ಕಾವ್ಯ ಸಂಗಾತಿ
ಗಜಲ್
ಶಶಿಕಾಂತೆ
ಮಬ್ಬಾಗುವುದಿಲ್ಲ ನಾವು ಹಚ್ಚಿದ ಒಲವಿನ ಹಣತೆಗಳು ದೊರೆ
ಮಸುಕಾಗುವುದಿಲ್ಲ ಜೊತೆಗಿದ್ದ ಆ ಸವಿಸವಿ ನೆನಪುಗಳು ದೊರೆ
ದಿನಕ್ಕೊಂದು ಪ್ರೇಮದ ರಂಗೋಲಿ ಹೃದಯದಲಿ ಬರೆದೆ
ಎಂದೂ ಅಳಿಸಿ ಹೋಗುವುದಿಲ್ಲ ರಂಗವಲ್ಲಿಯ ಬಣ್ಣಗಳು ದೊರೆ
ಪ್ರೀತಿಮಳೆ ಸುರಿಸಿದಾಗ ಸುಂದರ ಕಾಮನಬಿಲ್ಲು ಮೂಡಿತ್ತು
ಮನಸಿಂದ ಹೋಗೊದಿಲ್ಲ ಸೊಬಗಿನ ಮಳೆಬಿಲ್ಲಿನ ರಂಗುಗಳು ದೊರೆ
ಆರಂಭ ಶೂರತ್ವ ಮೆಚ್ಚುವಂತದ್ದೇ ಸದಾ ಹೀಗೇ ಇರಲಿ
ನೋಡು ಗರಿ ಬಿಚ್ಚಿ ಹಾರಿದೆಯಲ್ಲ ನಮ್ಮ ಪ್ರೀತಿ ನವಿಲುಗಳು ದೊರೆ
ನಮ್ಮ ಪ್ರೀತಿಗೆ ಮನಸಾಕ್ಷಿಗಿಂತ ದೊಡ್ಡದಲ್ಲ ಆ ಶಶಿಯ ಸಾಕ್ಷಿ
ಮನಸಿಗೆ ಸುಖ ತಂದಿದೆಯಲ್ಲ ನಿನ್ನ ಪ್ರೇಮದ ಕಾಣಿಕೆಗಳು ದೊರೆ