ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಾಗೇ ವರ್ಷಗಳನು ಎಣಿಸುವಾಗ ಅನಿಸಿತ್ತು
ಕಳೆದ ವರ್ಷಗಳಿಗಿಂತ ಉಳಿದ ವರ್ಷಗಳು ಬಹು ಕಡಿಮೆಯೆಂದು!
ಕಲ್ಲು ಸಕ್ಕರೆ ಸಿಕ್ಕ ಮಗುವಿನಂತಾಗಿತ್ತು ಮನಸು
ಮೊದಮೊದಲು ಚೀಪಿ ಚೀಪಿ ನೆಕ್ಕಿ ನೆಕ್ಕಿ ತಿಂದಿದ್ದೇ ತಿಂದಿದ್ದು
ನಿಜವಾದ ರುಚಿ ತಿಳಿಯುವ ವೇಳೆಗೆ ಉಳಿದದ್ದೇ ಕೆಲವೆರಡು
ರುಚಿಯ ತೀವ್ರತೆ ಹೆಚ್ಚಿತ್ತು,
ಆದರೆ ಬದುಕು ಬರಡು ಬರಡು ಎನಿಸಿತ್ತು.

ಎಂದೂ ಮುಗಿಯದ ಸಭೆಗಳಿಗೆ ನನ್ನಲ್ಲಿ ಸಮಯವೇ ಇಲ್ಲಾ!
ಸಾಂವಿಧಾನಿಕ ಸಮಸ್ಯೆಗಳು
ಕಾನೂನು ಕಟ್ಟಳೆಗಳು
ನಿಯಮ ನಿರ್ಭಂದಗಳು
ಚರ್ಚೆಯೆಲ್ಲಾ ಬರೀ ಗೋಳು ಬೋಳು
ಅಲ್ಲಿ ಏನೂ ಸಾಧನೆಯಾಗುವುದಿಲ್ಲವೆಂದೂ
ಎಂದೂ ಬಗೆಯರೆಯದ ಕಗ್ಗಂಟೆಂದೂ ಅರಿವಾಗಿದೆ.

ಅಸಂಗತ ವ್ಯಕ್ತಿಗಳ ಬಗ್ಗೆ ಚಿಂತಿಸಲು
ವಯಸ್ಸಿನ ಬದಲಾವಣೆ ಹೊರತು ಮತ್ತಾವ ಬೆಳವಣಿಗೆಯೂ ಇಲ್ಲದ ಜನರ ಬಗ್ಗೆ ಯೋಚಿಸಲು
ತಾಳ್ಮೆಯೇ ಉಳಿದಿಲ್ಲಾ!
ನನಗಿರುವ ಸಮಯ ಅತ್ಯಲ್ಪ, ಬೇಕಾಗಿರುವುದು ಜೀವನ ಸಾರ
ನನ್ನ ಚೇತನವು ಹರಿಹಾಯುತಿದೆ
ನನ್ನ ಬಳಿ ಉಳಿದಿರುವುದು ಕೆಲವಷ್ಟೇ ಕಲ್ಲು ಸಕ್ಕರೆ ಚೂರುಗಳು ಮಾತ್ರ!

ಯಾರು ತಮ್ಮ ತಪ್ಪುಗಳ ನೋಡಿ ಹುಸಿನಗೆ ಬೀರಬಲ್ಲರು
ಯಾರು ತಮ್ಮ ಜಯದ ಬಗ್ಗೆ ಹಿಗ್ಗಲೊಲ್ಲರು
ಯಾರು ತಮ್ಮ ಎಲ್ಲಾ ಸಾಧಕ ಭಾದಕಗಳ ಜವಾಬ್ದಾರಿ ಹೊರಬಲ್ಲರು
ಅಂತಹ ಸಹಜ ನೈಜ ಜನರ ನಡುವೆ ಬದುಕ ಬದುಕುವಾಸೆ.
ಇದರಿಂದ ಮನುಷ್ಯನ ಘನತೆ ಕಾಪಾಡಿ
ಸತ್ಯ ಮತ್ತು ಪ್ರಾಮಾಣಿಕ ಬದುಕ ಬದುಕಬಲ್ಲೆವು
ಅವಶ್ಯಕತೆಗಳು ಬದುಕನ್ನ ಪ್ರಯೋಜನಕಾರಿಯಾಗಿಸಬಲ್ಲವು.

ಹೃದಯಗಳ ಮುಟ್ಟಬಲ್ಲ
ಕಠಿಣ ಕಷ್ಟಗಳಿಂದ ಕಲಿಯುವ ಕಲೆಯಬಲ್ಲ
ಸ್ವಾದ ನೀಡುವ ಸ್ಪರ್ಶ ಚೇತನಗಳ ನಡುವೆ ಬದುಕುವಾಸೆ.
ಹೌದು! ಪರಿಪಕ್ವತೆ ಮಾತ್ರ ನೀಡಬಲ್ಲ ಗಾಢ
ಬದುಕ ಬದುಕುವ ತುಡಿತ ನನಗೆ.

ಅಳಿದುಳಿದ ಸಿಹಿತಿನಿಸುಗಳ ವ್ಯರ್ಥ ಮಾಡುವ ಯೋಚನೆ ಯಂತೂ ಇಲ್ಲಾ
ಈ ಮುಂಚೆ ಸವಿದು ಉಳದವುಗಳಿಗಿಂತಲೂ ಸೊಗಸೆಂದು ಬಲ್ಲೆ.

ನನ್ನ ಆತ್ಮ ಸಾಕ್ಷಿ ಯಾಗಿ
ಶಾಂತ, ಸಂತೃಪ್ತ ಆತ್ಮೀಯ ಜನರ ನಡುವೆ
ತೃಪ್ತ ಜೀವನ ನಡೆಸುವುದು ನನ್ನ ಗುರಿ.

ನಮಗೆ ಎರಡು ಜೀವನಗಳಿಹವೆಂಬ ಭ್ರಮೆ
ಮೊದಲನೆಯದು ಕೊನೆಯಾಗಿ ಎರಡನೆಯದು ಶುರುವಾಗುವಾಗಲೇ ಅರಿವಿಗೆ ಬಂದಿದ್ದು
ಇರುವುದೊಂದೇ ಜೀವನ ವೆಂದು!.

About The Author

2 thoughts on “ಬ್ರೆಜಿಲ್‌ನ ಪ್ರಖ್ಯಾತ ಕವಿ ಮರಿ ಯೋ ಡೀ ಅಂಡ್ರೇಡ್ ಅವರ ಕವಿತೆ “ಆತ್ಮ ತುರಾಯಿಗೊಂದು ಗರಿ”ಯ ಕನ್ನಡಾನುವಾದಡಾ. ಎಂ ಪ್ರಹ್ಲಾದ.”

  1. ತುಂಬಾ ಚೆನ್ನಾಗಿದೆ.. ಅದ್ಬುತ ಅನುಬೂತಿ ತಂದಿಡುತ್ತದೆ..

Leave a Reply

You cannot copy content of this page

Scroll to Top