ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಅವರ ಗಜಲ್ ಕಂಜಸಖನ ರಶ್ಮಿಗೆ ಅರಳುವ ಸೂರ್ಯಕಾಂತೆ ನಾನಗಲೇಬೇಕುನನ್ನಯ ಧಮನಿಧಮನಿಗಳಲ್ಲಿ ನಿನ್ನ ಚೈತನ್ಯ ತುಂಬಲೇಬೇಕು ಶಂಕೆಯ ಮಳೆ ಸುರಿಯುತ್ತಿದೆ ಆಸರೆಯ ಕೊಡೆಯಾಗಿ ರಕ್ಷಿಸುತ್ತಿರುನರಕವೇದನೆಯ ಅಣುವು ತೂರದಂತೆ ಸ್ನೇಹದಿಂದ ಬಿಗಿದಪ್ಪಿಲೇಬೇಕು ಕರುಣೆಯ ಕರಗಳಲ್ಲಿ ಕಣ್ಣೀರು ಕರಗಿವೆ ಒಲವಿನ ಗೆಲುವಿನಲ್ಲಿಕವಿದಿರುವ ಕರಿಮೋಡ ಸೀಳಿ ನನ್ನವನು ಅನವರತ ಪ್ರೀತಿ ತೋರಿಸಲೇಬೇಕು ಬಾಳಯಾನದಲ್ಲಿ ಒಲವಿನ ಗಾನ ಝೆಂಕಾರ ಸಂತಸದಲ್ಲಿ ಇರಲುನಾಕದಲ್ಲಿ ಪಯಣ ಸಾಗಲು ಹೃದಯಗಳ ಮಿಲನ ಆಗಲೇಬೇಕು ನಿನ್ನ ಕ್ಷಿತೀಜ ಪಥದ ನಗುವಿನ ಬೆಳಕಲ್ಲಿ ಚಲಿಸುತ್ತಿರುವೆಕತ್ತಲೆಗೆ ಅಂಜಿ ಹಿಂಜರಿಯದೆ ನಡೆಯುತ್ತಾ ಇರಲೇಬೇಕು ———- ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ನಿಮ್ಮೊಂದಿಗೆ

ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ದತ್ತಿನಿಧಿಯಾಗಿ ಇಟ್ಟು ಪ್ರತಿವರ್ಷ ಐದು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇನೆ-  ಸಿದ್ಧರಾಮ ಹೊನ್ಕಲ್

ಸಮ್ಮಾನ ಸಂಗಾತಿ ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ದತ್ತಿನಿಧಿಯಾಗಿ ಇಟ್ಟು ಪ್ರತಿವರ್ಷ ಐದು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇನೆ-  ಸಿದ್ಧರಾಮ ಹೊನ್ಕಲ್ *ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ದತ್ತಿನಿಧಿಯಾಗಿ ಇಟ್ಟು ಪ್ರತಿವರ್ಷ ಐದು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇನೆ-  ಸಿದ್ಧರಾಮ ಹೊನ್ಕಲ್* ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯದ ಅನುಗುಣವಾಗಿ ಯಾವುದೇ ಪ್ರಶಸ್ತಿ ನೀಡಲಾಗುತ್ತದೆ. ನಾಡಿನಲ್ಲಿ ನನಗಿಂತ ಹೆಚ್ಚು ಸಾಧನೆ ಮಾಡಿದ, ನನಗಿಂತ ವಯಸ್ಸಿನಲ್ಲಿ ಸಹ ಹಿರಿಯರಾದ ಸಾಹಿತಿಗಳು ಸಾಕಷ್ಟು ಇದ್ದಾರೆ. ನನಗೆ ಪ್ರಶಸ್ತಿ ಬಂದಿದೆ ನಾನು ಶ್ರೇಷ್ಠನೆಂಬ ಭಾವ ನನಗಿಲ್ಲ. ನಾನು ಪ್ರಶಸ್ತಿಯನ್ನು ಅತ್ಯಂತ ಸಂಕೋಚದಿಂದ ಸ್ವೀಕರಿಸಿದ್ದೇನೆ. ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ನನಗೆ ನನ್ನ ಸಾಹಿತ್ಯ ಸಾಧನೆಯ ಜೊತೆಗೆ ಪ್ರಾದೇಶಿಕ ನ್ಯಾಯದ ಅಡಿಯಲ್ಲಿ ಯಾದಗಿರಿ ಜಿಲ್ಲೆಯ ಸಾಹಿತಿಗಳಿಗೆ ಹಲವಾರು ವರ್ಷಗಳಿಂದ ಪುರಸ್ಕಾರ ನೀಡಿಲ್ಲ ಎಂಬ ಹಿನ್ನೆಲೆಯಲ್ಲಿ ಆಯ್ಕೆ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಸಂಸ್ಕೃತಿ ಸಚಿವರಿಗೆ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಕಾರ್ಯದರ್ಶಿಗಳು, ಮಾನ್ಯ ನಿರ್ದೇಶಕರು ಹಾಗೂ ಆಯ್ಕೆ ಸಮಿತಿಯ ಎಲ್ಲಾ ಸದಸ್ಯರಿಗೂ ಗೌರವದ ವಂದನೆಗಳು ಅರ್ಪಿಸುತ್ತೇನೆ. ಈ ಪ್ರಶಸ್ತಿಯ ಜೊತೆಗೆ ಸರ್ಕಾರ ನನಗೆ ನೀಡಿದ ಗೌರವಧನದ ಮೌತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಥವಾ ಸಾಹಿತ್ಯ ಅಕಾಡೆಮಿ ಅಥವಾ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ತಂದೆ ತಾಯಿಯ ಹೆಸರಿನಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ದುಡಿಯುವ ಸಂಸ್ಥೆಯಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಿ ಪ್ರತಿ ವರ್ಷ ಸಾಹಿತ್ಯ, ಪತ್ರಿಕೋದ್ಯಮ, ಜಾನಪದ, ವೈದ್ಯಕೀಯ, ಧಾರ್ಮಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ನಾಡಿನ ಐದು ಸಾಧಕರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುವ ವಿಚಾರ ಇದೆ. ಈಗಾಗಲೇ ಹಿಂದೆಯೂ ಸಹ ನಮ್ಮ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಕನ್ನಡದ ಐದು ಲೇಖಕರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಾ ಬಂದಿದ್ದೇನೆ.ಎರಡು ವರ್ಷಗಳಿಂದ ನಿಲ್ಲಿಸಿದ್ದೆ. ಈಗ ಅದನ್ನೇ ಮುಂದುವರಿಸಬೇಕೋ ಅಥವಾ ಬೇರೆ ಸಂಸ್ಥೆಗಳ ಮೂಲಕ ಮುಂದುವರಿಸಿ ಒಟ್ಟಾರೆ ಈ ಸಾಹಿತ್ಯ ಕ್ಷೇತ್ರದ ಸಾಧನೆಗೆ ಸಂದ ಮೊತ್ತವನ್ನು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಉಪಯೋಗಿಸಲು ದತ್ತಿನಿಧಿ ಇಡಲಿದ್ದೇನೆ ಎಂದು ರಾಜ್ಯೋತ್ಸವ ಪುರಸ್ಕೃತ ಲೇಖಕ ಸಿದ್ಧರಾಮ ಹೊನ್ಕಲ್ ಪತ್ರಿಕಾ ಹೇಳಿಕೆ ನೀಡಿ ತಿಳಿಸಿದ್ದಾರೆ. —————- ಸಿದ್ಧರಾಮ ಹೊನ್ಕಲ್

ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ದತ್ತಿನಿಧಿಯಾಗಿ ಇಟ್ಟು ಪ್ರತಿವರ್ಷ ಐದು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇನೆ-  ಸಿದ್ಧರಾಮ ಹೊನ್ಕಲ್ Read Post »

ನಿಮ್ಮೊಂದಿಗೆ

ಅಂಕಣ ಸಂಗಾತಿ ಶಿವಲೀಲಾ ಹುಣಸಗಿ ಅಕ್ಷರಯಾನ ಓದುವ ಮುನ್ನ: ಸಾಹಿತ್ಯವೆಂಬುದು ಬದುಕಿನ ಅನುಭವ, ಭಾವನೆ, ವಿಚಾರ ಮತ್ತು ಮೌಲ್ಯಗಳ ಅಭಿವ್ಯಕ್ತಿಯಾಗಿದೆ. ಪುಸ್ತಕಗಳು ಜ್ಞಾನದ ಬೆಳಕನ್ನು ಹರಡುವುದರ ಜೊತೆಗೆ ಮನುಷ್ಯನ ಚಿಂತನೆಗೆ ಹೊಸ ಆಯಾಮವನ್ನು ನೀಡುತ್ತವೆ. ಇಂತಹ ಸಾಹಿತ್ಯಿಕ ಸಂಪತ್ತನ್ನು ಓದುಗರಿಗೆ ಪರಿಚಯಿಸುವ, ಕೃತಿಗಳ ಒಳನೋಟವನ್ನು ತೆರೆದಿಡುವ ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸುವ ಆಶಯದೊಂದಿಗೆ ‘ಅಕ್ಷರಯಾನ’ ಎಂಬ ಅಂಕಣವನ್ನು ರೂಪಿಸಲಾಗಿದೆ.ಈ ಅಂಕಣದ ಮುಖ್ಯ ಉದ್ದೇಶ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಓದಿ, ಅವುಗಳ ಆಶಯ, ವಸ್ತು, ಭಾಷೆ, ಶೈಲಿ, ನಿರೂಪಣೆ, ಸೃಜನಶೀಲತೆ ಮತ್ತು ಸಾಮಾಜಿಕ ಪ್ರಸ್ತುತತೆಯನ್ನು ಅವಲೋಕಿಸುವುದಾಗಿದೆ. ಕೃತಿಯಲ್ಲಿನ ಸಾಹಿತ್ಯಿಕ ಸೌಂದರ್ಯ, ಜೀವನಾನುಭವ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಳಕಳಿ ಹಾಗೂ ವೈಚಾರಿಕ ಚಿಂತನೆಗಳನ್ನು ಓದುಗರಿಗೆ ಪರಿಚಯಿಸುವುದು ಇದರ ಪ್ರಮುಖ ಆಶಯವಾಗಿದೆ. ಲೇಖಕಿ ಶ್ರಾವಣದ ಪೋರಿಕವಿತೆಗಳೊಳಗೆ ಅರಳಿದ ಭಾವಲೋಕಕವನಸಂಕಲನ: ಶ್ರೀರಂಗ ಕಟ್ಟಿ, ಯಲ್ಲಾಪುರ ನೇರ ನಿಷ್ಠುರ ತನ್ನ ಸಿದ್ದಾಂತಗಳಿಗೆ ತಾನು ಬದ್ದ.ಎಲ್ಲರೊಂದಿಗೆ ನೀರಿನಂತೆ ಬೆರತು ಬಿಡುವ ಮನೋಭಾವದ ಸ್ನೇಹಮಯಿ,ಪಕ್ಕಾ ಉತ್ತರಕರ್ನಾಟಕದ ಗಂಡುಗಲಿ,ಖಡಕ್ ರೊಟ್ಟಿಯಂಗ ಮಾತು.ಮೃದು ಸ್ವಭಾವದ ಲೇಖಕರು. ಸದಾ ಹುಡುಗನಂತೆ ಲವಲವಿಕೆಯಿಂದ ಜೀವನದ ಎಲ್ಲ ಮಜಲುಗಳನ್ನು ಕಂಡಿರುವ ಹಿರಿಯರು. ನನಗೆ ಆತ್ಮೀಯ ಗುರುಗಳು.ವಾಯ್.ಟಿ.ಎಸ್.ಎಸ್.ನ ನಿವೃತ್ತ ಪ್ರಾಂಶುಪಾಲರು.ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು ರಚಿತ “ಶ್ರಾವಣ ಪೋರಿ” ಉತ್ಸುಕತೆಯ ಮತ್ತು ಪ್ರೀತಿಯ ಆಗರ.ಜೀವನದ ಎಲ್ಲ ಭಾವಗಳನ್ನು ಹಿಡಿದಿಟ್ಟಿರುವ ಕವನಸಂಕಲನ. ಕಾವ್ಯವೆಂದರೆ ಮನದಾಳದ ಭಾವನೆಗಳಿಗೆ ಅಕ್ಷರಗಳ ರೂಪ ಕೊಡುವ ಸೃಜನಶೀಲ ಅಭಿವ್ಯಕ್ತಿ. ಮನುಷ್ಯನ ಅಂತರಂಗದ ತಳಮಳ, ಪ್ರೀತಿಯ ಆರ್ದ್ರತೆ, ಬದುಕಿನ ಹುಡುಕಾಟ, ಸಂಬಂಧಗಳ ಸೂಕ್ಷ್ಮತೆ ಹಾಗೂ ಸಾಮಾಜಿಕ ವಾಸ್ತವಗಳ ಅನಾವರಣ ಕಾವ್ಯದ ವಿವಿಧ ಆಯಾಮಗಳು. ಇಂತಹ ಭಾವಲೋಕದ ಅನ್ವೇಷಣೆಗೆ ಓದುಗರನ್ನು ಆಹ್ವಾನಿಸುವ ಕವನಸಂಕಲನವೇ ಶ್ರೀರಂಗ ಕಟ್ಟಿ ಅವರ ‘ಶ್ರಾವಣದ ಪೋರಿ’.ಯಲ್ಲಾಪುರದ ಶ್ರೀರಂಗ ಕಟ್ಟಿ ಅವರ ಈ ಕವನಸಂಕಲನದಲ್ಲಿ ಒಟ್ಟು ೪೯ ಕವಿತೆಗಳಿವೆ. ದತ್ತಾತ್ರಯ ಗಾಂವ್ಕರ ಬೀಗಾರ ಅವರ ಮುನ್ನುಡಿ ಹಾಗೂ ಪ್ರಮೋದ ಹೆಗಡೆ ಅವರ ಬೆನ್ನುಡಿ ಕೃತಿಯ ಪರಿಚಯಕ್ಕೆ ಪೂರಕವಾಗಿವೆ. ಸಂಕಲನದ ಶೀರ್ಷಿಕೆಯೇ ಓದುಗರಲ್ಲಿ ಕುತೂಹಲವನ್ನು ಮೂಡಿಸುತ್ತದೆ. ಶ್ರಾವಣವೆಂದರೆ ಮಳೆ, ಹಸಿರು, ಪ್ರಕೃತಿಯ ಸೊಬಗು, ಹಬ್ಬ-ಹರಿದಿನಗಳ ಸಂಭ್ರಮ ಹಾಗೂ ಮನದೊಳಗೆ ಚಿಗುರುವ ಹೊಸ ಭಾವನೆಗಳ ಕಾಲ. ಅದರೊಂದಿಗೆ ‘ಪೋರಿ’ ಎಂಬ ಆಡುಮಾತಿನ ಪದವನ್ನು ಸೇರಿಸಿರುವುದು ಕವಿಯ ಸ್ಥಳೀಯ ಭಾಷಾ ಸಂವೇದನೆ ಮತ್ತು ಬದುಕಿನ ಸಹಜ ಅಭಿವ್ಯಕ್ತಿಯತ್ತ ಗಮನ ಸೆಳೆಯುತ್ತದೆ. ಈ ಶೀರ್ಷಿಕೆ ಪ್ರಕೃತಿ ಮತ್ತು ಮಾನವ ಭಾವನೆಗಳ ನಡುವಿನ ಸಂಬಂಧವನ್ನು ನೆನಪಿಸುತ್ತದೆ.ಶ್ರಾವಣದ ಪ್ರಕೃತಿ ಸೌಂದರ್ಯ ಮತ್ತು ಹೆಣ್ಣಿನ ಲವಲವಿಕೆ, ಸೊಬಗು, ಭಾವಸಂವೇದನೆಗಳನ್ನು ಒಟ್ಟಿಗೆ ಕಲ್ಪಿಸಿಕೊಳ್ಳುವ ಅವಕಾಶವನ್ನು ಇದು ನೀಡುತ್ತದೆ. ಸ್ಥಳೀಯ ಬದುಕಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಸೊಗಡು ಕಾವ್ಯದಲ್ಲಿ ಬೆರೆತಾಗ ಕವಿತೆಗಳು ಓದುಗರಿಗೆ ಇನ್ನಷ್ಟು ಹತ್ತಿರವಾಗುತ್ತವೆ.ಕವಿಯೊಬ್ಬರು ತಮ್ಮ ಅನುಭವಗಳನ್ನು ಕಾವ್ಯವಾಗಿಸುವಾಗ ವೈಯಕ್ತಿಕ ಭಾವನೆಗಳು ಸಾರ್ವತ್ರಿಕ ಅನುಭವಗಳಾಗಿ ರೂಪುಗೊಳ್ಳುತ್ತವೆ.. ಹೀಗಾಗಿ ಕಾವ್ಯವೆಂದರೆ ಹೃದಯದ ಮಿಡಿತಕ್ಕೆ ಅಕ್ಷರಗಳ ರೂಪ ಕೊಡುವ ಸೃಜನಶೀಲ ಕಲೆ.ಇಂತಹ ಭಾವವೈವಿಧ್ಯಕ್ಕೆ ಸಾಕ್ಷಿಯಾಗುವ ಕವನಸಂಕಲನ ಶ್ರೀರಂಗ ಕಟ್ಟಿ ಅವರ ‘ಶ್ರಾವಣದ ಪೋರಿ’. ಒಲವಿನ ಲತೆಯಾಗಿ ಅರಳಿದ ಕಾವ್ಯಪುಸ್ತಕ ಪುಟವ ತೆರೆದಿರುವೆನಲ್ಲಬರೆಯಲಾರೆಯ ಒಲವಗೀತೆಯ ಸೋಲ್ಲ?ನಿನ್ನ ರಾಗಕೆ ನನ್ನ ಭಾವ ಜೊತೆಯಾದರೆಉಕ್ಕಿಹರಿಯುವದಿಲ್ಲಿ ರಸ ಕಾವ್ಯ ಧಾರೆ!— ಒಲವ ಲತೆ ‘ಒಲವ ಲತೆ’ ಕವಿತೆಯ ಈ ಸಾಲುಗಳು ಪ್ರೀತಿಯ ಅಭಿವ್ಯಕ್ತಿಗೆ ಕಾವ್ಯಾತ್ಮಕ ರೂಪ ನೀಡುತ್ತವೆ. ಇಲ್ಲಿ ಕವಿಯ ಎದೆಯೇ ಪುಸ್ತಕ; ಅದರ ಪುಟಗಳು ಭಾವನೆಗಳನ್ನು ಹೊತ್ತು ನಿಂತಿವೆ. ಪ್ರೀತಿಯ ನಿವೇದನೆಗೆ ಹೃದಯವನ್ನು ಪುಸ್ತಕವಾಗಿ ರೂಪಿಸಿರುವುದು ಸುಂದರವಾದ ರೂಪಕ. ಪ್ರಿಯತಮೆಯ ರಾಗಕ್ಕೆ ತನ್ನ ಭಾವಗಳು ಜೊತೆಗೂಡಿದಾಗ ಕಾವ್ಯದ ಧಾರೆ ಉಕ್ಕಿಹರಿಯುತ್ತದೆ ಎಂಬ ಕಲ್ಪನೆ ಸಂಗೀತ ಮತ್ತು ಕಾವ್ಯಗಳ ನಡುವಿನ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ.ರಾಗ ಮತ್ತು ಭಾವಗಳ ಸಂಗಮವೇ ರಸಾನುಭವಕ್ಕೆ ಮೂಲ ಎಂಬ ಕಾವ್ಯತತ್ತ್ವ ಇಲ್ಲಿ ಧ್ವನಿಸುತ್ತದೆ. ಪ್ರೀತಿಯೊಂದು ಹೃದಯದಲ್ಲಿ ಮಾತ್ರ ಉಳಿಯದೆ, ಮತ್ತೊಂದು ಹೃದಯದ ಸ್ಪಂದನದೊಂದಿಗೆ ಬೆರೆತಾಗ ಸೃಜನಶೀಲ ಅಭಿವ್ಯಕ್ತಿಯಾಗುತ್ತದೆ. ಒಲವನ್ನು ಲತೆಯಾಗಿ ಕಲ್ಪಿಸಿಕೊಂಡ ಪ್ರೀತಿಯು ಸಹಜ ಬೆಳವಣಿಗೆಯನ್ನು ನೆನಪಿಸುತ್ತದೆ. ಹುಡುಕಾಟದೊಳಗಿನ ಕೃಷ್ಣಾನುಸಂಧಾನಈ ಅಂತರಂಗ ಶೂನ್ಯನ ಏತಕ್ಕೆ ಕೈಹಿಡಿದೆ?ಜಗಕೆ ಬೇಡದ ನನ್ನ ತುಟಿಯೊತ್ತಿ ಆಡಿಸಿದತನ್ನ ಕೊರಳ ನಾದವ ಧಾರೆಯೆರೆದು ಎನ್ನಕೊಳಲಾಗಿಸಿದ ಕೊಳಲ ಕೃಷ್ಣ ಎಲ್ಲಿಹನೆ ಸಖಿ?— ಹುಡುಕಾಟ ಈ ಕವಿತೆಯ ಸಾಲುಗಳಲ್ಲಿ ಅಂತರಂಗದ ಶೂನ್ಯತೆ, ಆತ್ಮನಿವೇದನೆ ಮತ್ತು ಕೃಷ್ಣನ ಕುರಿತಾದ ಅನ್ವೇಷಣೆ ಒಟ್ಟಾಗಿ ಬೆರೆತಿವೆ. ‘ಅಂತರಂಗ ಶೂನ್ಯ’ ಎಂಬ ಪದಪ್ರಯೋಗ ಮನಸ್ಸಿನ ಖಾಲಿತನವನ್ನು ಅಭಿವ್ಯಕ್ತಿಸಿದರೆ, ‘ಕೊಳಲಾಗಿಸಿದ ಕೊಳಲ ಕೃಷ್ಣ’ ಎಂಬ ರೂಪಕ ಕವಿತೆಗೆ ಆಧ್ಯಾತ್ಮಿಕ ಆಯಾಮವನ್ನು ನೀಡುತ್ತದೆ.ಕೊಳಲಿಗೆ ತನ್ನದೇ ಆದ ನಾದವಿಲ್ಲ; ಕೃಷ್ಣನ ಉಸಿರು ಅದರಲ್ಲಿ ಪ್ರವೇಶಿಸಿದಾಗ ಅದು ಸಂಗೀತದ ಮಾಧ್ಯಮವಾಗುತ್ತದೆ. ಇದೇ ಭಾವವನ್ನು ಕವಿ ತನ್ನ ಬದುಕಿಗೆ ಅನ್ವಯಿಸಿಕೊಂಡಂತೆ ಕಾಣುತ್ತದೆ. ಜಗತ್ತಿಗೆ ಬೇಡದವನಾಗಿದ್ದ ತನ್ನ ಅಂತರಂಗಕ್ಕೆ ನಾದವನ್ನು ತುಂಬಿ, ತನ್ನನ್ನು ಅಭಿವ್ಯಕ್ತಿಯ ಸಾಧನವನ್ನಾಗಿಸಿದ ಕೃಷ್ಣನನ್ನು ಹುಡುಕುವ ಪ್ರಶ್ನೆ ಇಲ್ಲಿ ಕೊಳಲು ಮತ್ತು ಕೃಷ್ಣನ ಪ್ರತಿಮೆ ಭಕ್ತಿಸಾಹಿತ್ಯದ ಪರಿಚಿತ ಸಂಕೇತಗಳಾದರೂ, ಅವುಗಳನ್ನು ತನ್ನ ಅಂತರಂಗದ ಶೂನ್ಯತೆಯೊಂದಿಗೆ ಜೋಡಿಸಿರುವುದು ಕವಿತೆಗೆ ವೈಯಕ್ತಿಕ ಭಾವಸ್ಪರ್ಶ ನೀಡುತ್ತದೆ. ‘ಕೃಷ್ಣ ಎಲ್ಲಿಹನೆ ಸಖಿ?’ ಎಂಬ ಪ್ರಶ್ನೆ ಕೇವಲ ವ್ಯಕ್ತಿಯ ಹುಡುಕಾಟವಲ್ಲ; ತನ್ನ ಬದುಕಿಗೆ ಅರ್ಥ ತುಂಬಿದ ಶಕ್ತಿಯ ಅನ್ವೇಷಣೆಯೂ ಆಗಿರಬಹುದು. ಈ ಕಾರಣದಿಂದ ಕವಿತೆ ಪ್ರೇಮಭಾವದಿಂದ ಆಧ್ಯಾತ್ಮಿಕ ಹುಡುಕಾಟದವರೆಗೆ ವಿಸ್ತರಿಸುವ ಸಾಧ್ಯತೆಯನ್ನು ಹೊಂದಿದೆ. ಹಣತೆಯ ರೂಪಕದಲ್ಲಿ ಬದುಕಿನ ಸಾರ್ಥಕತೆಮಣ್ಣಲ್ಲಿಹುಟ್ಟಿ, ಮಣ್ಣಲ್ಲೆ ಬೆಳಗಿಮಣ್ಣಾಗಿ ಹೋಗುವ ನಾನೊಂದು ಹಣತೆಎಣ್ಣೆಬತ್ತಿಗಳ ಎನ್ನ ಮಡಿಲಲ್ಲಿ ಧರಿಸಿಬೆಳಗುವ ಕಾಯಕಕೆ ಕಾಯವನಿತ್ತೆ— ನಾನೊಂದು ಹಣತೆ ಈ ಕವಿತೆಯು ಸಂಕಲನದ ತಾತ್ವಿಕ ಚಿಂತನೆಯ ಪ್ರಮುಖ ಉದಾಹರಣೆಯಾಗಿದೆ. ಮಣ್ಣಿನಲ್ಲಿ ಹುಟ್ಟಿ, ಮಣ್ಣಿನಲ್ಲೇ ಬೆಳೆಯುತ್ತ, ಕೊನೆಗೆ ಮಣ್ಣಾಗುವ ಮನುಷ್ಯನ ಬದುಕನ್ನು ಹಣತೆಯ ರೂಪಕದ ಮೂಲಕ ಕವಿ ಪರಿಚಯಿಸುತ್ತಾರೆ.ಮಣ್ಣಿನ ಹಣತೆ ತನ್ನ ಅಸ್ತಿತ್ವವನ್ನು ಬೆಳಕಿನ ಮೂಲಕ ಸಾರ್ಥಕಗೊಳಿಸಿಕೊಳ್ಳುತ್ತದೆ. ಎಣ್ಣೆ ಮತ್ತು ಬತ್ತಿಯನ್ನು ಮಡಿಲಲ್ಲಿ ಧರಿಸಿ ಉರಿಯುವ ಹಣತೆ ತನ್ನ ಸುತ್ತಲಿನ ಕತ್ತಲೆಯನ್ನು ದೂರಮಾಡುತ್ತದೆ. ಇಲ್ಲಿ ಬೆಳಗುವ ಕಾಯಕವು ಬದುಕಿನ ಉದ್ದೇಶದ ಸಂಕೇತವಾಗಿ ಕಾಣುತ್ತದೆ.ಮನುಷ್ಯನ ಬದುಕೂ ಅಷ್ಟೇ. ಜನನ ಮತ್ತು ಮರಣಗಳ ನಡುವಿನ ಅಲ್ಪಾವಧಿಯಲ್ಲಿ ತಾನು ಇತರರಿಗೆ ಏನು ನೀಡಬಲ್ಲೆ ಎಂಬುದೇ ಮುಖ್ಯವಾದ ಪ್ರಶ್ನೆ. ತನ್ನ ಬದುಕನ್ನು ಪರರ ಒಳಿತಿಗಾಗಿ ವಿನಿಯೋಗಿಸುವ ಮನೋಭಾವವನ್ನು ಈ ರೂಪಕ ನೆನಪಿಸುತ್ತದೆ. ಹಣತೆಯ ದೇಹ ಸುಟ್ಟುಹೋದರೂ ಅದರ ಬೆಳಕು ಸುತ್ತಲಿನ ಕತ್ತಲೆಯನ್ನು ದೂರಮಾಡುತ್ತದೆ. ಹಾಗೆಯೇ ವ್ಯಕ್ತಿಯ ಬದುಕು ಮುಗಿದರೂ ಅವನ ಒಳ್ಳೆಯ ಕೆಲಸಗಳು ಸಮಾಜದಲ್ಲಿ ಉಳಿಯಬಲ್ಲವು.ಸರಳವಾದ ಪದಗಳಲ್ಲಿ ಬದುಕಿನ ಅನಿತ್ಯತೆ ಮತ್ತು ಸಾರ್ಥಕತೆಯನ್ನು ಒಟ್ಟಿಗೆ ಹಿಡಿದಿಡುವ ಪ್ರಯತ್ನ ಈ ಕವಿತೆಯ ವೈಶಿಷ್ಟ್ಯವಾಗಿದೆ. ಶ್ರಾವಣದ ಸೊಬಗಿನಲ್ಲಿ ಅರಳಿದ ಪ್ರಕೃತಿಕಾವ್ಯಹಸಿರು ಬಣ್ಣದ ಸೀರಿ ಉಟ್ಟುಜರೀ ಅಂಚಿನ ಕುಬುಸ ತೊಟ್ಟುವನರಾಜಿ ಪರಿಮಳದ ಗುಂಗು ಹಿಡಿಸಿಟ್ಟುತಲೀ ತೂಗ್ತಾ ನಿಂತಾಳೋ ವಲ್ಲರಿ ಇದೆಂಥ ವೈಯ್ಯಾರ ಶ್ರಾವಣದ ಸೆಳಕಿಗೆಎಂಥ ಬಡಿವಾರ ಈ ಸಡಗರದ ಬೆಳಕಿಗೆರಂಗಿನ ಮಳೆಬಿಲ್ಲು ಮುಡಿದಾ ಕಿನ್ನರಿಇತಿಹಾಸ ಮರಸ್ಯಾಳೊ ನಗೆ ಹೂವ ಬೀರಿ— ಶ್ರಾವಣದ ಪೋರಿ ಈ ಸಾಲುಗಳು ಕವಿಯ ಪ್ರಕೃತಿಪ್ರೇಮ ಮತ್ತು ಕಲ್ಪನಾಶಕ್ತಿಯನ್ನು ಪರಿಚಯಿಸುತ್ತವೆ. ಹಸಿರು ಸೀರೆ, ಜರಿಯಂಚಿನ ಕುಬುಸ, ವನರಾಜಿಯ ಪರಿಮಳ, ತಲೆದೂಗುವ ವಲ್ಲರಿ—ಇವೆಲ್ಲವೂ ಪ್ರಕೃತಿಯನ್ನು ಸುಂದರ ಯುವತಿಯ ರೂಪದಲ್ಲಿ ಚಿತ್ರಿಸುತ್ತವೆ.ಇಲ್ಲಿ ಪ್ರಕೃತಿಗೆ ಮಾನವೀಯ ರೂಪವನ್ನು ನೀಡುವ ಮಾನವೀಕರಣ ಅಲಂಕಾರದ ಸೊಗಡು ಕಾಣುತ್ತದೆ. ಹಸಿರು ಸೀರೆ ಉಟ್ಟ ಹೆಣ್ಣಿನಂತೆ ವಲ್ಲರಿ ಕಣ್ಣೆದುರು ನಿಲ್ಲುತ್ತಾಳೆ. ಮಳೆಬಿಲ್ಲನ್ನು ಮುಡಿದ ಕಿನ್ನರಿಯಾಗಿ ಶ್ರಾವಣವನ್ನು ಕಲ್ಪಿಸಿರುವುದು ಪ್ರಕೃತಿಯ ಸೌಂದರ್ಯವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುತ್ತದೆ.ಕವಿಯ ಭಾಷೆಯಲ್ಲಿ ಉತ್ತರ ಕನ್ನಡದ ಆಡುಮಾತಿನ ಸೊಗಡು ಬೆರೆತಿರುವುದು ಗಮನಾರ್ಹ. ‘ತಲೀ ತೂಗ್ತಾ’, ‘ಮರಸ್ಯಾಳೊ’ ಮುಂತಾದ ಪ್ರಯೋಗಗಳು ಆಡುಮಾತಿನ ಸಹಜತೆಯನ್ನು ಕಾಪಾಡುತ್ತವೆ. ಇಂತಹ ಭಾಷಾಪ್ರಯೋಗಗಳು ಕವಿತೆಗೆ ಪ್ರಾದೇಶಿಕ ನೆಲೆಯನ್ನೂ ಜೀವಂತಿಕೆಯನ್ನೂ ನೀಡುತ್ತವೆ.ಶ್ರಾವಣವನ್ನು ಕೇವಲ ಮಳೆಗಾಲವಾಗಿ ನೋಡದೆ, ಸಿಂಗಾರಗೊಂಡ ಹೆಣ್ಣಿನಂತೆ ಚಿತ್ರಿಸಿರುವುದು ಈ ಕವಿತೆಯ ಕಲ್ಪನಾವೈಶಿಷ್ಟ್ಯ. ಪ್ರಕೃತಿಯ ಸೌಂದರ್ಯ ಮತ್ತು ಹೆಣ್ಣಿನ ವೈಯ್ಯಾರ ಒಂದರೊಳಗೊಂದು ಬೆರೆತು ಅರ್ಥಪೂರ್ಣ ವಾಗಿದೆ. ಶವದ ಸ್ವಗತದಲ್ಲಿ ಬದುಕಿನ ತಾತ್ವಿಕತೆಮಸಣವೆಂಬುದು ಮೌನ ಶಾಂತಿಯ ಸದನದ್ವೇಷ, ಅಸೂಯೆಗಳ ಹೊರತಾದ ತಾಣಗೋರಿಯಲಿ ಮಲಗಿ ನಕ್ಷತ್ರಗಳ ನೋಡುವೆಮಳೆಯಲ್ಲಿ ನೆನೆಯುತ್ತ ಹರುಷಗೊಳ್ಳ ಬಯಸುವೆ— ಶವದ ಸ್ವಗತ ಈ ಕವಿತೆಯ ಸಾಲುಗಳಲ್ಲಿ ಬದುಕು ಮತ್ತು ಸಾವಿನ ಕುರಿತದ್ದು. ಸಾಮಾನ್ಯವಾಗಿ ಮಸಣವೆಂದರೆ ಭಯ, ದುಃಖ ಮತ್ತು ಅಂತ್ಯದ ಸಂಕೇತ. ಆದರೆ ಕವಿ ಅದನ್ನು ‘ಮೌನ ಶಾಂತಿಯ ಸದನ’ ಎಂದು ಪರಿಭಾವಿಸುತ್ತಾರೆ. ದ್ವೇಷ ಮತ್ತು ಅಸೂಯೆಗಳಿಲ್ಲದ ತಾಣವೆಂಬ ಕಲ್ಪನೆ ಬದುಕಿನ ಸಂಘರ್ಷಗಳ ಕುರಿತು ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ.ಮನುಷ್ಯ ಬದುಕಿರುವವರೆಗೆ ಸಂಬಂಧಗಳ ಸಂಘರ್ಷ, ಸ್ವಾರ್ಥ, ಅಸೂಯೆ ಮತ್ತು ದ್ವೇಷಗಳ ನಡುವೆ ಸಿಲುಕಿಕೊಳ್ಳುತ್ತಾನೆ. ಆದರೆ ಸಾವಿನ ನಂತರ ಈ ಭೇದಗಳೆಲ್ಲ ಅರ್ಥ ಕಳೆದುಕೊಳ್ಳುತ್ತವೆ. ಈ ವೈರುಧ್ಯವನ್ನು ಕವಿತೆ ಪರೋಕ್ಷವಾಗಿ ನಮ್ಮ ಮುಂದಿಡುತ್ತದೆ.‘ಗೋರಿಯಲಿ ಮಲಗಿ ನಕ್ಷತ್ರಗಳ ನೋಡುವೆ’ ಎಂಬ ಸಾಲು ವಿಶೇಷವಾದ ಕಲ್ಪನೆಯನ್ನು ಒಳಗೊಂಡಿದೆ. ಮರಣದ ಮೌನದೊಳಗಿಂದಲೂ ನಕ್ಷತ್ರಗಳ ಸೌಂದರ್ಯವನ್ನು ಆಸ್ವಾದಿಸುವ ಹಂಬಲ ವ್ಯಕ್ತವಾಗುತ್ತದೆ. ‘ಮಳೆಯಲ್ಲಿ ನೆನೆಯುತ್ತ ಹರುಷಗೊಳ್ಳ ಬಯಸುವೆ’ ಎಂಬ ಸಾಲಿನಲ್ಲಿ ಪ್ರಕೃತಿಯೊಂದಿಗಿನ ಬೆಸುಗೆಯ ಹಂಬಲವಿದೆ.ಇಲ್ಲಿ ಸಾವು ಕೇವಲ ಅಂತ್ಯವಲ್ಲ; ಬದುಕಿನ ಜಂಜಾಟಗಳಿಂದ ಮುಕ್ತವಾದ ಸ್ಥಿತಿಯ ರೂಪಕವಾಗಿಯೂ ಕಾಣುತ್ತದೆ. ಬದುಕಿರುವಾಗಲೇ ಮನುಷ್ಯ ದ್ವೇಷವನ್ನು ಬಿಟ್ಟು ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯನ್ನು ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಈ ಕವಿತೆಯಿಂದ ಗ್ರಹಿಸಬಹುದು. ಮರಣದ ಚಿತ್ರಣದ ಮೂಲಕ ಬದುಕಿನ ಮೌಲ್ಯವನ್ನು ಪ್ರಶ್ನಿಸುವುದು ಕವಿತೆಯ ತಾತ್ವಿಕ ಶಕ್ತಿಯಾಗಿದೆ. ಭಾಷೆ, ರೂಪಕ ಮತ್ತು ಭಾವ ಸಂವೇದನೆಯನ್ನು ಕವಿತೆಗಳ ಆಯ್ದ ಸಾಲುಗಳನ್ನು ಗಮನಿಸಿದಾಗ ಶ್ರೀರಂಗ ಕಟ್ಟಿ ಅವರ ಕಾವ್ಯಾಭಿವ್ಯಕ್ತಿಯಲ್ಲಿ ಕೆಲವು ವಿಶಿಷ್ಟ ಅಂಶಗಳು ಗೋಚರಿಸುತ್ತವೆ.ಮೊದಲನೆಯದಾಗಿ ಕವಿ ಭಾವನೆಗಳನ್ನು ನೇರವಾಗಿ ಹೇಳುವುದಕ್ಕಿಂತ ರೂಪಕಗಳ ಮೂಲಕ ಅಭಿವ್ಯಕ್ತಿಸಲು ಪ್ರಯತ್ನಿಸುತ್ತಾರೆ. ಎದೆ ಪುಸ್ತಕವಾಗುವುದು, ಮನುಷ್ಯ ಕೊಳಲಾಗುವುದು, ಬದುಕು ಹಣತೆಯಾಗುವುದು, ಶ್ರಾವಣದ ಪ್ರಕೃತಿ ಸಿಂಗಾರಗೊಂಡ ಹೆಣ್ಣಾಗುವುದು ಹಾಗೂ ಮಸಣ ಶಾಂತಿಯ ಸದನವಾಗುವುದು—ಇವೆಲ್ಲವೂ ಕಾವ್ಯಕ್ಕೆ ಚಿತ್ರಾತ್ಮಕತೆಯನ್ನು ನೀಡುವ ಪ್ರಯತ್ನಗಳಾಗಿವೆ. ಎರಡನೆಯದಾಗಿ, ಪ್ರೇಮ, ಭಕ್ತಿ, ಪ್ರಕೃತಿ ಮತ್ತು ತಾತ್ವಿಕ ಚಿಂತನೆಗಳು ಒಂದೇ ಸಂಕಲನದಲ್ಲಿ ವಿಭಿನ್ನ ಭಾವಲೋಕಗಳನ್ನು ನಿರ್ಮಿಸುತ್ತವೆ. ‘ಒಲವ ಲತೆ’ಯಲ್ಲಿ ಪ್ರೇಮದ ಮಧುರತೆ, ‘ಹುಡುಕಾಟ’ದಲ್ಲಿ ಆಧ್ಯಾತ್ಮಿಕ ಅನ್ವೇಷಣೆ, ‘ನಾನೊಂದು ಹಣತೆ’ಯಲ್ಲಿ ಬದುಕಿನ ಸಾರ್ಥಕತೆ, ‘ಶ್ರಾವಣದ ಪೋರಿ’ಯಲ್ಲಿ ಪ್ರಕೃತಿಯ ವೈಭವ ಹಾಗೂ ‘ಶವದ ಸ್ವಗತ’ದಲ್ಲಿ ಸಾವಿನ ಮೂಲಕ ಬದುಕನ್ನು ಅರ್ಥೈಸುವ ಪ್ರಯತ್ನ ಕಾಣುತ್ತದೆ. ಮೂರನೆಯದಾಗಿ, ಪ್ರಾದೇಶಿಕ ಭಾಷೆಯ ಬಳಕೆ ಕವಿಯ ಅಭಿವ್ಯಕ್ತಿಗೆ ಸಹಜತೆಯನ್ನು ನೀಡುತ್ತದೆ. ಕಾವ್ಯವು ಜನರ ಬದುಕಿನಿಂದ ದೂರವಾಗದೆ, ಅವರ ಮಾತಿನ ಲಯ ಮತ್ತು ಸಂಸ್ಕೃತಿಯ ಸೊಗಡನ್ನು ಒಳಗೊಂಡಾಗ ಓದುಗರಿಗೆ ಹೆಚ್ಚು ಹತ್ತಿರವಾಗುತ್ತದೆ.ಕವಿತೆಗಳ ಪೂರ್ಣಪಾಠವನ್ನು ಗಮನಿಸಿದಾಗ ಮಾತ್ರ ಛಂದಸ್ಸು, ಪ್ರಾಸ, ಪದವಿನ್ಯಾಸ, ಲಯ ಮತ್ತು ಅಲಂಕಾರಗಳ ಬಳಕೆಯ ಕುರಿತು ಸಮಗ್ರ ನಿರ್ಣಯಕ್ಕೆ ಬರಲು ಸಾಧ್ಯ. ಆದರೂ ಇಲ್ಲಿ ನೀಡಿರುವ ಸಾಲುಗಳು ಕವಿಯ ರೂಪಕಪ್ರಿಯತೆ, ಭಾವಸಂವೇದನೆ ಮತ್ತು ವಿಭಿನ್ನ ವಿಷಯಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸುವ ಪ್ರಯತ್ನವನ್ನು ಪರಿಚಯಿಸುತ್ತವೆ. ಒಟ್ಟಾರೆ ಹೇಳುವುದಾದರೆ,ಶ್ರೀರಂಗ ಕಟ್ಟಿ ಅವರ ‘ಶ್ರಾವಣದ ಪೋರಿ’ ಕವನಸಂಕಲನದ ಕವಿತೆಗಳು ಕಾವ್ಯದ ವಿಭಿನ್ನ ಮುಖಗಳನ್ನು ಪರಿಚಯಿಸುತ್ತವೆ. ಪ್ರೀತಿಯ ಆರ್ದ್ರತೆ, ಅಂತರಂಗದ ಶೂನ್ಯತೆ, ಬದುಕಿನ ಸಾರ್ಥಕತೆ, ಪ್ರಕೃತಿಯ ಸೌಂದರ್ಯ ಮತ್ತು ಮರಣದ ತಾತ್ವಿಕತೆ,ಅಸ್ತಿತ್ವ,—ಇವುಗಳೆಲ್ಲವೂ ಕವಿಯ ಭಾವಜಗತ್ತಿನ ವಿಭಿನ್ನ ನೆಲೆಗಳಾಗಿ ಕಾಣಿಸಿಕೊಳ್ಳುತ್ತವೆ.ಕವಿತೆ ಎಂದರೆ ಕೇವಲ ಪದಗಳ ಜೋಡಣೆಯಲ್ಲ;

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ನೇರ ನಿಷ್ಠುರ ಪ್ರಾಮಾಣಿಕ ರಾಜಕೀಯ ನೇತಾರ – ಕೆ ಎಚ್ ರಂಗನಾಥ ಕರ್ನಾಟಕದ ಸಮಾಜವಾದ ಚಿಂತನೆಯಲ್ಲಿ ಪ್ರಮುಖವಾಗಿ ಕಂಡು ಬರುವ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳ ಸಮನ್ವಯಕ ದಿಟ್ಟ ರಾಜಕಾರಣಿ  ಶತಮಾನದ ಸಾತ್ವಿಕ ಶರಣ ದಿವಂಗತ ಕೆ ಏಚ್ ರಂಗನಾಥ. ಕೆ. ಎಚ್. ರಂಗನಾಥ್ (ಕೊಡಗು ಹೊಸಹಳ್ಳಿ ರಂಗನಾಥ್) ಅವರು ಕರ್ನಾಟಕದ ಅತ್ಯಂತ ಪ್ರಾಮಾಣಿಕ, ನೇರ ನಡೆ ನುಡಿಯ ಹಿರಿಯ ರಾಜಕೀಯ ಧುರೀಣರು ಮತ್ತು ಮಾಜಿ ಸಚಿವರಾಗಿದ್ದರು. ಇವರು ಡಿ. ದೇವರಾಜ ಅರಸು, ಎಸ್. ಬಂಗಾರಪ್ಪ ಮತ್ತು ಎಸ್. ಎಂ. ಕೃಷ್ಣ ಅವರ ಸಚಿವ ಸಂಪುಟಗಳಲ್ಲಿ ಪ್ರಮುಖ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜನನ ಹಾಗೂ ಹಿನ್ನೆಲೆ:  ಇವರು 1926ರ ಅಕ್ಟೋಬರ್ 20 ರಂದು ಜನಿಸಿದರು. ಇತ್ತೀಚೆಗೆ (ಅಕ್ಟೋಬರ್ 2026) ಇವರ ಜನ್ಮ ಶತಮಾನೋತ್ಸವವನ್ನು ಸ್ಮರಿಸಲಾಗಿದೆ. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಜಗಳೂರಿನಲ್ಲಿ ಪಡೆದಿದ್ದರು. ರಾಜಕೀಯ ಕ್ಷೇತ್ರ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸತತ ಆರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಮುಖ ಹುದ್ದೆಗಳು: ಕರ್ನಾಟಕ ವಿಧಾನಸಭೆಯ ಸ್ಪೀಕರ್ (ಸಭಾಪತಿ) ಆಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು. ಹಿರಿಯ ರಾಜಕಾರಣಿ ಕೆ. ಎಚ್. ರಂಗನಾಥ್ ಅವರು ೧೯೮೧ ರಿಂದ ೧೯೮೩ ರವರೆಗೆ ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾಗಿ (ಸ್ಪೀಕರ್) ಕಾರ್ಯನಿರ್ವಹಿಸಿದ್ದರು.  ಇದರೊಂದಿಗೆ ೧೯೮೪ ರಿಂದ ೧೯೮೯ರ ಅವಧಿಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ (MP) ಸೇವೆ ಸಲ್ಲಿಸಿದ್ದರು. ವ್ಯಕ್ತಿತ್ವ: ಸಮಾಜವಾದಿ ಆಂದೋಲನದಿಂದ ಬಂದ ಇವರು, ಕರ್ನಾಟಕ ರಾಜಕೀಯದ ‘ಭೀಷ್ಮ’ ಎಂದೇ ಕರೆಯಲ್ಪಡುತ್ತಿದ್ದರು. ಅವರ ರಾಜಕೀಯ ಜೀವನ ಕೆ. ಎಚ್. ರಂಗನಾಥ್ ಅವರ ರಾಜಕೀಯ ಜೀವನವು ಶುದ್ಧ ಹಸ್ತ, ಪ್ರಾಮಾಣಿಕತೆ ಮತ್ತು ತತ್ವಬದ್ಧ ಸಮಾಜವಾದಿ ಸಿದ್ಧಾಂತಕ್ಕೆ ಹೆಸರಾಗಿತ್ತು. ಸ್ವಹಿತಾಸಕ್ತಿಗಿಂತ ಜನಹಿತಕ್ಕೆ ಪ್ರಾಮುಖ್ಯತೆ ನೀಡಿದ ಅವರು ಕರ್ನಾಟಕ ರಾಜಕೀಯದಲ್ಲಿ ಅತ್ಯಂತ ಗೌರವಾನ್ವಿತ ನಾಯಕರಾಗಿದ್ದರು. ಅವರ ಸುದೀರ್ಘ ರಾಜಕೀಯ ಪಯಣದ ಪ್ರಮುಖ ಘಟ್ಟಗಳು: ೧. ಸ್ವಾತಂತ್ರ್ಯ ಹೋರಾಟ ಮತ್ತು ಆರಂಭಿಕ ಜೀವನ • ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳಲ್ಲೇ ರಾಷ್ಟ್ರೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರು. • ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬ್ರಿಟಿಷ್ ಸರ್ಕಾರದಿಂದ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. • ಆರಂಭದಲ್ಲಿ ಎಪಿಎಂಸಿ ಕ್ಲರ್ಕ್ ಆಗಿ ಹಾಗೂ ಜಿಲ್ಲಾ ಬೋರ್ಡ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ೨. ಸಮಾಜವಾದಿ ಆಂದೋಲನದಿಂದ ಕಾಂಗ್ರೆಸ್‌ವರೆಗೆ • ರಂಗನಾಥ್ ಅವರು ತಮ್ಮ ರಾಜಕೀಯ ಜೀವನವನ್ನು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (PSP) ಮೂಲಕ ಆರಂಭಿಸಿದರು. ಪ್ರಸಿದ್ಧ ಸಮಾಜವಾದಿ ನಾಯಕ ಡಾ ರಾಮಮನೋಹರ ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡರ ಒಡನಾಡಿಯಾಗಿದ್ದರು. • ೧೯೬೯ರಲ್ಲಿ ಅವರು ಅಧಿಕೃತವಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿದರು. • ಪಕ್ಷದಲ್ಲಿನ ಅವರ ನಿಷ್ಠೆ ಮತ್ತು ಸಂಘಟನಾ ಚಾತುರ್ಯವನ್ನು ಗುರುತಿಸಿ, ೧೯೭೨-೭೪ ಮತ್ತು ೧೯೮೫-೮೬ರ ಅವಧಿಯಲ್ಲಿ ಕೆಪಿಸಿಸಿ (KPCC) ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ೩. ಶಾಸಕರಾಗಿ ಮತ್ತು ಸಂಸದರಾಗಿ ಸುದೀರ್ಘ ಸೇವೆ • ವಿಧಾನಸಭೆ ಪ್ರವೇಶ: ೧೯೬೭ರಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. • ಹಿರಿಯೂರು ಕ್ಷೇತ್ರದ ಭದ್ರಕೋಟೆ: ತದನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು (ಪರಿಶಿಷ್ಟ ಜಾತಿ ಮೀಸಲು) ಕ್ಷೇತ್ರವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು, ಅಲ್ಲಿಂದ ಸತತ ೬ ಬಾರಿ ಶಾಸಕರಾಗಿ ದಾಖಲೆ ಬರೆದರು. • ಲೋಕಸಭಾ ಸದಸ್ಯರಾಗಿ: ೧೯೮೪ ರಿಂದ ೧೯೮೯ರ ಅವಧಿಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ (MP) ಆಯ್ಕೆಯಾಗಿ ದೆಹಲಿ ರಾಜಕಾರಣದಲ್ಲೂ ಗುರುತಿಸಿಕೊಂಡರು. ೪. ಸಚಿವರಾಗಿ ನಿಭಾಯಿಸಿದ ಪ್ರಮುಖ ಖಾತೆಗಳು  ಅವರು ನಿರ್ವಹಿಸಿದ ಪ್ರಮುಖ ಇಲಾಖೆಗಳೆಂದರೆ: • ಸಹಕಾರ ಮತ್ತು ಕೃಷಿ ಇಲಾಖೆ • ಅರಣ್ಯ ಇಲಾಖೆ • ಕಾನೂನು ಮತ್ತು ಸಂಸದೀಯ ವ್ಯವಹಾರಗಳು • ಶಿಕ್ಷಣ ಇಲಾಖೆ • ಗೃಹ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ (PWD) • ಸಾರಿಗೆ ಇಲಾಖೆ ೫. ವಿಧಾನಸಭೆಯ ದಕ್ಷ ಸಭಾಪತಿ (Speaker) ೧೯೮೧ ರಿಂದ ೧೯೮೩ರ ಅವಧಿಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಸದನದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಆಡಳಿತ ಮತ್ತು ವಿರೋಧ ಪಕ್ಷಗಳೆರಡನ್ನೂ ಸಮಾನವಾಗಿ ನಡೆಸಿ ಅತ್ಯುತ್ತಮ ಸಂಸದೀಯ ಪಟು ಎನಿಸಿಕೊಂಡರು. ಕೆ. ಎಚ್. ರಂಗನಾಥ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಅಪರೂಪದ ರಾಜಕಾರಣಿ. ಇದೇ ಕಾರಣಕ್ಕೆ ಇವರನ್ನು ಇಂದಿಗೂ ಕರ್ನಾಟಕ ರಾಜಕೀಯದ ಮುತ್ಸದ್ದಿ ಎಂದು ಗೌರವಿಸಲಾಗುತ್ತದೆ. ಕೆ. ಎಚ್. ರಂಗನಾಥ್: ನಮ್ಮ ಕಾಲದ ಭೀಷ್ಮ –  — ನನಗೆ ಪ್ರಿಯರಾಗಿದ್ದ ಶಾಂತವೇರಿ ಗೋಪಾಲಗೌಡರಂಥವರಿಗೂ ಇವರು ನನಗೆ  ಪ್ರಿಯರಾಗಿದ್ದರರು  ಎಂದು ಡಾ ಯು ಆರ್ ಅನಂತಮೂರ್ತಿ ಹೇಳಿಕೊಂಡಿದ್ದರು. ನಿಧನ: ಇವರು ಕಿಡ್ನಿ ಸಮಸ್ಯೆಯಿಂದಾಗಿ ೨೦೧೧ರ ಅಕ್ಟೋಬರ್ ೧೮ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ೮೬ನೇ ವಯಸ್ಸಿನಲ್ಲಿ ನಿಧನರಾದರು. ಇವರ ಆತ್ಮೀಯರಲ್ಲಿ ಗುರುತಿಸಿಕೊಂಡ ಶ್ರೀ ಮಹಾದೇವ ಹೊರಟ್ಟಿ ಅವರು ಲಿಂಗೈಕ್ಯ ಶ್ರೀ ಕೆ ಏಚ್ ರಂಗನಾಥ ಅವರ ಬಗ್ಗೆ ನನಗೆ ಅತ್ಯಂತ ಉಪಯುಕ್ತ  ಮಾಹಿತಿ ನೀಡಿದ್ದಾರೆ. ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಮಾದರಿ ರಾಜಕಾರಣಿ ಈಗ ನೆನಪು ಮಾತ್ರ. ಇವರಲ್ಲಿ ಅಗಾಧವಾದ ಬುದ್ಧ ಪ್ರಜ್ಞೆ ಮತ್ತು ಬಸವ ಚಿಂತನೆಯ ತುಡಿತವಿತ್ತು. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top