ಗಜಲ್

ಕಾವ್ಯ ಸಂಗಾತಿ

ಗಜಲ್

ಆಸೀಫಾ

ಮದಿರೆ ಬಟ್ಟಲು ತುಂಬಾ ಸುರಿದುಬಿಡು ಸಾಕಿ ಕುಡಿದುಬಿಡುವೆ ಎಲ್ಲಾ
ನಶೆಯೇರುತಿರಲಿ ತಲೆಗೆ ನೋವುಗಳು ಮರೆತುಬಿಡುವೆ ಎಲ್ಲಾ

ಘಾಸಿಯಾದ ಹೃದಯಕೆ ಯಾವ ಮುಲಾಮೂ ಮದ್ದಾಗಲಿಲ್ಲ
ತುಸು ಹೊತ್ತಾದರೂ ಅಮಲಿನಲ್ಲಿದ್ದು ನೆನಪುಗಳು ನೂಕಿಬಿಡುವೆ ಎಲ್ಲಾ

ಯಾವ ಚೌಕಟ್ಟಿನಲ್ಲಿ ನೆಲೆಸಲಿ ಹೇಳು ಭಾವ ಬರಿದು ಮಾಡಿ
ಮೋಹವೇ ಮೋಸವಾದಾಗ ಒಲವೇಕೆ ಸುಟ್ಟುಬಿಡುವೆ ಎಲ್ಲಾ

ಅಂತ್ಯವೋ ಆದಿಯೋ ಇನ್ನೇಕೆ ಅರಿಯಬೇಕು ಅದರ ಮರ್ಮ
ಲೋಕವೇ ಲೆಕ್ಕವಿಲ್ಲದ ಮೇಲೆ ಬಡಿತಗಳು ಬಿಟ್ಟುಬಿಡುವೆ ಎಲ್ಲಾ

ಮಧುಶಾಲೆಯ ಮೆಟ್ಟಿಲೇರಲು ಸ್ವರ್ಗವೇ ಸಮೀಪಿಸಿದಂತೆ ನನಗೆ
ಹನಿಹನಿಗಳು ಹೊಕ್ಕುತಿರಲು ಹೃದಯ ಕನಸುಗಳು ಚೆಲ್ಲಿಬಿಡುವೆ ಎಲ್ಲಾ

ಯಾವ ಆಕ್ರೋಶ ಆತಂಕವೂ ಆವರಿಸಲಾರದು ನಿನ್ನ ಮುಂದೆ
ರೆಪ್ಪೆ ಮುಚ್ಚಿ ನಿರಾಳವಾಗಿ , ದಿಗಂತಕೆ ಆಸೆಗಳು ಎಸೆದುಬಿಡುವೆ ಎಲ್ಲಾ

ಬಂಡಾಯವೆದ್ದ ಬರುಡು ಜೀವನ ಹೊರೆಯಲಾರೆ ಎದೆಯ ಮೇಲೆ ಆಸೀ
ಆತ್ಮದ ಮೇಲೆಳೆದ ಬರೆಗಳು ಗುರುತಿಲ್ಲದೆ ಅಳಿಸಿಬಿಡುವೆ ಎಲ್ಲಾ


3 thoughts on “ಗಜಲ್

Leave a Reply

Back To Top