ತೀನ್ ಕಾಫಿಯಾ ಗಜಲ್

ಕಾವ್ಯ ಸಂಗಾತಿ

ತೀನ್ ಕಾಫಿಯಾ ಗಜಲ್

ನಯನ. ಜಿ. ಎಸ್

ಟಿಸಿಲೊಡೆಯುತಿಹ ಸಂಚಿನೊಳು ಭಾವಗಳ ಹರಣ
ಕಂದಳಿಸುತಿಹ ಸ್ವಾರ್ಥತೆಯೊಳು ಜೀವಗಳ ಹರಣ

ಮಬ್ಬಿನ ಸೋಗಿನಲಿ ಅಖಾಡಕ್ಕಿಳಿದಿವೆ ಚೋದ್ಯಗಳು
ಸವೆಸುತಿಹ ಹೆಜ್ಜೆಗೆಜ್ಜೆಗಳೊಳು ಭವ್ಯಅಸುಗಳ ಹರಣ

ಪಾಪ ಭೀತಿಯನು ಮೀರಿತಲಿ ವಿಜೃಂಭಿಸುತಿದೆ ಕೃತ್ಯ
ಎಣಿಕೆಯಾಗುತಿಹ ಸಾಲಂಕಿಗಳೊಳು ಸ್ವಪ್ನಗಳ ಹರಣ

ಬಾಷ್ಪಗರೆಯುವ ಮುಗ್ಧತೆಗೆ ಜೀವಂತಿಕೆಯಲಿ ಸಮರ
ಮೆರೆದಾಡುತಿಹ ಹೃದಯದೊಳು ಹಾರೈಕೆಗಳ ಹರಣ

‘ನಯನ’ಗಳಿಗೆ ಪಾಶವಿಕ್ಕುತ್ತಲಿವೆ ಲೋಭಿಗಳ ಹೀನತ್ವ
ಅಬ್ಬರಿಸುತಿಹ ಅಸ್ಮಿತೆಯೊಳು ಚಿಗುರಾಸೆಗಳ ಹರಣ


ನಯನ. ಜಿ. ಎಸ್

Leave a Reply

Back To Top