ಸಮರಮೆರೆದಾಡುತಿಹ ಹೃದಯದೊಳು ಹಾರೈಕೆಗಳ ಹರಣ ‘ನಯನ’ಗಳಿಗೆ ಪಾಶವಿಕ್ಕುತ್ತಲಿವೆ ಲೋಭಿಗಳ ಹೀನತ್ವಅಬ್ಬರಿಸುತಿಹ ಅಸ್ಮಿತೆಯೊಳು ಚಿಗುರಾಸೆಗಳ ಹರಣ ನಯನ. ಜಿ. ಎಸ್

ಮಾಜಾನ್ ಮಸ್ಕಿಯವರ ಗಜಲ್ ಗಳು

ಕಾವ್ಯ ಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಗಳು ಗಜಲ್-ಒಂದು ಅಂತರಂಗ ಸ್ತಬ್ದವಾಯಿತು ಲೇಖನಿ ಮೌನವಾದ ಹೊತ್ತುಭಾವನೆ ಶೂನ್ಯವಾಯಿತು ಲೇಖನಿ ಮೌನವಾದ ಹೊತ್ತು ಉಸಿರು ಉಸಿರಾಡುವುದನ್ನು ಮರೆತು ಜಡವಾಯಿತು ದೇಹಕಣ್ಣ ಹನಿ ಹೆಪ್ಪಾಯಿತು ಲೇಖನಿ ಮೌನವಾದ ಹೊತ್ತು ಸಂಬಂಧಗಳಿಗೆ ಜೋತು ಬಿದ್ದ ಮನ ಸೋಲುವುದು ಏಕೆಮಂಡಿಯೂರಿ ಶರಣಾಯಿತು ಲೇಖನಿ ಮೌನವಾದ ಹೊತ್ತು ಸೋತ ಕನಸುಗಳು ಮಲಗಿ ಗೋರಿ ಶೃಂಗಾರಗೊಂಡಿತುಪೈಶಾಚಿಕ ಕುಣಿತ ಜೋರಾಯಿತು ಲೇಖನಿ ಮೌನವಾದ ಹೊತ್ತು “ಮಾಜಾ” ಬೆಳೆಯುವ ಮೊಳಕೆಯನ್ನು ಚಿವುಟಿ ನಂಜೇರಿಸುವರುಆರೈಕೆಯ ಕೊರತೆಯಾಯಿತು ಲೇಖನಿ ಮೌನವಾದ ಹೊತ್ತು […]

ಗಜಲ್

ಕಾವ್ಯ ಸಂಗಾತಿ ಗಜಲ್ ಆಸೀಫಾ ಮದಿರೆ ಬಟ್ಟಲು ತುಂಬಾ ಸುರಿದುಬಿಡು ಸಾಕಿ ಕುಡಿದುಬಿಡುವೆ ಎಲ್ಲಾನಶೆಯೇರುತಿರಲಿ ತಲೆಗೆ ನೋವುಗಳು ಮರೆತುಬಿಡುವೆ ಎಲ್ಲಾ ಘಾಸಿಯಾದ ಹೃದಯಕೆ ಯಾವ ಮುಲಾಮೂ ಮದ್ದಾಗಲಿಲ್ಲತುಸು ಹೊತ್ತಾದರೂ ಅಮಲಿನಲ್ಲಿದ್ದು ನೆನಪುಗಳು ನೂಕಿಬಿಡುವೆ ಎಲ್ಲಾ ಯಾವ ಚೌಕಟ್ಟಿನಲ್ಲಿ ನೆಲೆಸಲಿ ಹೇಳು ಭಾವ ಬರಿದು ಮಾಡಿಮೋಹವೇ ಮೋಸವಾದಾಗ ಒಲವೇಕೆ ಸುಟ್ಟುಬಿಡುವೆ ಎಲ್ಲಾ ಅಂತ್ಯವೋ ಆದಿಯೋ ಇನ್ನೇಕೆ ಅರಿಯಬೇಕು ಅದರ ಮರ್ಮಲೋಕವೇ ಲೆಕ್ಕವಿಲ್ಲದ ಮೇಲೆ ಬಡಿತಗಳು ಬಿಟ್ಟುಬಿಡುವೆ ಎಲ್ಲಾ ಮಧುಶಾಲೆಯ ಮೆಟ್ಟಿಲೇರಲು ಸ್ವರ್ಗವೇ ಸಮೀಪಿಸಿದಂತೆ ನನಗೆಹನಿಹನಿಗಳು ಹೊಕ್ಕುತಿರಲು ಹೃದಯ ಕನಸುಗಳು […]

Back To Top