ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಚಳಿಗಾಲದ ಮುಂಜಾನೆಗೆ
ತಣ್ಣನೇಯ ಗಾಳಿಗೆ ನಂಜಾಗಿ
ತನವು ಮುದಡಿ ಮಗ್ಗಲಾಯಿತು||

ಮುತ್ತಿನಂತೆ ಬಿದ್ದ ಇಬ್ಬನಿ ಮಾಲೆ
ಗಿಡಗಂಟಿ ರಂಬೆಕೊಂಬೆಗಳಿಗೆ ಹೂಮಾಲೆ
ಹುಳುವಾಗಿ ಆಡುವಾಸೆಯಾಯಿತು||

ರಂಗೋಲಿ ಇಟ್ಟಾಯಿತು ಅಂಗಳಕೆ
ಚಿತ್ತಾರವನೇ ದಿಟ್ಟಿಸುತ ಕುಳಿತ ಅಂಗನೆಗೆ
ದೂರದಲ್ಲಿಂದ ನವಿಲ ದ್ವನಿಯೊಂದು ಕೇಳಿತು||

ಬಾನದ ಬಾಸ್ಕರ ಕಣ್ಣು ಬೆದರಿಸಿದ
ಕಾನನದ ಎಲೆಗಳ ಉದರಿಸಿದ
ಈ ಜಗದಲಿ ಸಮನಾರು ನನಗೆಂದ||

ಹಸಿರು ಹೊದ್ದು ಮಲಗಿದ ಅವನಿಗೆ
ಆಗಸದಲಿ ಬೊಗಸೆ ಪ್ರೀತಿ ತಂದ ಬಾನವನು
ಬಿಸಿ ಮುತ್ತೊಂದನಿತ್ತು ಬೆಳಗಾಯಿತೇಳೆಂದ||


About The Author

Leave a Reply

You cannot copy content of this page

Scroll to Top