ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ಭಯ ಮುಕ್ತ ಬದುಕು, ಮಹಿಳೆಯರ ಹಕ್ಕು” ಜಯಲಕ್ಷ್ಮಿ ಕೆ ಮಡಿಕೇರಿ

ಮಹಿಳಾ ಸಂಗಾತಿ ಜಯಲಕ್ಷ್ಮಿ ಕೆ ಮಡಿಕೇರಿ “ಭಯ ಮುಕ್ತ ಬದುಕು, ಮಹಿಳೆಯರ ಹಕ್ಕು”  ಮಹಿಳೆಯರು ನಿರ್ಭೀತ ವಾತಾವರಣದಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ತೊಡಗಿ ಕೊಂಡಾಗ ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ತ್ವರಿತಗತಿಯಲ್ಲಿ ಸಾಗುತ್ತದೆ. ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರಿಗೆ ಅವರ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಕಲ್ಪಿಸಿದಾಗ ಅವರಲ್ಲಿನ ಆತ್ಮ ವಿಶ್ವಾಸ, ಸಾಮರ್ಥ್ಯ  ಮತ್ತು ನಾಯಕತ್ವ ಗುಣ ಸಂಪೂರ್ಣವಾಗಿ ಹೊರಹೊಮ್ಮಿ ಅದು ದೇಶದ ಪ್ರಗತಿಗೆ ಪೂರಕವಾಗುತ್ತದೆ. ಮಹಿಳೆಯರು ಮತ್ತು ಬಾಲಕಿಯರು ದೌರ್ಜನ್ಯ ಮುಕ್ತ ವಲಯದಲ್ಲಿ ಬದುಕುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಕರೆಯಂತೆ  ಪ್ರತಿ ವರ್ಷ ನವೆಂಬರ್ 25ರಂದು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ  ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತಿದೆ.  ಇತಿಹಾಸ  1960ರಲ್ಲಿ ಡೊಮಿನಿಕನ್ ರಿಪಬ್ಲಿಕ್ ನಲ್ಲಿ  ರಾಜಕೀಯ ಹೋರಾಟಗಾರ್ತಿಯರಾದ ಮಿರಾಬಲ್ ಸಹೋದರಿಯರ ಹತ್ಯೆಯ ಸ್ಮರಣಾರ್ಥವಾಗಿ ನವೆಂಬರ್ 25 ನ್ನು ” ಮಹಿಳಾ ದೌರ್ಜನ್ಯ ವಿರೋಧಿ ದಿನ ” ಎಂದು  ನಿಗದಿಪಡಿಸಲಾಗಿದೆ.  ನವಂಬರ್ 25 ರಿಂದ ಡಿಸೆಂಬರ್ ಹತ್ತರವರೆಗೆ ಮಾನವ ಹಕ್ಕುಗಳ ದಿನವನ್ನು ಆಚರಿಸುತ್ತಾ ” ಲಿಂಗ ಆಧಾರಿತ ದೌರ್ಜನ್ಯದ ವಿರುದ್ಧ ಹತ್ತು ದಿನಗಳ ಕ್ರಿಯಾಶೀಲ ಅಭಿಯಾನ ” ನಡೆಸಲಾಗುತ್ತದೆ. ಕಿತ್ತಳೆ ಬಣ್ಣವು ಈ ಅಭಿಯಾನದ ಸಂಕೇತ. ” ಮಹಿಳೆಯರ ಮತ್ತು ಬಾಲಕಿಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ಒಂದಾಗೋಣ: ಮಹಿಳೆಯರಿಗೆ ನ್ಯಾಯವನ್ನು ನೀಡೋಣ..” “ಸಂತ್ರಸ್ತರನ್ನು ರಕ್ಷಿಸಿ, ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದನ್ನು ಕೊನೆಗೊಳಿಸಿ ” ಎನ್ನುವುದು 2026ರ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ಅಭಿಯಾನದ ಅಧಿಕೃತ ಧ್ಯೇಯ ವಾಕ್ಯ. ” ದನಿ ಎತ್ತಿ,ಸಂತ್ರಸ್ಥರನ್ನು ನಂಬಿ,ನ್ಯಾಯಕ್ಕಾಗಿ ಒತ್ತಾಯಿಸಿ”…. ” ದೌರ್ಜನ್ಯ ಎಸಗಿದವನಿಗೆ ಯಾವುದೇ ಕ್ಷಮೆ ಇಲ್ಲ ” ಇತ್ಯಾದಿ ಘೋಷ ವಾಕ್ಯಗಳೊಂದಿಗೆ ಅಭಿಯಾನ ನಡೆಯುತ್ತಿದೆ. ಹೆಣ್ಣು ಮಕ್ಕಳನ್ನು ಗೌರವಿಸುವುದು ಅವರಿಗೆ ಸುರಕ್ಷತೆಯನ್ನು ಒದಗಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ.  ಅಭಿಯಾನದ ಮುಖ್ಯ ಉದ್ದೇಶಗಳು. 1 ಅರಿವು ಮೂಡಿಸುವುದು  ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದೈಹಿಕ, ಮಾನಸಿಕ, ಲೈಂಗಿಕ  ಹಾಗು ಡಿಜಿಟಲ್ ದೌರ್ಜನ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.  ಕಾನೂನು ರಕ್ಷಣೆ  ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವುದು ಮತ್ತು ಅವರಲ್ಲಿ ಸುರಕ್ಷಿತ ಭಾವವನ್ನು ಮೂಡಿಸುವುದು ಈ ಅಭಿಯಾನದ ಇನ್ನೊಂದು ಆಶಯ.  ಅಪರಾಧಿಗಳಿಗೆ ಶಿಕ್ಷೆ  ದೌರ್ಜನ್ಯ ಎಸಗಿದವನು ಯಾವ ಪ್ರಭಾವಶಾಲಿ ವ್ಯಕ್ತಿಯೇ ಆಗಿರಲಿ, ಅವನಿಗೆ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಈ ಅಭಿಯಾನದ ಇನ್ನೊಂದು ಗುರಿ.  ಸಂತ್ರಸ್ತರಿಗೆ ಬೆಂಬಲ  ಸಂತ್ರಸ್ತರ ನೋವಿಗೆ ದನಿಯಾಗುವುದು, ನೊಂದ ಮಹಿಳೆಯರಿಗೆ ಕಾನೂನಿನ ನೆರವು ನೀಡುವುದು, ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸುವುದು, ಸಕಾಲದಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಮತ್ತು ಸುರಕ್ಷಿತ ಆಶ್ರಯ ತಾಣವನ್ನು ನೀಡುವುದು  ಈ ಅಭಿಯಾನದ ಪ್ರಮುಖ ಹೆಜ್ಜೆಗಳು.  ಸಮಾನತೆಯ ಸಮಾಜ ನಿರ್ಮಾಣ  ಈ ಸಮಾಜದಲ್ಲಿ ಬದುಕಲು ಪುರುಷರಷ್ಟೇ ಹಕ್ಕು  ಮಹಿಳೆಗೂ ಇದೆ. ಆದಕಾರಣ ಮಹಿಳೆಯರ ಹಕ್ಕು ಬಾಧ್ಯತೆಗಳನ್ನು ರಕ್ಷಿಸಿ ಅವರ ಭಾವನೆಗಳಿಗೂ ಬೆಲೆ ಕೊಡಬೇಕು. ಆಗ ಮಾತ್ರ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎನ್ನುವುದು ಸರಕಾರದ ಇಂಗಿತ ಕೂಡ. ಈ ಜಾಗೃತಿ ಪುರುಷರಲ್ಲಿ ಮೂಡಬೇಕು ಎನ್ನುವ ಉದ್ದೇಶದಿಂದ ಸರಕಾರ ಪುರುಷರು ಮತ್ತು ಯುವಕರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಂಡು ಮಹಿಳೆಯರ ಗೌರವವನ್ನು ಕಾಪಾಡಲು ಮುಂದಾಗಿದೆ.  ಸರಕಾರದ ಯೋಜನೆಗಳು ಸಹಾಯವಾಣಿಗಳು  ಮಹಿಳೆಯರು ಮತ್ತು ಬಾಲಕಿಯರ ಮೇಲಾಗುವ ದೌರ್ಜನ್ಯವನ್ನು ತಡೆಯಲು ಮತ್ತು ಅವರಿಗೆ ಸುರಕ್ಷತೆ ಒದಗಿಸಲು ಸರಕಾರ ತುರ್ತು ಸಹಾಯವಾಣಿಗಳನ್ನು ತೆರೆದಿದೆ. 181 ಮಹಿಳಾ ಸಹಾಯವಾಣಿ, 112  ಪೊಲೀಸ್ ತುರ್ತು ಸಹಾಯವಾಣಿ, 1098 ಬಾಲಕಿಯರ ರಕ್ಷಣೆಗಾಗಿ ಸಹಾಯವಾಣಿ ಈ ಸಹಾಯವಾಣಿಗಳನ್ನು ಬಳಸಿ ದೇಶದಾದ್ಯಂತ ಅದೆಷ್ಟೋ ಬಾಲಕಿಯರು ಮತ್ತು ಮಹಿಳೆಯರು ಸಂಕಷ್ಟದಿಂದ ದೌರ್ಜನ್ಯದಿಂದ ಪಾರಾಗಿದ್ದಾರೆ. ಈ ವಿಚಾರದಲ್ಲಿ ಸಾವಿರಕ್ಕೂ ಹೆಚ್ಚು ಉದಾಹರಣೆಗಳನ್ನು ನಾವು ಮಾಧ್ಯಮಗಳಲ್ಲಿ ಗಮನಿಸಿದ್ದೇವೆ.  ಮಿಷನ್ ಶಕ್ತಿ  ಮಹಿಳಾ ಸಬಲೀಕರಣಕ್ಕಾಗಿ, ಅವರ ಸುರಕ್ಷತೆ,ಭದ್ರತೆ ಹಾಗೂ ಅವರ ಸಾಮರ್ಥ್ಯವನ್ನು( ಉದಾ ಮನೆ ಕಟ್ಟುವುದು,ಮಕ್ಕಳ ಲಾಲನೆ ಪಾಲನೆ, ಆರ್ಥಿಕತೆಗೆ ಇಡುವ ಹೆಜ್ಜೆ ) ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರವು ಮಿಷನ್ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ನೆರವು ನೀಡುತ್ತಿದೆ.  ಸಖಿ   ವನ್  ಸ್ಟಾಪ್  ಸೆಂಟರ್  ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಒಂದೇ ಸೂರಿನಡಿಯಲ್ಲಿ ಪೊಲೀಸ್, ವೈದ್ಯಕೀಯ,ಕಾನೂನು ಮತ್ತು ಆಪ್ತ ಸಮಾಲೋಚನಾ ಸೇವೆ ನೀಡುವ ಜಿಲ್ಲಾ ಕೇಂದ್ರಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.  ಸಾಂತ್ವನ ಕೇಂದ್ರಗಳು  ಸರಕಾರದ ಸಾಂತ್ವನ ಕೇಂದ್ರಗಳ ಮೂಲಕ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಾಜ್ಯ ಸರಕಾರದಿಂದ ಆರ್ಥಿಕ ಮತ್ತು ಕಾನೂನಿನ ನೆರವು ಸದಾ ಲಭ್ಯವಿದ್ದು ಈ ಬಗ್ಗೆ ಜಾಗೃತಿ ಮೂಡಬೇಕಿದೆ. ಕುಟುಂಬದಲ್ಲಿನ ಮಹಿಳೆಯರಿಗೆ ಹೊಡೆಯುವುದು ಅಥವಾ ದೈಹಿಕ ಹಿಂಸೆ  ನೀಡುವುದು, ಲೈಂಗಿಕ ಕಿರುಕುಳ ನೀಡುವುದು, ವರದಕ್ಷಿಣೆ ಸಂಬಂಧಿತ ವಿಚಾರಗಳಲ್ಲಿ ಮಾನಸಿಕ ನೋವು ಕೊಡುವುದು, ಅವರ ವೇತನಗಳನ್ನು ತಡೆಹಿಡಿಯುವುದು, ಇತ್ಯಾದಿಗಳನ್ನು ಮಾಡುವಂತಿಲ್ಲ ಎಂಬುದು ಕಾನೂನು. ಕಾನೂನಿನ  ಈ ಮಿತಿಯನ್ನು ಮೀರಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದಲ್ಲಿ ಸಂತ್ರಸ್ತೆಯ ದೂರಿನ ಅನ್ವಯ ಅಪರಾಧಿ ಒಂದು ವರ್ಷ ಜೈಲು ಅಥವಾ 20 ಸಾವಿರದ ದಂಡ ಅಥವಾ ಇವೆರಡನ್ನೂ ಅನುಭವಿಸ ಬೇಕಾಗಬಹುದು.  ಮಹಿಳಾ ದೌರ್ಜನ್ಯ ವಿರೋಧಿ ಅಭಿಯಾನದಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳು  ಪ್ರತಿಜ್ಞಾ ವಿಧಿ  ಸ್ವೀಕಾರ. ” ನಾನು ಮಹಿಳೆಯರ ಘನತೆ, ಗೌರವ ಮತ್ತು ಸಮಾನ ಹಕ್ಕುಗಳನ್ನು ಸದಾ ಎತ್ತಿ ಹಿಡಿಯುತ್ತೇನೆ. ಮನೆಯಲ್ಲಾಗಲೀ,ಕೆಲಸದ ಸ್ಥಳಗಳಲ್ಲಾಗಲೀ,ಸಾರ್ವಜನಿಕ ವಾತಾವರಣದಲ್ಲಾಗಲೀ, ಮಹಿಳೆಯರ ಮೇಲೆ ನಡೆಯುವ ಯಾವುದೇ ರೀತಿಯ ದೈಹಿಕ, ಮಾನಸಿಕ, ಲೈಂಗಿಕ ಅಥವಾ ಆರ್ಥಿಕ ದೌರ್ಜನ್ಯವನ್ನು ನಾನು ಸಹಿಸುವುದಿಲ್ಲ ಮತ್ತು ಪ್ರೋತ್ಸಾಹಿಸುವುದಿಲ್ಲ. ದೌರ್ಜನ್ಯ ಕ್ಕೊಳಗಾದ ಮಹಿಳೆಯರ ವಿರುದ್ಧ ನಾನು ಧ್ವನಿ ಎತ್ತುತ್ತೇನೆ ಮತ್ತು ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಸದಾ ಶ್ರಮಿಸುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ ” ಎನ್ನುವ ಸಾರ್ವಜನಿಕ ಪ್ರತಿಜ್ಞೆಯನ್ನು ನವಂಬರ್ 25ರಂದು ಎಲ್ಲರೂ ಸ್ವೀಕರಿಸಬೇಕು. ” ನಾನು ಎಲ್ಲಾ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಗೌರವದಿಂದ ಕಾಣುತ್ತೇನೆ. ಲಿಂಗ ತಾರತಮ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಾನು ವಿರೋಧಿಸುತ್ತೇನೆ. ನಮ್ಮ ಶಾಲೆ, ಕಾಲೇಜು ಮತ್ತು ಸಮಾಜವನ್ನು ಮಹಿಳೆಯರಿಗೆ ಸುರಕ್ಷಿತ ಮತ್ತು ಭಯಮುಕ್ತ ತಾಣವನ್ನಾಗಿ ಮಾಡಲು ಸಿದ್ಧವಾಗಿದ್ದೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ ” ಎನ್ನುವ ಪ್ರತಿಜ್ಞೆಯನ್ನು ಪ್ರತಿಯೊಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಡ ಸ್ವೀಕರಿಸುವಂತೆ ಸರಕಾರ ಆದೇಶ ಹೊರಡಿಸಿದೆ.  ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ 2005ರಲ್ಲಿಯೇ ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆ ಜಾರಿಗೊಂಡಿದೆ. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಅವರ ಮೇಲಾಗುವ ಲೈಂಗಿಕ ಕಿರುಕುಳವನ್ನು ತಡೆಯುವ ಮತ್ತು ಅವರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಸಲುವಾಗಿ 2013ರಲ್ಲಿ ಪೋಶ್ (POSH )  ಕಾಯ್ದೆ ಜಾರಿಗೆ ಬಂದಿದೆ. 1961 ರಿಂದಲೇ ವರದಕ್ಷಿಣೆ ವಿರೋಧಿ ಕಾಯ್ದೆ ಜಾರಿಯಲ್ಲಿದೆ. 2006ರಿಂದಲೇ ಬಾಲ್ಯ  ವಿವಾಹ ನಿಷೇಧ ಕಾಯ್ದೆ ಕೂಡ ಜಾರಿಯಲ್ಲಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಲೇ ಬಂದಿದೆ.  ಕಾನೂನುಗಳು ಎಷ್ಟೇ ಕಠಿಣವಾಗಿದ್ದರು ಕೂಡ ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನೂ ಮುಂದುವರಿಯುತ್ತಲೇ ಇವೆ.  “ಯತ್ರನಾರ್ಯಸ್ತು  ಪೂಜ್ಯಂತೇ ರಮಂತೇ ತತ್ರ ದೇವತಾ ” ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ ಎನ್ನುವ ತತ್ವ  ವಾಕ್ಯಗಳನ್ನು ಹೇಳು ಹೇಳುತ್ತಲೇ ಸಮಾಜದಲ್ಲಿ ನಾರಿಯರ ತೇಜೋವಧೆಯಾಗುತ್ತಿದೆ. ಮಹಿಳೆಯರು ದೌರ್ಜನ್ಯ ಮುಕ್ತರಾದಾಗ ಮಾತ್ರ ಆರೋಗ್ಯಕರ ಮತ್ತು ನ್ಯಾಯಯುತ ಸಮಾಜ- ರೂಪುಗೊಳ್ಳಲು ಸಾಧ್ಯ. ಶಿಕ್ಷಣ, ಉದ್ಯೋಗ,ನಾಯಕತ್ವ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಮಹತ್ವದ್ದಾಗಿರುವುದರಿಂದ ಅವರಿಗೆ ಬೆಳೆಯಲು ಮತ್ತು ಬದುಕಲು ಸುರಕ್ಷಿತ ನಿರ್ಭೀತ ವಾತಾವರಣವನ್ನು ಕಲ್ಪಿಸಿ ಕೊಡುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ.ಅಷ್ಟೇ ಅಲ್ಲ,ಮಹಿಳೆಯರನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸುವುದರಿಂದ ಮುಂದಿನ ಪೀಳಿಗೆಯಲ್ಲಿ ಮೌಲ್ಯಗಳು ಸಂವರ್ಧನೆ ಕೂಡಾ ಆಗುತ್ತದೆ. ಒಟ್ಟಿನಲ್ಲಿ ಮಹಿಳೆಯರು ದೌರ್ಜನ್ಯ ಮುಕ್ತರಾಗಬೇಕು  ಆಗ ಮಾತ್ರ “ಮಹಿಳೆಯರ ಮೇಲಿನ ದೌರ್ಜನ್ಯ ಎಂದು ಕೊನೆಗೊಳ್ಳುವುದೋ ಅಂದು ಸಮಾನತೆಯ ಸಮಾಜದ ಬೆಳವಣಿಗೆ ಆರಂಭವಾಗುತ್ತದೆ ” ಎನ್ನುವ ಮಾತಿಗೆ ಬೆಲೆ ಬರುತ್ತದೆ. ಜಯಲಕ್ಷ್ಮಿ ಕೆ ಮಡಿಕೇರಿ

“ಭಯ ಮುಕ್ತ ಬದುಕು, ಮಹಿಳೆಯರ ಹಕ್ಕು” ಜಯಲಕ್ಷ್ಮಿ ಕೆ ಮಡಿಕೇರಿ Read Post »

ಕಾವ್ಯಯಾನ

ಶಶಿಕಲಾ ಚಂದ್ರಶೇಖರ ಅವರ ಕವಿತೆ “ಹಿಡಿಯಷ್ಟು ಪ್ರೀತಿ”

ಕಾವ್ಯ ಸಂಗಾತಿ ಶಶಿಕಲಾ ಚಂದ್ರಶೇಖರ “ಹಿಡಿಯಷ್ಟು ಪ್ರೀತಿ” ಪ್ರೀತಿ ಅಳತೆಗೆ ಸಿಗುವುದೇಪ್ರೀತಿ ಸಾಗರದಷ್ಟುಪ್ರೀತಿ ಬೆಟ್ಟದಷ್ಟುಪ್ರೀತಿ ಮುಗಿಲೆತ್ತರಎನ್ನುವವರಿಗೆ ಹಿಡಿಪ್ರೀತಿಯ ಬೆಲೆ ಗೊತ್ತೇ. ನಿಜಪ್ರೀತಿ ಎಂದಿಗೂ ಬತ್ತದಜೀವಜಲಎಂದಿಗೂ ಒಣಗದಅಂತರ್ಜಲಕಾಸಿಲ್ಲದೆ ಗಳಿಸಬಹುದಾದನೀಡಿದಷ್ಟು ಅಕ್ಷಯವಾಗುವಸೋಜಿಗದ ಈ ಪ್ರೀತಿ.ಜಲ ಒಮ್ಮೆ ಬತ್ತಿದರೆಹನಿ ಹನಿಗೂಪರಿತಪಿಸಿಬಳಲಿ ಬಾಯಾರಿಯುದ್ಧದಲಿ ಮಡಿದವರೆಷ್ಟೋ ಜನ ಮುಚ್ಚಿದ ಕೋಟೆಗಳಬಾಗಿಲು ಒಡೆದುಬಯಲಲಿ ಒಮ್ಮೆಚಾಚಿ ನೋಡಿ ಪ್ರೀತಿ,ಸ್ನೇಹ, ಮಮತೆಯನಿರ್ಮಲ ಹಸ್ತಗಳ ಅಬಾಲವೃದ್ಧರೆಲ್ಲಅಕ್ಕ, ತಂಗಿ, ಅಣ್ಣತಮ್ಮ, ಎಲ್ಲ ಬಂಧು, ಮಿತ್ರರುಮೊಗೆಮೊಗೆದು ಕೊಟ್ಟಾರುಸಾಗರದಷ್ಟು ಪ್ರೀತಿಮಳೆ ಸುರಿಸಿ,ಹೊಳೆಯನೇ ಹರಿಸಿಯಾರು!ಆದರೆ ನೆನಪಿರಲಿಮೊದಲು ನೀವು“ಹಿಡಿ ಪ್ರೀತಿ” ತೋರಿದರೆ ಮಾತ್ರ. ಶಶಿಕಲಾ ಚಂದ್ರಶೇಖರ 

ಶಶಿಕಲಾ ಚಂದ್ರಶೇಖರ ಅವರ ಕವಿತೆ “ಹಿಡಿಯಷ್ಟು ಪ್ರೀತಿ” Read Post »

ಕಾವ್ಯಯಾನ

 ಪ್ರಶಾಂತ್ ಬೆಳತೂರು ಅವರ ಕವಿತೆ “ಬೇಟಿ”

ಕಾವ್ಯ ಸಂಗಾತಿ  ಪ್ರಶಾಂತ್ ಬೆಳತೂರು “ಬೇಟಿ” ಈ ಪ್ರೇಮದಲ್ಲಿಒಂದಲ್ಲ ಒಂದು ದಿನನಾವು ಮತ್ತೆ ಎದುರುಗೊಳ್ಳುತ್ತೇವೆಎಂಬ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ..! ಅವಳು ಮತ್ತೆ ಎದುರುಗೊಂಡಳು..!ಆಗಸದ ಕಾಮನಬಿಲ್ಲಿನ ಹಾಗೆಕಣ್ಣು ಕೋರೈಸುವಂತೆಮುಂದೆಯೇ ನಿಂತಿದ್ದಳು..! ನಮ್ಮ ನಡುವೆಈ ಹಿಂದೆ ಏನು ನಡೆದೇ ಇಲ್ಲಎನ್ನುವ ನಾಜೂಕಿನಲ್ಲಿಲವಲವಿಕೆಯ ಮಾತಿನಲ್ಲಿಕುಶಲೋಪರಿವಿಚಾರಿಸಿಕೊಂಡಳು..! ಕೊಂಚವೂ ವಿಷಾದಿಸದೆಬೇಸರಿಸದೆ ದುಃಖಿಸದೆಮೊದಲ ಭೇಟಿಯಲ್ಲಿ ಸಿಕ್ಕಂತೆಚಹಾವೋ?ಕಾಫಿಯೋ?ಹೀಗೆ ಏನಾದರೊಂದು ನೆವದಲ್ಲಿಮಾತನ್ನೇ ಮುತ್ತುಗಳಾಗಿ ಪೋಣಿಸಿಸನಿಹದಲ್ಲಿಯೇ ಕೂತು ಬಿಟ್ಟಳು..! ನಾನೋಮುಗಿಲು ಹರಿಯುವಷ್ಟು ದುಃಖಕಡಲು ಉಕ್ಕುವಷ್ಟು ಕಣ್ಣೀರುಎದೆಬಿರಿಯುವ ಕನಸುಗಳಮಹಾಭೂಕಂಪವೆಂಬಪ್ರೇಮವಿಲಾಪದಲ್ಲಿ ಒದ್ದಾಡುತ್ತಿದ್ದೆ..! ಆದರವಳುಕೊಂಚ ಕೂಡ ಕಲ್ಮಶವಿರದಹಾಲಿನಂತಹ ಹುಡುಗಿಬದುಕನ್ನುಎಷ್ಟು ಸಲೀಸಾಗಿ ಸ್ವೀಕರಿಸಿದ್ದಳೆಂದರೆಒಂದು ಕೈಯಲ್ಲಿ ಮಗುಮತ್ತವಳ ಅಸಹಾಯಕ ನಗುಮಾತ್ರವೇ ಜೀವಂತವಾಗಿಉಳಿದುಕೊಂಡಿದ್ದವು..!  ಪ್ರಶಾಂತ್ ಬೆಳತೂರು

 ಪ್ರಶಾಂತ್ ಬೆಳತೂರು ಅವರ ಕವಿತೆ “ಬೇಟಿ” Read Post »

You cannot copy content of this page

Scroll to Top