ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಹಲವುಬಾರಿ ಹೇಳಿದೊಡೆ ಸತ್ಯ ಸುಳ್ಳು ಆದೀತೆ
ಕೊಚ್ಚಿ ಕೊಯ್ದು ತೇಯ್ದರೆ ಗಂಧ ದುರ್ಗಂಧ ಬೀರೀತೆ
ಪ್ರಕೃತಿ ಸಹಜ ನಿಯಮಗಳು ಬದಲಾಗದು ತಿಳಿ ಮಿತ್ರ
ಹಣ್ಣಂತೆ ತಿನ್ನರು ಎಂದು ಟಮೇಟೋ ತರಕಾರಿ ಆಗೀತೆ
ವ್ಯಪಾರಕಾಗಿ ‘ಪೆರಗಾನ್’ ಎಂದು ಹೆಸರಿಸಿದೆ ಚಪ್ಪಲಿಗೆ
ಪಾಪೋಸುಗಳನು ನಾವು ತಲೆಗೆ ಧರಿಸಲು ಬಂದೀತೆ.
ಪ್ರಿಯತಮೆಗೆ ಮುಳ್ಳು ಚುಚ್ಚಿ ನೋವಾದೀತು ನಿಜ
ಗುಲಾಬಿ ಬದಲು ಪಾರಿಜಾತ ನೀಡೆ ಅವಳಲಿ ನಗೆ ತಂದೀತೆ
ಮುಖದಿ ಕಣ್ಣು ಕಿವಿಯ ಅಂತರ ನಾಲ್ಕೇ ಇಂಚು ತಿಳಿ
‘ಕೃಷ್ಣಾ’ ದಿಟದಲಿ ಅಷ್ಟೇ ದೂರವದು ಎಂದು ಅನಿಸೀತೆ
ಬಾಗೇಪಲ್ಲಿ