ಕಾವ್ಯ ಸಂಗಾತಿ
ಭಾವದೊಲುಮೆ
ರೋಹಿಣಿ ಯಾದವಾಡ
ಪ್ರಕೃತಿ ಮಾತೆಯ ಮಡಿಲ
ಮಗುವಾಗಿ ಬೆಳೆವ ಆಸೆ
ಜೊತೆಗೂಡು ಬಾ ನನ್ನಲಿ..
ನಿಸರ್ಗ ತಾಣ ಸೊಬಗಲಿ
ಮಿಂದು ಸಂಚರಿಸುವಾ ಬಾ
ಹಸಿರ ಬಸುರಿನ ವನದಲಿ…
ಹಕ್ಕಿಗಳ ಕಲರವ ಇಂಚರ
ವಸಸುಮಗಳ ಪರಿಮಳ
ಚಿಟ್ಟೆಗಳ ಚೆಲ್ಲಾಟ ನೋಡ..
ಹರಿವ ನೀರಿನ ಜುಳಜುಳ
ನೀನಾದಕೆ ಜೊತೆಯಾಗಿ
ಮನ ತಣಿಸಿ ಆನಂದಿಸುವಾ.
ಬಿಚ್ಚಿ ಹರಿವ ಭಾವಗಳಿಗೆ
ರೆಕ್ಕೆಯಾಗಿ ಜೊತೆಗೂಡು
ಭಾವದೊಲುಮೆ ಮನ್ನಿಸಿ.