ಕಾವ್ಯ ಸಂಗಾತಿ
ತುಸು ಅತ್ತು ನಸು ನಕ್ಕು.
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಮರೆಯಲಾರದ ದುಃಖ ಮರೆಯಾಗಿಸಿ ನಗೆಯಲ್ಲಿ,
ಬಂದು ನಿಂತೆ ನೀ ನನ್ನೆದುರಿಗೆ…
ಯಾವ ಊರ ಜಾಣನು ನೀನು,
ನಾನೇನು
ತಿಳಿಯದ ದಡ್ಡಿ ಏನು,
ನಿನ್ನ ದುಃಖವನಲ್ಲ ನಗೆಯು ಮರೆಮಾಚಿಸುತ್ತಿದೆ, ನನಗದು ಕನ್ನಡಿಯಂತೆ ತೋರ್ಪಡಿಸುತ್ತಿದೆ…
ಪ್ರೀತಿ ಮಾತುಗಳಿಂದ ಕಾಳಜಿ ಕಳಕಳಿಯಿಂದ ನನ್ನ ಮನವ ಸಂತೈಸ ಬಯಸುವವನು ನೀನು,
ನಾನದನೆ ಬಯಸುತಿಹ
ಬಗೆ ಬಗೆಯಲು ನೆನೆಸುತಿಹ, ನಿನ್ನ ಪ್ರೀತಿ ಹಂಬಲಿಪ ರಾಣಿ ಜೇನು..
ಮುಗುಳುನಗೆ
ಅರಳಿಸುತ,
ಹೊಳಪು ಕಣ್ಣು ಪಿಳುಕಿಸುತ,
ಕಣ್ಣಾಲಿ ಒರೆಸುತಲಿ ದುಃಖ ಮರೆಸಬಹುದೇ
ತಾಜ್ಮಹಲನು ಕಟ್ಟಿ ನಿಜ ಪ್ರೀತಿ ಎಂದಿಗಾದರೂ ಮೆರೆಸಬಹುದೆ? …
ನನ್ನ ಜೀವದ ಗೆಳೆಯ
ಎನ್ನೆದೆಯ ಗುಡಿಯಲ್ಲಿ
ಸುಖದ ಹೂವಾಗಿ ನಗುತಿರು
ನೂರು ದೇವರ ತೇರು ಎಳೆಯುತಲಿ ನಿನಗಾಗಿ ಸುಖವನ್ನೇ ಬಯಸುವೆ ನಿನಗಿಂದೆಂದೂ..
———————————–
ಪ್ರೊವಿಜಯಲಕ್ಷ್ಮಿ ಪುಟ್ಟಿ