ಕಾವ್ಯ ಸಂಗಾತಿ

ತೀರವಿರದ ಕಡಲು

ಅರುಣಾ ನರೇಂದ್ರ

ನಿನ್ನ ಪ್ರೀತಿ

ನಿನ್ನ ಪ್ರೀತಿ

ಮಳೆ ಬಂದು ಇಳೆತೊಯ್ದು
ಮೋಡದಲಿ ಮಳೆಬಿಲ್ಲು
ಬಣ್ಣ ಬಣ್ಣದ
ಎರಕ ನಿನ್ನ ಪ್ರೀತಿ

ಮಳೆ ಹೋಯ್ದ ರಭಸಕ್ಕೆ
ತೊಯ್ದು ತಪ್ಪಡಿಯಾಗಿ
ನಾಚಿನಿಂತ ಗಿಡ ಮರ ಬಳ್ಳಿ
ನಿನ್ನ ಪ್ರೀತಿ

ಮಳೆ ನೀರು ಹರಿದಾಡಿ
ಹೊಳೆ ಹಳ್ಳ ಸಂಭ್ರಮಿ
ಮೈದುಂಬಿ ಹರಿದಂತೆ
ನಿನ್ನ ಪ್ರೀತಿ

ಮಳೆಯ ಪ್ರೀತಿಯನುಂಡು
ಇಳೆಯು ಬಸಿರನು ಹೊತ್ತು
ಹಸಿರುಟ್ಟು ನಗುವಂತೆ
ನಿನ್ನ ಪ್ರೀತಿ

Rain falling background water splash

Leave a Reply

Back To Top